'ಬಿಗ್ ಬಾಸ್ ಸೀಸನ್ 10'ರ ಈ ವಾರ ಇಂದಿನಿಂದ ಶುರುವಾಗಿದೆ. ಕಳೆದ ವಾರದ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಮನೆಯ ದಿನಸಿಗಳನ್ನು ಗಳಿಸುವ ಚಟುವಟಿಕೆಯ ಬಗ್ಗೆ ಹಲವು ಕಿವಿ ಮಾತುಗಳನ್ನು ಹೇಳಿದ್ದರು. ಹಿಂದಿನ ಹಲವು ವಾರಗಳಲ್ಲಿ ತಪ್ಪು ಲೆಕ್ಕಾಚಾರದಿಂದ, ಸಿಲ್ಲಿ ತಪ್ಪುಗಳಿಂದ ದಿನಸಿಗಳನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸಿದ್ದರು. ಅಷ್ಟೇ ಅಲ್ಲ, ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಟಿಪ್ಸ್ ಕೂಡ ಕೊಟ್ಟಿದ್ದರು.
-
ತಪ್ಪಾಯ್ತಾ ಸಂಗೀತಾ ಲೆಕ್ಕಾಚಾರ?
— Colors Kannada (@ColorsKannada) December 18, 2023 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/d4JUpVR6L7
">ತಪ್ಪಾಯ್ತಾ ಸಂಗೀತಾ ಲೆಕ್ಕಾಚಾರ?
— Colors Kannada (@ColorsKannada) December 18, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/d4JUpVR6L7ತಪ್ಪಾಯ್ತಾ ಸಂಗೀತಾ ಲೆಕ್ಕಾಚಾರ?
— Colors Kannada (@ColorsKannada) December 18, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/d4JUpVR6L7
ಆಗ ಯಾರಿಗೂ ಸುದೀಪ್ ಯಾಕೆ ಇದನ್ನು ಹೇಳುತ್ತಿದ್ದಾರೆ ಎಂಬುದು ಅರ್ಥವೇ ಆಗಿರಲಿಲ್ಲ. ಅವರ ಮಾತಿನ ಅರ್ಥ ಈಗ ಮನೆ ಮಂದಿಗೆ ಗೊತ್ತಾಗಿದೆ. ವಾರದ ಮೊದಲ ದಿನವೇ ಕಿಚ್ಚನ ಮಾತಿಗೆ ಉತ್ತರ ಸಿಕ್ಕಿದೆ. ಅದೂ ಕೂಡ ಕಾಲಮಿಂಚಿ ಹೋದಮೇಲೆ. ಹಾಗಾದರೆ ಆಗಿದ್ದೇನು? ಇದರ ಸುಳಿವು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸಿಕ್ಕಿದೆ.
ಬಿಗ್ ಬಾಸ್ ದಿನಸಿ ಪಡೆದುಕೊಳ್ಳುವ ಕುರಿತು ಒಂದು ಟಾಸ್ಕ್ ನೀಡಿದ್ದಾರೆ. ನಾಲ್ಕು ಸ್ಪರ್ಧಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಝರ್ ಎದುರು ನಿಂತುಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಬೇಕಾದ ದಿನಸಿಗಳನ್ನು ಮತ್ತು ಅವುಗಳ ಪ್ರಮಾಣವನ್ನು ಹೇಳುತ್ತಾ ಹೋಗುತ್ತಾರೆ. ಆಗ ಬೇಕಾದ ದಿನಸಿಗಳ ಹೆಸರು ಮತ್ತು ಪ್ರಮಾಣ ಬಂದಾಗ ಬಝರ್ ಒತ್ತಬೇಕು.
ಈ ಟಾಸ್ಕ್ ಮೂಲ ಲಾಜಿಕ್ ಗೊತ್ತಾಗದೇ ಸದಸ್ಯರು ಎಡವಟ್ಟು ಮಾಡಿಕೊಂಡಿರುವಂತಿದೆ. ಪ್ರಮಾಣ ನೋಡಿಕೊಂಡು ಬಝರ್ ಒತ್ತುವಲ್ಲಿ ಎಡವಿರುವ ಸಂಗೀತಾ ಅಕ್ಕಿ ಐದು ಕೆಜಿ ಎಂದು ಬಿಗ್ ಬಾಸ್ ಘೋಷಿಸಿದ ತಕ್ಷಣ ಬಝರ್ ಒತ್ತಿಬಿಟ್ಟಿದ್ದಾರೆ. ಇದರಿಂದ ಇಡೀ ಮನೆ ಐದು ಕೆಜಿ ಅಕ್ಕಿಯಲ್ಲಿ ವಾರ ಕಳೆಯಬೇಕಾಗಿದೆ. ಜೊತೆಗೆ ಎಂಟು ಕೆಜಿ ಗೋಧಿ ಹಿಟ್ಟು ಸಿಕ್ಕಿದೆ. ಉಳಿದ ಹಲವು ದಿನಸಿಗಳು ಒಂದು ಎರಡು ಕೆಜಿಗಳಷ್ಟೇ ದೊರಕಿವೆ.
'ಅಹಂನಲ್ಲೇ ಸಾಯ್ತಾರೆ. ಮನೆ ದಿನಸಿ ಎಂದು ಹೇಳಿ ಕಳಿಸಿದೀವಿ' ಎಂದು ಸಿಡಿದಿದ್ದಾರೆ ವಿನಯ್. ತುಕಾಲಿ ಸಂತೋಷ್, 'ಹೊಟ್ಟೆ ಹಸಿವು ಕಂಟ್ರೋಲ್ ಮಾಡಿಕೊಂಡು ಬಿಡೋಣ' ಎಂದು ಅಸಮಾಧಾನ ಹೊರಗೆ ಹಾಕಿದ್ದಾರೆ. ‘ಹಸಿವಿನಿಂದಲೇ ಎಲ್ಲ ಗಲಾಟೆಗಳೂ ಶುರುವಾಗುವುದು’ ಎಂಬ ಕಿಚ್ಚನ ಮಾತಿಗೆ ವಾರದ ಮೊದಲ ದಿನವೇ ಪುರಾವೆ ಸಿಕ್ಕಿದೆ.
ಎರಡು ಮೂರು ದಿನಕ್ಕೂ ಸಾಲದ ದಿನಸಿಗಳಲ್ಲಿ ಬಿಗ್ ಬಾಸ್ ಮನೆಯವರು ವಾರವಿಡೀ ಹೇಗೆ ಕಳೆಯುತ್ತಾರೆ? ಇದಕ್ಕೆ ಏನು ಪರಿಹಾರ ಕಂಡುಕೊಳ್ಳುತ್ತಾರೆ? ಅಥವಾ ಬಿಗ್ ಬಾಸ್ ಅವರ ಸಹಾಯಕ್ಕೆ ಬರುತ್ತಾರಾ? ಎಂಬುದನ್ನು ತಿಳಿದುಕೊಳ್ಳಲು ಬಿಗ್ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: ಸಂಗೀತಾ ಫೋಟೋ ಇದ್ದ ಮಡಿಕೆ ಒಡೆದ ಕಾರ್ತಿಕ್! ಬಿಗ್ ಬಾಸ್ ಮನೆಮಂದಿಗೆ ಅಚ್ಚರಿ