ETV Bharat / headlines

ಸಂಜೆ ಸಚಿವರು, ಅಧಿಕಾರಿಗಳ ಜತೆ ಸಿಎಂ ಸಭೆ ; ಲಾಕ್​ಡೌನ್ ವಿಸ್ತರಣೆ ನಿರ್ಧಾರ ಸಾಧ್ಯತೆ - CM Yadiyurappa

ಈಗಾಗಲೇ 14 ದಿನದ ಮೊದಲ ಲಾಕ್​ಡೌನ್ ಜಾರಿಯಲ್ಲಿದ್ದು, ಅದು ಮೇ 24ಕ್ಕೆ ಕೊನೆಗೊಳ್ಳಲಿದೆ. ಸದ್ಯ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಾರದೆ ಇದ್ದರೂ ಹರಡುವ ತೀವ್ರತೆಯಲ್ಲಿ ನಿಯಂತ್ರಣ ಸಾಧಿಸುವಲ್ಲಿ ಯಶ ಕಂಡಿದೆ. ಸೋಂಕಿನ ಪ್ರಮಾಣ ಇಳಿಕೆಯತ್ತ ಮುಖ ಮಾಡಿವೆ..

ಸಿಎಂ ಸಭೆ
ಸಿಎಂ ಸಭೆ
author img

By

Published : May 21, 2021, 3:38 PM IST

ಬೆಂಗಳೂರು : ರಾಜ್ಯದಲ್ಲಿ ಲಾಕ್​ಡೌನ್ ವಿಸ್ತರಣೆ ಕುರಿತಂತೆ ಇಂದು ಸಂಜೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದು, ಮುಂದಿನ ಎರಡು ವಾರ ಲಾಕ್​ಡೌನ್ ಮುಂದುವರೆಸುವುದು ಬಹುತೇಕ ಖಚಿತ ಎನ್ನಲಾಗಿದೆ.

ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಸಂಜೆ 6 ಗಂಟೆಗೆ ಕೋವಿಡ್ ನಿಯಂತ್ರಣ ಕಾರ್ಯಗಳ ಜವಾಬ್ದಾರಿ ಪಡೆದಿರುವ ಡಿಸಿಎಂ ಅಶ್ವತ್ಥ್ ನಾರಾಯಣ್, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಆರ್‌.ಅಶೋಕ್, ಡಾ.ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.

ಸಭೆಯ ಬಹುಮುಖ್ಯ ಉದ್ದೇಶ ರಾಜ್ಯದಲ್ಲಿ ಲಾಕ್​ಡೌನ್ ಮುಂದುವರೆಸಬೇಕಾ? ಬೇಡವಾ? ಎಂಬುದು. ಒಂದು ವೇಳೆ ಮುಂದುವರೆಸಬೇಕು ಎನ್ನುವುದಾದರೆ ಎಷ್ಟು ದಿನ ಎನ್ನುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಸಿಎಂ ಯಡಿಯೂರಪ್ಪ, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆಯಲಿದ್ದಾರೆ.

ಈಗಾಗಲೇ 14 ದಿನದ ಮೊದಲ ಲಾಕ್​ಡೌನ್ ಜಾರಿಯಲ್ಲಿದ್ದು, ಅದು ಮೇ 24ಕ್ಕೆ ಕೊನೆಗೊಳ್ಳಲಿದೆ. ಸದ್ಯ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಾರದೆ ಇದ್ದರೂ ಹರಡುವ ತೀವ್ರತೆಯಲ್ಲಿ ನಿಯಂತ್ರಣ ಸಾಧಿಸುವಲ್ಲಿ ಯಶ ಕಂಡಿದೆ. ಸೋಂಕಿನ ಪ್ರಮಾಣ ಇಳಿಕೆಯತ್ತ ಮುಖ ಮಾಡಿವೆ.

ಆದರೆ, ಬೆಂಗಳೂರು ನಗರ ಸುಧಾರಣೆ ಕಂಡರೂ ಜಿಲ್ಲಾ ಕೇಂದ್ರಗಳಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ. ಹೀಗಾಗಿ, ಕೋವಿಡ್ ಚೈನ್ ಲಿಂಕ್ ಮುರಿಯಲು ಮತ್ತೆ ಎರಡು ವಾರ ಲಾಕ್​ಡೌನ್ ವಿಸ್ತರಣೆ ಅನಿವಾರ್ಯ ಎಂದು ಅಧಿಕಾರಿಗಳು ಹಾಗೂ ಸಚಿವರು ಸಿಎಂಗೆ ಅಭಿಪ್ರಾಯ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ, ರಾಜ್ಯದಲ್ಲಿ ಜೂನ್ 7ರವರೆಗೂ ಲಾಕ್​ಡೌನ್ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇಂದು ಸಂಜೆ ಸಭೆಯಲ್ಲಿ ಎಲ್ಲ ನಿರ್ಧಾರ ಕೈಗೊಳ್ಳಲಿದ್ದು, ಇಂದು ರಾತ್ರಿ ಇಲ್ಲವೇ ಹೊಸ ಮಾರ್ಗಸೂಚಿ ಅಂತಿಮಗೊಳಿಸಿ ನಾಳೆ ಲಾಕ್​ಡೌನ್ ವಿಸ್ತರಣೆ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.