ETV Bharat / entertainment

ಮನೆಯವ್ರು ಬಂದ್ರು ದೊಡ್ಮನೆಗೆ: ಬಿಗ್​ ಬಾಸ್​​ ಸ್ಪರ್ಧಿಗಳಲ್ಲಿ ಸಂತಸವೋ ಸಂತಸ!! - Bigg Boss promo

'ಅಮ್ಮ ಬಂದ್ರು..' ಶೀರ್ಷಿಕೆಯಡಿ ಬಿಗ್​ ಬಾಸ್​​ ಪ್ರೋಮೋ ಅನಾವರಣಗೊಂಡಿದೆ.

Bigg Boss
ಬಿಗ್​ ಬಾಸ್
author img

By ETV Bharat Karnataka Team

Published : Dec 26, 2023, 1:41 PM IST

ಕನ್ನಡ ಕಿರುತೆರೆಯ ಪಾಪ್ಯುಲರ್ ಪ್ರೋಗ್ರಾಮ್​ 'ಬಿಗ್​ ಬಾಸ್​​' ಅಪಾರ ಸಂಖ್ಯೆಯ ಕನ್ನಡಿಗರಿಗೆ ಮನರಂಜನೆಯ ರಸದೌತಣ ಉಣಬಡಿಸೋದ್ರಲ್ಲಿ ಯಶಸ್ವಿ ಆಗಿದೆ. ಬಹುತೇಕ ಕೊನೆ ಹಂತ ತಲುಪಿರೋ 'ಬಿಗ್ ಬಾಸ್​ ಸೀಸನ್​​ 10' ಸ್ಪರ್ಧಿಗಳಿಗೆ ಬಿಗ್​ ಬಾಸ್​ ತಂಡ ಸರ್​ಪ್ರೈಸ್ ಕೊಡಲು ಶುರು ಮಾಡಿದೆ.

ಕಳೆದ ವಾರಾಂತ್ಯ ನಿರೂಪಕ ಸುದೀಪ್ ಇಲ್ಲದೇ ನಡೆಯಿತು. ನಟಿ ಶ್ರುತಿ, ನಟಿ ಶುಭಾ ಪೂಂಜಾ, ನಟ ಶೈನ್​ ಶೆಟ್ಟಿ ಕಳೆದ ವಾರಾಂತ್ಯದ ಕಾರ್ಯಕ್ರಮ ನಡೆಸಿಕೊಟ್ಟರು. ಹೊಸ ವಾರ ಹೊಸತನದೊಂದಿಗೆ ಶುರುವಾಗಿದೆ. ಹೊಸ ಉತ್ಸಾಹದೊಂದಿಗೆ, ಅಗ್ರೆಸಿವ್ ಆಗದೇ ಸೌಹಾರ್ದಯುತವಾಗಿ ಆಡುವ ಸಂಕಲ್ಪದೊಂದಿಗೆ ಮನೆ ಮಂದಿ ಕಣಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ 'ಬಿಗ್ ಬಾಸ್' ಮನೆ ಮಂದಿಗೆ ಹೊಸದೊಂದು ಸಿಹಿ ಸರ್ಪೈಸ್ ನೀಡಿದ್ದಾರೆ. ಅದೇನು ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಜಾಹೀರಾಗಿದೆ. ಕಲರ್ಸ್ ಕನ್ನಡ ಸೋಷಿಯಲ್​ ಮೀಡಿಯಾಗಳಲ್ಲಿ 'ಅಮ್ಮ ಬಂದ್ರು..' ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದ್ದು, ಕಂಪ್ಲೀಟ್​​ ಎಪಿಸೋಡ್​ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಬಿಗ್ ಬಾಸ್ ಮನೆ ಮಂದಿ ಮನೆಯ ಚಟುವಟಿಕೆಗಳಲ್ಲಿ ನಿರತರಾಗಿರುವಾಗ, ಕುಟುಂಬಸ್ಥರು ಮನೆಯೊಳಗೆ ಬರುವ ಸೂಚನೆ ಸಿಕ್ಕಿದೆ. ಇದನ್ನು ಮೊದಲು ಊಹಿಸಿದ್ದು ಮನೆಯ ಕ್ಯಾಪ್ಟನ್ ನಮ್ರತಾ ಅವರು. 'ಮನೆಯವರು ಬರುತ್ತಿದ್ದಾರೆ' ಎಂದು ಕುಣಿದಾಡಿದ್ದಾರೆ. ನಮ್ರತಾ ಅವರ ತಾಯಿ, ವರ್ತೂರ್ ಅವರ ಅಮ್ಮ ಬಿಗ್ ಬಾಸ್ ಮುಖ್ಯದ್ವಾರದಿಂದ ಬಂದಿರುವುದನ್ನು ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಕಾಣಬಹುದು.

ಇದನ್ನೂ ಓದಿ: 'ಸಲಾರ್​​' ಸ್ಪೀಡ್​​ಗಿಲ್ಲ ಬ್ರೇಕ್​: ​ಕಲೆಕ್ಷನ್​​ ಕಂಡು ಹುಬ್ಬೇರಿಸಿದ ಪ್ರೇಕ್ಷಕರು!

ಮತ್ತೆ ಯಾವೆಲ್ಲಾ ಸದಸ್ಯರ ಮನೆಯವರು ಬಿಗ್ ಬಾಸ್ ಮನೆಯೊಳಗೆ ಭೇಟಿ ಕೊಟ್ಟಿದ್ದಾರೆ? ಮನೆಯವರನ್ನು ನೋಡಿ ಸದಸ್ಯರ ರಿಯಾಕ್ಷನ್ ಹೇಗಿತ್ತು? ಇವೆಲ್ಲವನ್ನು ನೋಡಲು ಬಿಗ್ ಬಾಸ್ ವೀಕ್ಷಿಸಿ. ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಿ. ಶನಿವಾರ - ಭಾನುವಾರದ ವಾರಾಂತ್ಯದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9ಕ್ಕೆ ವೀಕ್ಷಿಸಿ.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ: ರಿಷಬ್ ಶೆಟ್ಟಿ, ಯಶ್​​ ಸೇರಿ ಚಿತ್ರರಂಗದ ಖ್ಯಾತನಾಮರಿಗೆ ಆಹ್ವಾನ

ಬಿಗ್​ ಬಾಸ್​ ಬಗೆ ಬಗೆಯ ಟಾಸ್ಕ್​ಗಳ ಮೂಲಕ ಗಮನ ಸೆಳೆಯುತ್ತಿದೆ. ಸ್ಪರ್ಧಿಗಳ ನಡೆ ನುಡಿ ಕಾರ್ಯಕ್ರಮದ ಹೈಲೆಟ್ಸ್ ಅಂತಲೇ ಹೇಳಬಹುದು. ಬಹುತೇಕ ಕೊನೆ ಹಂತ ತಲುಪಿರೋ 'ಬಿಗ್ ಬಾಸ್​ ಸೀಸನ್​​ 10' ನಲ್ಲಿರುವ ಪ್ರತೀ ಸ್ಪರ್ಧಿಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಸೀಸನ್​ನಲ್ಲಿ ಯಾರು ಬಿಗ್ ಬಾಸ್ ಟ್ರೋಫಿಯನ್ನು ಮನೆಗೆ ಕೊಂಡೊಯ್ಯಲಿದ್ದಾರೆ ಎಂದು ನೆಟ್ಟಿಗರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಫಿನಾಲೆಗೆ ಕೆಲವೇ ದಿನಗಳಿದ್ದು, ವಿಜೇತರ ಘೋಷಣೆಗೆ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.