ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಮಗ ಆಜಾದ್ ಜೊತೆ ಸೋಮವಾರ ಸಂಜೆ ಶಾಪಿಂಗ್ ಮಾಡಿದ್ದಾರೆ. ಪುತ್ರ ಆಜಾದ್ ರಾವ್ ಖಾನ್ ಜೊತೆ ಆಭರಣದ ಅಂಗಡಿಗೆ ಬಂದ ಅಮೀರ್ ಖಾನ್ ಖುಷಿ ಖುಷಿಯಾಗಿಯೇ ಕ್ಯಾಮರಾ ಕಣ್ಣುಗಳಿಗೆ ಪೋಸ್ ನೀಡಿದರು. ಅಮೀರ್ ಅವರ ಮೊದಲ ಮಾಜಿ ಪತ್ನಿ ರೀನಾ ದತ್ತಾ ಅವರ ಮಗಳು ಇರಾ ಖಾನ್ ಸಹ ಅವರೊಂದಿಗೆ ಇದ್ದರು.
ಅಮಿರ್ ಖಾನ್ ಜೊತೆಗೆ ಪುತ್ರ ಆಜಾದ್ ರಾವ್ ಖಾನ್ ಕೂಡ ಕ್ಯಾಮರಾಗೆ ಪೋಸ್ ಕೊಟ್ಟರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಜಾದ್ ರಾವ್ ಖಾನ್ ಅವರನ್ನು ಕಂಡ ನೆಟ್ಟಿಗರು 'ಅಮಿರ್ ಖಾನ್ ಝೆರಾಕ್ಸ್ ಪ್ರತಿ' ತಂದೆಯಂತೆಯೇ ಮಗ ಕೂಡ ಮುದ್ದಾಗಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ. ಅಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆ.11 ರಂದು ಈ ಸಿನಿಮಾ ತೆರೆ ಕಾಣಲಿದೆ.
ಇದನ್ನೂ ಓದಿ: ಅಮಿರ್ ಖಾನ್ ನಟನೆಯ ಬಹುನಿರೀಕ್ಷಿತ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಟ್ರೈಲರ್ ರಿಲೀಸ್