ETV Bharat / entertainment

ಕಾಫಿ ವಿತ್​ ಕರಣ್​ ಪ್ರೋಮೋ ಔಟ್​: ಮಸ್ತ್​ ಮಜವಿದೆ ಅಜಯ್​ ದೇವಗನ್​- ರೋಹಿತ್​ ಶೆಟ್ಟಿ ಟಾಕ್​ ​ - ಈಟಿವಿ ಭಾರತ ಕನ್ನಡ

Koffee with Karan 8: ಬಾಲಿವುಡ್​ ನಟ ಅಜಯ್​ ದೇವಗನ್​ ಮತ್ತು ನಿರ್ದೇಶಕ ರೋಹಿತ್​ ಶೆಟ್ಟಿ 'ಕಾಫಿ ವಿತ್​ ಕರಣ್​ ಸೀಸನ್​ 8'ರ ಮುಂದಿನ ಅತಿಥಿಗಳು.

Koffee with Karan 8
ಕಾಫಿ ವಿತ್​ ಕರಣ್​
author img

By ETV Bharat Karnataka Team

Published : Dec 18, 2023, 6:06 PM IST

'ಕಾಫಿ ವಿತ್​ ಕರಣ್​ ಸೀಸನ್​ 8' ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣ ಬಡಿಸುತ್ತಿದೆ. ಈಗಾಗಲೇ ಎಂಟು ಸಂಚಿಕೆಗಳು ಮುಗಿದಿದ್ದು, ನೆಚ್ಚಿನ ಸೆಲೆಬ್ರಿಟಿಗಳ ಬಗ್ಗೆ ಇಂಟ್ರಸ್ಟಿಂಗ್​ ವಿಚಾರಗಳು ಅಭಿಮಾನಿಗಳಿಗೆ ಸಿಕ್ಕಿದೆ. ಈ ಸೀಸನ್​ನ ಮುಂದಿನ ಸಂಚಿಕೆಯಲ್ಲಿ ಬಾಲಿವುಡ್ ನಟ ಅಜಯ್​ ದೇವಗನ್​ ಮತ್ತು ನಿರ್ದೇಶಕ ರೋಹಿತ್​ ಶೆಟ್ಟಿ ಜೊತೆಗಿನ ಮಾತುಕತೆ ನಡೆಯಲಿದೆ. ಸಿಂಘಂ​ ಎಗೇನ್​ನ ಜನಪ್ರಿಯ ಜೋಡಿಯು ಸಲ್ಮಾನ್​ ಖಾನ್​ ಮತ್ತು ರಣ್​ವೀರ್​ ಸಿಂಗ್​ ಬಗ್ಗೆ ನಿರ್ಮಾಪಕ ಕರಣ್​ ಜೋಹರ್​ ಜೊತೆ ಹಂಚಿಕೊಳ್ಳಲಿದ್ದಾರೆ.

ಇದೀಗ ಹೊಸದಾಗಿ ಬಿಡುಗಡೆಯಾದ ಪ್ರೋಮೋದಲ್ಲಿ ಅಜಯ್​ ದೇವಗನ್​ ಮತ್ತು ರೋಹಿತ್​ ಶೆಟ್ಟಿ ಇಬ್ಬರೂ ಎಂದಿನಂತೆ ಡ್ಯಾಪರ್​ ಆಗಿ ಕಾಣುತ್ತಿದ್ದಾರೆ. ಕರಣ್​ ಜೋಹರ್​ ಸಿಂಪಲ್​ ಪ್ರಶ್ನೆಗಳೊಂದಿಗೆ ಮಾತುಕತೆ ಪ್ರಾರಂಭಿಸುತ್ತಾರೆ. ಸಿನಿಮಾ ಯಶಸ್ಸಿನ ಬಗ್ಗೆ ಅಜಯ್​ ಅವರ ಪ್ರತಿಕ್ರಿಯೆಯನ್ನು ಕೇಳುತ್ತಾರೆ. ಇದಕ್ಕೆ ಅಡ್ಡಿಪಡಿಸಿದ ರೋಹಿತ್​ ಶೆಟ್ಟಿ, ಅಜಯ್​ ದೇವಗನ್​ ಮತ್ತು ಸಲ್ಮಾನ್​ ಖಾನ್​ ಅವರ ಚಿತ್ರವು ಬ್ಲಾಕ್​ಬಸ್ಟರ್​ ಆಗಿರಲಿ ಅಥವಾ ಇಲ್ಲದಿರಲಿ, ಸೆಟ್​ನಲ್ಲಿ ಅವರಿಬ್ಬರು ಯಾವಾಗಲೂ ಒಂದೇ ರೀತಿಯಾಗಿ ಇರುತ್ತಾರೆ ಎಂದು ತಮಾಷೆಯಾಗಿ ಕಮೆಂಟ್​ ಮಾಡಿದ್ದಾರೆ.

ರಣ್​ವೀರ್​ ಸಿಂಗ್​ ಜೊತೆ ಕೆಲಸ ಮಾಡುವ ಬಗ್ಗೆ ಕೇಳಿದಾಗ, ರೋಹಿತ್​ ಶೆಟ್ಟಿ ಅವರು ನಟನಿಗಿರುವ ಅನನ್ಯ ಶಕ್ತಿ ಒಪ್ಪಿಕೊಂಡರು. ಇದಕ್ಕೆ ಹಾಸ್ಯಮಯವಾಗಿ ಉತ್ತರಿಸಿದ ಅಜಯ್​ ದೇವಗನ್​, "ಒಂದೋ ನಾನೇ ಅವನ ಬಾಯಿಯನ್ನು ಮುಚ್ಚುತ್ತೇನೆ ಅಥವಾ ನಾನು ನನ್ನ ಕಿವಿಯನ್ನೇ ಮುಚ್ಚಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. ಅಜಯ್​ ಅವರು ತಮ್ಮ ಬಗ್ಗೆ ಕೆಲವು ಇಂಟ್ರಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಉದಾಹರಣೆಗೆ ಪಾರ್ಟಿಗಳಿಗೆ ಆಹ್ವಾನಿಸದಿರುವುದು ಮತ್ತು ವಿಮಾನ ನಿಲ್ದಾಣಗಳಲ್ಲಿ ಉದ್ದೇಶಪೂರ್ವಕವಾಗಿ ಪಾಪರಾಜಿಗಳನ್ನು ತಪ್ಪಿಸುವುದು ಹೀಗೆ. ಏಕೆಂದರೆ, ನಾನು ಪಾಪರಾಜಿಗಳನ್ನು ಎಲ್ಲಿಗೂ ಆಹ್ವಾನಿಸಿಯೇ ಇರುವುದಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಒಟ್ಟಿನಲ್ಲಿ ಅಜಯ್​ ದೇವಗನ್​ ಮತ್ತು ರೋಹಿತ್​ ಶೆಟ್ಟಿ ಜೊತೆಗಿನ ಮಾತುಕತೆಯಂತೂ ಸಖತ್​ ಮಜವಾಗಿದೆ. ಈ ಸಂಚಿಕೆಯು ಡಿಸೆಂಬರ್​ 21ರಂದು ಬೆಳಗ್ಗೆ 11 ಗಂಟೆಗೆ ಓಟಿಟಿ ಫ್ಲಾಟ್​ಫಾರ್ಮ್​ ಹಾಟ್​ಸ್ಟಾರ್​ನಲ್ಲಿ ಪ್ರಸಾರಗೊಳ್ಳಲಿದೆ. 'ಕಾಫಿ ವಿತ್​ ಕರಣ್​' ಈ ಮೋಸ್ಟ್ ಎಕ್ಸ್‌​ಪೆಕ್ಟೆಡ್​ ಶೋನಲ್ಲಿ ಜನಪ್ರಿಯ ಸೆಲೆಬ್ರಿಟಿಗಳು ಹಲವು ಆಸಕ್ತಿಕರ ವಿಷಯಗಳ ಕುರಿತು ಮಾತನಾಡುತ್ತಾರೆ. ನಿರೂಪಕ ಕರಣ್​ ಜೋಹರ್ ಕೇಳುವ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ. ತಮ್ಮ ಸಿನಿಮಾ ಪ್ರಚಾರದ ಲಾಭವನ್ನೂ ಸೆಲೆಬ್ರಿಟಿಗಳು ಪಡೆಯುತ್ತಾರೆ. ಮೆಚ್ಚಿನ ನಟ, ನಟಿ ಬಗ್ಗೆ ತಿಳಿದುಕೊಳ್ಳುವ ಅಭಿಮಾನಿಗಳ ಆಸೆ ಈ ಕಾರ್ಯಕ್ರಮದ ಮೂಲಕ ಈಡೇರುತ್ತದೆ. ಮುಂದಿನ ಸಂಚಿಕೆಯಲ್ಲಿ ಯಾರು ಅತಿಥಿಗಳಾಗಿ ಆಗಮಿಸುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ: 'ಕಾಫಿ ವಿತ್​ ಕರಣ್​' ಎಂಟನೇ ಸಂಚಿಕೆಯಲ್ಲಿ ಆದಿತ್ಯ ರಾಯ್​ ಕಪೂರ್​, ಅರ್ಜುನ್​ ಕಪೂರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.