ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಅಭಿನಯದ 'ಜರಾ ಹಟ್ಕೆ ಜರಾ ಬಚ್ಕೆ' (zara hatke zara bachke) ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಲಕ್ಷ್ಮಣ್ ಉಟೇಕರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ತೆರೆ ಕಂಡ ಎರಡನೇ ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ.
-
#ZaraHatkeZaraBachke brings relief for exhibitors, #HouseFull boards are back again… Witnesses healthy growth on Day 2… Eyes ₹ 22 cr+ weekend, an EXCELLENT number for this *mid-range* film… Fri 5.49 cr, Sat 7.20 cr. Total: ₹ 12.69 cr. #India biz. #Boxoffice
— taran adarsh (@taran_adarsh) June 4, 2023 " class="align-text-top noRightClick twitterSection" data="
The *national… pic.twitter.com/NrDBAnJ7xi
">#ZaraHatkeZaraBachke brings relief for exhibitors, #HouseFull boards are back again… Witnesses healthy growth on Day 2… Eyes ₹ 22 cr+ weekend, an EXCELLENT number for this *mid-range* film… Fri 5.49 cr, Sat 7.20 cr. Total: ₹ 12.69 cr. #India biz. #Boxoffice
— taran adarsh (@taran_adarsh) June 4, 2023
The *national… pic.twitter.com/NrDBAnJ7xi#ZaraHatkeZaraBachke brings relief for exhibitors, #HouseFull boards are back again… Witnesses healthy growth on Day 2… Eyes ₹ 22 cr+ weekend, an EXCELLENT number for this *mid-range* film… Fri 5.49 cr, Sat 7.20 cr. Total: ₹ 12.69 cr. #India biz. #Boxoffice
— taran adarsh (@taran_adarsh) June 4, 2023
The *national… pic.twitter.com/NrDBAnJ7xi
ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿರುವ ಚಿತ್ರವಿದು. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರ ಮೊದಲ ದಿನವೇ ಉತ್ತಮ ಕಲೆಕ್ಷನ್ ಮಾಡಿತ್ತು. ಶುಕ್ರವಾರ ತೆರೆಕಂಡ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 5.49 ಕೋಟಿ ಗಳಿಸಿದರೆ, ಬಿಡುಗಡೆಯಾದ ಎರಡನೇ ದಿನದ ಚಿತ್ರದ ಗಳಿಕೆಯಲ್ಲಿ ಶೇ. 35ರಷ್ಟು ಹೆಚ್ಚಾಗಿದೆ. ಎರಡನೇ ದಿನ ಚಿತ್ರ ಸುಮಾರು 7.20 ಕೋಟಿ ರೂ ಕಲೆಕ್ಷನ್ ಮಾಡಿದೆ. ವಾರಾಂತ್ಯದ ಟಿಕೆಟ್ ಆಫರ್ ಪ್ರಯೋಜನ ಆಗಿದೆ. 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರದ ನಂತರ ಇದು ವಿಕ್ಕಿಗೆ ಎರಡನೇ ಅತಿ ಹೆಚ್ಚು ಗಳಿಕೆಯ ಸಿನಿಮಾವಾಗುವಂತೆ ತೋರುತ್ತಿದೆ.
- " class="align-text-top noRightClick twitterSection" data="
">
ಎರಡು ದಿನಗಳಲ್ಲಿ 'ಜರಾ ಹಟ್ಕೆ ಜರಾ ಬಚ್ಕೆ' ಒಟ್ಟು 12.69 ಕೋಟಿ ರೂ. ಸಂಗ್ರಹಿಸಿದೆ. ಈ ಕುರಿತು ಸಿನಿ ವ್ಯವಹಾರ ವಿಶ್ಲೇಷಕರು ಟ್ವೀಟ್ ಮಾಡಿದ್ದಾರೆ. ಇದೇ ರೀತಿ ಮುಂದುವರಿದರೆ ವಾರಾಂತ್ಯಕ್ಕೆ 20 ಕೋಟಿ ರೂಪಾಯಿ ದಾಟಲಿದೆ. 'ದಿ ಕೇರಳ ಸ್ಟೋರಿ' ಮತ್ತು 'ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್' ಚಿತ್ರಗಳ ಪೈಪೋಟಿಯ ಹೊರತಾಗಿಯೂ, ZHZB ಚಿತ್ರವು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ವಿಕ್ಕಿ ಮತ್ತು ಸಾರಾ ಅವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಿತ್ರದ ಹಾಡುಗಳು ಕೂಡ ವೀಕ್ಷಕರ ಮನಸೂರೆಗೊಂಡಿವೆ.
ಇದನ್ನೂ ಓದಿ: ವಿಕ್ಕಿ, ಸಾರಾ ನಟನೆಯ 'ಜರಾ ಹಟ್ಕೆ ಜರಾ ಬಚ್ಕೆ' ಓಟ ಆರಂಭ: ಮೊದಲ ದಿನದ ಸಂಪಾದನೆ ಇಷ್ಟು!
ಚಿತ್ರದ ಕಥೆ ಏನು?: ನಟ ವಿಕ್ಕಿ ಕೌಶಲ್ ಮತ್ತು ನಟಿ ಸಾರಾ ಅಲಿ ಖಾನ್ ಮಧ್ಯಮ ವರ್ಗದ ದಂಪತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿರುವ ಚಿತ್ರದಲ್ಲಿ ದಂಪತಿಯ ಪ್ರೀತಿ ಪ್ರೇಕ್ಷಕರ ಗಮನ ಸೆಳೆದಿದೆ. ಕಾಲೇಜಿನಲ್ಲಿ ಭೇಟಿಯಾದ ಈ ಜೋಡಿ ನಡುವೆ ಪ್ರೀತಿ ಚಿಗುರೊಡೆಯುತ್ತದೆ. ಮದುವೆ ಆದ ಬಳಿಕ ತಮ್ಮ ಜೀವನದಲ್ಲಿ ಸಂತೋಷ ಕಂಡುಕೊಳ್ಳಲು ಬಯಸುತ್ತಾರೆ. ಕೂಡು ಕುಟುಂಬವಾದ ಹಿನ್ನೆಲೆ ಖಾಸಗಿ ಸಮಯಕ್ಕಾಗಿ ನವದಂಪತಿ ಹಂಬಲಿಸುತ್ತಾರೆ. ಸ್ವಂತ ಮನೆ ಹೊಂದಲು ಇಚ್ಛಿಸಿದ ಇವರಿಗೆ ಸರ್ಕಾರಿ ವಸತಿ ಯೋಜನೆಯಾಗಿರುವ, ವಿಚ್ಛೇದಿತ ಮಹಿಳೆಯರಿಗೆ ಕೈಗೆಟುಕುವ ಮನೆ ಬಗ್ಗೆ ಮಾಹಿತಿ ದೊರೆಯುತ್ತದೆ. ಹಾಗಾಗಿ ವಿಚ್ಛೇದನದ ನಾಟಕ ಆಡಿ ಸರ್ಕಾರಿ ಯೋಜನೆಯಡಿ ಮಂಜೂರಾಗಿರುವ ಮನೆಯನ್ನು ತಮ್ಮದಾಗಿಸಿಕೊಳ್ಳಲು ಮುಂದಾಗುತ್ತಾರೆ. ಬಹಳ ಪ್ರೀತಿಯಿಂದಿದ್ದ ಜೋಡಿ ತಮ್ಮ ನಡುವೆ ಏನೂ ಸರಿಯಿಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಲು ಆದಷ್ಟು ಪ್ರಯತ್ನ ಮಾಡುತ್ತಾರೆ. ಆದ್ರೆ ಇವರ ನಾಟಕ ವರ್ಕ್ಔಟ್ ಆಗುವುದಿಲ್ಲ. ಈ ಎಲ್ಲ ಪ್ರಯತ್ನ, ನಾಟಕದ ಹೊರತಾಗಿ ಇಲ್ಲಿ ಈ ದಂಪತಿಯ ಪ್ರೀತಿ ಪ್ರೇಕ್ಷಕರ ಮನಗೆಲ್ಲುತ್ತದೆ.
ಇದನ್ನೂ ಓದಿ: ZHZB: 'ಸರ್ಕಾರದಿಂದ ಸಿಗುವ ಮನೆ ಹೊಂದಲು ದಂಪತಿಯ ವಿಚ್ಛೇದನ ನಾಟಕ'