ETV Bharat / entertainment

ವಿಕ್ಕಿ ಕೌಶಲ್​​ ಅಭಿನಯದ ಸಿನಿಮಾದಲ್ಲಿ ಪತ್ನಿ ಕತ್ರಿನಾ ಕೈಫ್​​ ಯಾಕಿಲ್ಲಾ ಗೊತ್ತಾ? - ಲಕ್ಷ್ಮಣ್ ಉಟೇಕರ್

ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಪ್ರಚಾರ ಕಾರ್ಯ ಜೋರಾಗೇ ನಡೆಯುತ್ತಿದೆ.

ಜರಾ ಹಟ್ಕೆ ಜರಾ ಬಚ್ಕೆ
Zara Hatke Zara Bachke
author img

By

Published : May 30, 2023, 4:40 PM IST

ಲಕ್ಷ್ಮಣ್ ಉಟೇಕರ್ ನಿರ್ದೇಶನದ, ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಮುಂಬರುವ ರೊಮ್ಯಾಂಟಿಕ್ ಕಾಮಿಡಿ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಲಕ್ಷ್ಮಣ್ ಉಟೇಕರ್​ ಅವರು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (ದಂಪತಿ) ಅವರನ್ನು ಜೊತೆಯಾಗಿ ಏಕೆ ತೆರೆ ಮೇಲೆ ತರುವ ಪ್ರಯತ್ನ ಮಾಡಲಿಲ್ಲ ಎಂಬ ಬಗ್ಗೆ ಹಂಚಿಕೊಂಡಿದ್ದಾರೆ. ಕತ್ರಿನಾ ಕೈಫ್​ ಅವರು ಮಧ್ಯಮ ವರ್ಗದ, ಅವಿಭಕ್ತ ಕುಟುಂಬದ ಸೊಸೆ ಪಾತ್ರವನ್ನು ಚಿತ್ರಿಸಬಹುದು ಎಂದು ನನಗನಿಸಲಿಲ್ಲ ಎಂದು ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಲಕ್ಷ್ಮಣ್ ಉಟೇಕರ್, ಕತ್ರಿನಾ ಅವರು ನನ್ನ ಭಾಷೆಯನ್ನು ಅರ್ಥ ಮಾಡಿಕೊಂಡರೆ ಮಾತ್ರ ನಾನು ಅವರಿಗೆ ನಿರ್ದೇಶನ ಮಾಡಲು ಸಾಧ್ಯವಾಗುತ್ತದೆ. ಕತ್ರಿನಾ ಅವರು ಎಂದಾದರೂ ಸಣ್ಣ ಪಟ್ಟಣದ ನಾಯಕಿಯಂತೆ ಕಾಣಿಸಿದ್ದಾರಾ? ನಿಮಗನಿಸುತ್ತದೆಯೇ? ಎಂದು ತಿಳಿಸಿದರು. ಅಲ್ಲದೇ ನಮಗೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ವಿಕ್ಕಿ ಮತ್ತು ಕತ್ರಿನಾ ಅವರೊಂದಿಗೆ ಕೆಲಸ ಮಾಡಲು ನಾನು ಇಷ್ಟಪಡುತ್ತೇನೆ ಎಂದು ಕೂಡ ಹೇಳಿದರು.

"ಈ ಬಾರಿ ನಾನು ಅವರಿಬ್ಬರನ್ನು ತೆರೆ ಮೇಲೆ ಒಟ್ಟಾಗಿ ತರಲು ಸಾಧ್ಯವಾಗಲಿಲ್ಲ. ಏಕೆಂದರೆ, 'ಜರಾ ಹಟ್ಕೆ ಜರಾ ಬಚ್ಕೆ' ಒಂದು ವಿಭಿನ್ನ ಸಿನಿಮಾ. ಕತ್ರಿನಾ ಅವರ ಲುಕ್​ ಪ್ರಕಾರ, ಮಧ್ಯಮ ವರ್ಗದ, ಅವಿಭಕ್ತ ಕುಟುಂಬದ ಸೊಸೆಯ ಪಾತ್ರಕ್ಕೆ ಸರಿಹೊಂದುತ್ತಾರೆ ಎಂದು ನನಗೆ ಅನಿಸಲಿಲ್ಲ. ಭವಿಷ್ಯದಲ್ಲಿ ಅವರಿಬ್ಬರಿಗೆ ಆ್ಯಕ್ಷನ್​ ಕಟ್ ಹೇಳುವ ಅವಕಾಶ ಸಿಕ್ಕರೆ​​, ಆಗ ಏಕೆ ಮಾಡಬಾರದು?. ನಾನು ಅವರಿಬ್ಬರಿಗೆ ನಿರ್ದೇಶನ ಮಾಡಲು ಸಿದ್ಧ, ಸೂಕ್ತ ಸ್ಕ್ರಿಪ್ಟ್​ ಬೇಕು" ಎಂದು ತಿಳಿಸಿದರು.

ಬಾಲಿವುಡ್​ ಬಹುಬೇಡಿಕೆ ನಟಿ ಕತ್ರಿನಾ ಕೈಫ್​​ ಆ್ಯಕ್ಷನ್ ಥ್ರಿಲ್ಲರ್ ಚಲನಚಿತ್ರ 'ಟೈಗರ್ 3'ನಲ್ಲಿ ಸಲ್ಮಾನ್ ಖಾನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಭಾಗ 1 ಮತ್ತು 2ರಲ್ಲಿಯೂ ಸಲ್ಲು ಕ್ಯಾಟ್​ ತೆರೆ ಹಂಚಿಕೊಂಡಿದ್ದಾರೆ. ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಟೈಗರ್​ 3 ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಬಾಲಿವುಡ್​ ಕಿಂಗ್​ ಖಾನ್​​ ಶಾರುಖ್​ ಕೂಡ ಇದ್ದಾರೆ. ಇನ್ನೂ ಶ್ರೀರಾಮ್ ರಾಘವನ್ ನಿರ್ದೇಶನದ ಮೆರ್ರಿ ಕ್ರಿಸ್‌ಮಸ್ ಚಿತ್ರದಲ್ಲಿ ಕತ್ರಿನಾ ಅವರು ವಿಜಯ್ ಸೇತುಪತಿ ಜೊತೆಗೆ ನಟಿಸಲಿದ್ದಾರೆ. ಫರ್ಹಾನ್ ಅಖ್ತರ್ ಅವರ ಮುಂಬರುವ ಚಿತ್ರ 'ಜೀ ಲೇ ಜರಾ'ದಲ್ಲಿ ಅವರು ಆಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 'ಪರದೆಯ ಮೇಲೆ ಮಹಿಳೆಯರನ್ನು ಸರಿಯಾಗಿ ಪ್ರತಿನಿಧಿಸುವುದು ತನ್ನ ಜವಾಬ್ದಾರಿ': ರಾಣಿ ಮುಖರ್ಜಿ

ವಿಕ್ಕಿ ಕೌಶಲ್ ಸದ್ಯ ತಮ್ಮ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಪ್ರಮೋಶನ್​ನಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ಮತ್ತು ಸಾರಾ ತಮ್ಮ ಚಲನಚಿತ್ರ 'ಜರಾ ಹಟ್ಕೆ ಜರಾ ಬಚ್ಕೆ'ಯ ಪ್ರಚಾರದ ಸಲುವಾಗಿಯೂ ನಿನ್ನೆ ರೋಚಕ ಕ್ರಿಕೆಟ್​ ಪಂದ್ಯ ನಡೆದ ಕ್ರೀಡಾಂಗಣಕ್ಕೆ ಹಾಜರಾಗಿದ್ದರು. ಸಿಎಸ್​ಕೆ ಗೆದ್ದ ಕೂಡಲೇ ಅಭಿಮಾನಿಗಳಂತೆ ವಿಕ್ಕಿ ಮತ್ತು ಸಾರಾ ಖುಷಿಯಿಂದ ಕುಣಿದು ಕುಪ್ಪಳಿಸಿದರು. "ಗೆಲುವಿಗಾಗಿಯೇ ಧೋನಿ", ಜಡ್ಡು, ನೀವು ಉತ್ತಮರು! ಪರಿಪೂರ್ಣ'' ಎಂದು ಟ್ವೀಟ್​ ಮೂಲಕ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ: ರವಿಚಂದ್ರನ್​​ ಬರ್ತ್ ಡೇ: ಜಡ್ಜ್​​​ಮೆಂಟ್ ಸ್ಪೆಷಲ್ ಟೀಸರ್ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.