ETV Bharat / headlines

ಲಸಿಕೆಗೆ ಅನುಮೋದನೆ ನೀಡಲು ಕೇಂದ್ರ ವಿಳಂಬ ಮಾಡುತ್ತಿದೆ: ಪಿ.ಚಿದಂಬರಂ - ಫೈಝರ್ ಮತ್ತು ಮೊಡೆರ್ನಾ ಲಸಿಕೆ

ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೆ, ವ್ಯಾಕ್ಸಿನ್​ಗಳಿಗೆ ಅನುಮೋದನೆ ನೀಡಲು ಕೇಂದ್ರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪಿ.ಚಿದಂಬರಂ
ಪಿ.ಚಿದಂಬರಂ
author img

By

Published : Jun 3, 2021, 12:01 PM IST

ನವದೆಹಲಿ: ಕೋವಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ ಹೊರತುಪಡಿಸಿ ಹಲವು ತಿಂಗಳುಗಳ ಕಾಲ ದೇಶದಲ್ಲಿ ಕೊರೊನಾ ವೈರಸ್ ಲಸಿಕೆಗಳಿಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರ ಅನಗತ್ಯವಾಗಿ ವಿಳಂಬ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ.

“ಕೋವಿಶೀಲ್ಡ್, ಕೊವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಹೊರತುಪಡಿಸಿ ಬೇರೆ ಯಾವುದೇ ಲಸಿಕೆಗಳನ್ನು ಸರ್ಕಾರ ಅನುಮೋದಿಸಿಲ್ಲ ಎಂಬ ನನ್ನ ಅನುಮಾನ ಸರಿಯಾಗಿದೆ. ದೇಶಿ ಲಸಿಕೆಗಳಿಗೆ ಮೊದಲು ಅನುಮೋದನೆ ನೀಡದೆ ಫೈಝರ್ ಮತ್ತು ಮೊಡೆರ್ನಾ ಲಸಿಕೆಗಳ ವಿಷಯದ ಕುರಿತು ಮಾತುಕತೆ ನಡೆಸಲು ಸರ್ಕಾರ ಏಕೆ ಮುಂದಾಯಿತು. ಯುಎಸ್ ಮತ್ತು ಇತರ ದೇಶಗಳು ಅನುಮೋದನೆ ನೀಡಿದಾಗಲೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲು 8-9 ತಿಂಗಳುಗಳನ್ನು ಏಕೆ ತೆಗೆದುಕೊಂಡಿದೆ? ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಸಹ ಈ ಅನುಮಾನಗಳನ್ನು ವ್ಯಕ್ತಪಡಿಸಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೆ ಇದಕ್ಕೆ ಕೇಂದ್ರದಿಂದ ಸ್ಪಷ್ಟ ಉತ್ತರ ಬಂದಿರಲಿಲ್ಲ.

ಏಪ್ರಿಲ್ ಮಧ್ಯದಲ್ಲಿ, ಸಿಂಗ್ ಅವರು ಕೇಂದ್ರಕ್ಕೆ ಬರೆದ ಪತ್ರವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಮುಖ ಅಂಶವಾಗಿ ವ್ಯಾಕ್ಸಿನೇಷನ್ ಡ್ರೈವ್ ಹೆಚ್ಚಿಸಲು ಸೂಚಿಸಿತ್ತು. ಈ ಪತ್ರದಲ್ಲಿ “ಭಾರತವು ಪ್ರಸ್ತುತ ತನ್ನ ಜನಸಂಖ್ಯೆಯ ಒಂದು ಸಣ್ಣ ಭಾಗಕ್ಕೆ ಮಾತ್ರ ಲಸಿಕೆ ನೀಡಿದೆ. ಸರಿಯಾದ ನೀತಿ ವಿನ್ಯಾಸದೊಂದಿಗೆ, ನಾವು ಉತ್ತಮವಾಗಿ ಹೆಚ್ಚು ಜನರಿಗೆ ವ್ಯಾಕ್ಸಿನ್​ ನೀಡಬಹುದು" ಎಂದು ಮಾಜಿ ಪ್ರಧಾನಿ ಉಲ್ಲೇಖಿಸಿದ್ದಾರೆ.

ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವ ಯೋಜನೆ ಇದ್ದರೂ ಸುಮಾರು 20 ಶತಕೋಟಿ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಇನ್ನೂ ತಲುಪಲಾಗುವುದಿಲ್ಲ ಎಂದು ತಜ್ಞರು ಆನ್‌ಲೈನ್ ಜರ್ನಲ್ ಬಿಎಂಜೆ ಗ್ಲೋಬಲ್ ಹೆಲ್ತ್‌ನಲ್ಲಿ ಪ್ರಕಟಿಸಿದ್ದಾರೆ.

ಇಲ್ಲಿಯವರೆಗೆ ಕೇವಲ 3 ಪ್ರತಿಶತದಷ್ಟು ಜನಸಂಖ್ಯೆಗೆ ವ್ಯಾಕ್ಸಿನ್​ ನೀಡಲಾಗಿದೆ. ಹೀಗಾಗಿ ಈಗಾಗಲೇ ಜಗತ್ತಿನ ಬೇರೆಡೆ ನೀಡಲಾದ ವಿದೇಶಿ ಲಸಿಕೆಗಳಿಗೆ ಅನುಮೋದನೆ ನೀಡುವಂತೆ ತಜ್ಞರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.