ETV Bharat / entertainment

Photos: ದೇಸಿ ಉಡುಗೆ ಧರಿಸಿ ಕಾನ್ ಚಿತ್ರೋತ್ಸವದಲ್ಲಿ ಮಿಂಚು ಹರಿಸಿದ ದೀಪಿಕಾ ಪಡುಕೋಣೆ - Cannes 2022

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್​​ನಲ್ಲಿ ಸೀರೆಯಲ್ಲಿ ಮಿಂಚಿದ್ದಾರೆ. ಅವರು ಧರಿಸಿದ ಸೀರೆಯನ್ನು ಭಾರತದ ಖ್ಯಾತ ಡಿಸೈನರ್ ಸಬ್ಯಸಾಚಿ ಡಿಸೈನ್ ಮಾಡಿದ್ದಾರೆ.

Deepika Padukone stuns in a black and gold saree on the Cannes
ದೇಸಿ ಉಡುಗೆ ಧರಿಸಿ ಗಮನ ಸೆಳೆದ ದೀಪಿಕಾ ಪಡುಕೋಣೆ
author img

By

Published : May 18, 2022, 12:46 PM IST

75ನೇ ಕಾನ್ ಚಲನಚಿತ್ರೋತ್ಸವ ಅದ್ದೂರಿಯಾಗಿ ಪ್ರಾರಂಭವಾಗಿದ್ದು, ನಟಿ ದೀಪಿಕಾ ಪಡುಕೋಣೆ ಉದ್ಘಾಟನಾ ಸಮಾರಂಭದಲ್ಲಿ ದೇಸಿ ಉಡುಗೆ ಧರಿಸಿ ಗಮನ ಸೆಳೆದರು. ಮೊದಲ ದಿನವೇ ದೀಪಿಕಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ದೀಪಿಕಾ ಭಾರತದ ಖ್ಯಾತ ಡಿಸೈನರ್ ಸಬ್ಯಸಾಚಿ ಡಿಸೈನ್ ಮಾಡಿರುವ ಕಪ್ಪು ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

Deepika Padukone stuns in a black and gold saree on the Cannes

ಈ ಸೀರೆಯಲ್ಲಿ ಕಪ್ಪು ಮತ್ತು ಗೋಲ್ಡನ್ ಬಣ್ಣದ ಪಟ್ಟಿಗಳಿವೆ. ಇದು ಹುಲಿಯ ಹಾಗೆ ಕಾಣಿಸುತ್ತಿದೆ. ಕಾನ್ ಫೆಸ್ಟಿವಲ್ ಫೋಟೋಗಳನ್ನು ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 'ಸೀರೆಯೇ ಒಂದು ಕಥೆ, ಅದನ್ನು ಹೇಳಿ ಮುಗಿಸಲಾಗದು. ನಾವು ವಿಶ್ವದಲ್ಲಿ ಎಲ್ಲಿಯೇ ಇದ್ದರೂ ಕೂಡ ಅದಕ್ಕೆ ಅದರದ್ದೇ ಆದ ಜಾಗವಿದೆ ಎಂದು ಸಬ್ಯಸಾಚಿ ಹೇಳಿದ್ದಾರೆ. ಅದನ್ನು ನಾನು ಒಪ್ಪದೇ ಇರಲಾಗದು' ಎಂದು ಬರೆದುಕೊಂಡಿದ್ದಾರೆ.

Deepika Padukone walked the red carpet

ಮೇ 17 ರಿಂದ ಮೇ 28ರವರೆಗೆ ಪ್ರತಿಷ್ಠಿತ ಕಾನ್​​ ಚಲನಚಿತ್ರೋತ್ಸವ ನಡೆಯಲಿದೆ. ಫ್ರಾನ್ಸ್‌ನಲ್ಲಿ ನಡೆಯಲಿರುವ ಈ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತೀರ್ಪುಗಾರರಾಗಿದ್ದಾರೆ. ಮೇ 28 ರಂದು ಕೇನ್ಸ್‌ನಲ್ಲಿ ನಡೆಯುವ ಗಾಲಾ ಸಮಾರಂಭದಲ್ಲಿ ಈ ವರ್ಷದ ಪಾಮ್ ಡಿ ಓರ್ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಿರುವ ದೀಪಿಕಾ ಒಂಬತ್ತು ಸದಸ್ಯರ ತೀರ್ಪುಗಾರರ ಭಾಗವಾಗಿದ್ದಾರೆ.

ಇತರ ತೀರ್ಪುಗಾರರ ಸದಸ್ಯರಲ್ಲಿ ನಟ-ಚಲನಚಿತ್ರ ನಿರ್ಮಾಪಕ ರೆಬೆಕಾ ಹಾಲ್, ನೂಮಿ ರಾಪೇಸ್, ನಿರ್ದೇಶಕ ಜಾಸ್ಮಿನ್ ಟ್ರಿಂಕಾ, ಅಸ್ಗರ್ ಫರ್ಹಾದಿ, ಲಾಡ್ಜ್ ಲೈ, ಜೆಫ್ ನಿಕೋಲ್ಸ್ ಮತ್ತು ಜೋಕಿಮ್ ಟ್ರೈಯರ್ ಸೇರಿದ್ದಾರೆ. 2013ರಲ್ಲಿ ವಿದ್ಯಾ ಬಾಲನ್ ಅವರು ತೀರ್ಪುಗಾರರಾಗಿದ್ದರು. ಆ ನಂತರದಲ್ಲಿ ಆ ಆಸನವನ್ನು ಭಾರತದ ಪ್ರತಿನಿಧಿಯಾಗಿ ದೀಪಿಕಾ ತುಂಬುತ್ತಿದ್ದಾರೆ.

ಕಾನ್ ಚಿತ್ರೋತ್ಸವದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

ಇದನ್ನೂ ಓದಿ: Cannes 2022 Red Carpet: ಕಾನ್ ಚಿತ್ರೋತ್ಸವದಲ್ಲಿ ಭಾರತೀಯ ತಾರೆಯರ ರಂಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.