ETV Bharat / entertainment

4 N 6 ಸಿನಿಮಾದ ಟೈಟಲ್ ಬಿಡುಗಡೆ: ಡಿಟೆಕ್ಟಿವ್‌ ಪಾತ್ರದಲ್ಲಿ 'ಲವ್ ಮಾಕ್ಟೇಲ್' ಚಿತ್ರದ ಬೆಡಗಿ - Actress Rachana Inder starrer 4 n 6 movie

ಲವ್ ಮಾಕ್ಟೇಲ್ ಹಾಗೂ ಲವ್ 360 ಚಿತ್ರಗಳ ಖ್ಯಾತಿಯ ರಚನಾ ಇಂದರ್ '4 n 6' ಚಿತ್ರದಲ್ಲಿ ಡಿಟೆಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ದರ್ಶನ್ ಶ್ರೀನಿವಾಸ್ ನಿರ್ದೇಶನವಿದೆ.

Roaring Star Srimurali  lanch 4 n 6 movie tital
4 N 6 ಸಿನಿಮಾದ ಟೈಟಲ್ ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರುಳಿ
author img

By

Published : May 17, 2022, 1:01 PM IST

ಸ್ಯಾಂಡಲ್​​ವುಡ್ ನಟಿಮಣಿಯರು ನಾಯಕಿಪ್ರಧಾನ‌‌ ಸಿನಿಮಾಗಳ ಕಡೆ ಒಲವು ತೋರುತ್ತಿದ್ದಾರೆ. ಇದೀಗ ಚಂದನವನದಲ್ಲಿ ಅಂಬೆಗಾಲಿಡುತ್ತಿರುವ ರಚನಾ ಇಂದರ್ ಡಿಟೆಕ್ಟಿವ್‌ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ '4 n 6' ಎಂದು ಟೈಟಲ್ ಇಡಲಾಗಿದ್ದು, ನಟ ಶ್ರೀಮುರಳಿ ಚಿತ್ರದ ಶೀರ್ಷಿಕೆಯನ್ನು ಇಂದು ಬಿಡುಗಡೆ ಮಾಡಿದರು.

Roaring Star Srimurali  lanch 4 n 6 movie tital
4 N 6 ಸಿನಿಮಾದ ಟೈಟಲ್ ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ

ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ. ನಗರದ ಓಂಶಕ್ತಿ ದೇವಸ್ಥಾನದಲ್ಲಿ ನೆರವೇರಿತು. ಸರಳ ಕಾರ್ಯಕ್ರಮದಲ್ಲಿ ಚಿತ್ರದ ಪ್ರಥಮ‌ ದೃಶ್ಯಕ್ಕೆ ಉದ್ಯಮಿ ಅಜಯ್ ಕ್ಲಾಪ್ ಮಾಡಿದರು. 4 n 6 ಚಿತ್ರಕ್ಕೆ, ದರ್ಶನ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಂದು ಮರ್ಡರ್ ಮಿಸ್ಟರಿ ಸುತ್ತ ನಡೆಯುವ ಇನ್ ವೆಸ್ಟಿಗೇಶನ್ ಪ್ರೊಸೆಸ್ ಈ ಚಿತ್ರದ ಕಥಾವಸ್ತು.

Actress Rachana Inder
ನಟಿ ರಚನಾ ಇಂದರ್

ಸಸ್ಪೆನ್ಸ್ , ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ, ಲವ್ ಮಾಕ್ಟೇಲ್ ಹಾಗೂ ಲವ್ 360 ಚಿತ್ರಗಳ ಖ್ಯಾತಿಯ ರಚನಾ ಇಂದರ್, ಹೊಸ ಪ್ರತಿಭೆಗಳಾದ ನವೀನ್, ಮೇಘನಾ, ಸಂಜಯ್ ನಾಯಕ್, ಸೌರವ್, ಸತ್ಯ ಹಾಗೂ ರೇಣುಕಾ ಹಾಗೂ ಇತರರು ಅಭಿನಯಿಸುತ್ತಿದ್ದಾರೆ.

Actress Rachana Inder
ನಟಿ ರಚನಾ ಇಂದರ್

ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ನಿರ್ಮಾಪಕರು ಕರಣ್. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಸಿನಿಮಾದ ಚಿತ್ರೀಕರಣವನ್ನು ಜೂನ್ ಮೊದಲ ವಾರ ಆರಂಭಿಸಿ ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ನಡೆಸುವ ಯೋಜನೆ ನಿರ್ಮಾಪಕರದ್ದು. ಚರಣ್ ತೇಜ್ ಛಾಯಾಗ್ರಹಣ, ಸತ್ಯಕಹಿ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಸಂಗೀತ ನಿರ್ದೇಶನವಿದೆ.

ಇದನ್ನೂ ಓದಿ: ಹೆಂಗೆ ನಾವು! ಅಂತಾನೇ ವೀಕ್ಷಕರಿಗೆ ಫೆವರೆಟ್​ ಆದ 'ಲವ್ ಮಾಕ್ಟೇಲ್'​ ಆದಿತಿ​ ರಿಯಲ್ ಸ್ಟೋರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.