ETV Bharat / entertainment

ದೊಡ್ಮನೆ ಕುಡಿ ಅಭಿನಯದ 'ಯುವ' ಚಿತ್ರದ ಬಿಡುಗಡೆಗೆ ಹೊಸ ಮುಹೂರ್ತ ಫಿಕ್ಸ್ - ವಿಜಯ್ ಕಿರಗಂದೂರು

ಹೊಂಬಾಳೆ ಫಿಲಂಸ್​ ನಿರ್ಮಾಣದ ತೆಲುಗು ಸಿನಿಮಾ ಸಲಾರ್​ ಡಿಸೆಂಬರ್​ 22ರಂದು ಬಿಡುಗಡೆಯಾಗುತ್ತಿರುವ ಕಾರಣ, ಯುವ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

Yuva Movie Poster
ಯುವ ಸಿನಿಮಾದ ಪೋಸ್ಟರ್​
author img

By ETV Bharat Karnataka Team

Published : Oct 27, 2023, 6:53 AM IST

ಇಡೀ ಪ್ರಪಂಚವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್, ಕಾಂತಾರ ಗಳಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ ದೊಡ್ಮನೆ ಕುಡಿ ಅಭಿನಯಿಸಿರುವ 'ಯುವ' ಚಿತ್ರದ ಬಿಡುಗಡೆಗೆ ಡೇಟ್ ಅನೌಸ್ ಆಗಿದೆ.

ಡಾ. ರಾಜ್ ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಹಾಗೂ ರಾಘವೇಂದ್ರ ರಾಜ್‌ ಕುಮಾರ್ ಎರಡನೇ ಮಗ ಯುವ ರಾಜ್ ಕುಮಾರ್ ಅವರನ್ನು 'ಯುವ' ಚಿತ್ರದ ಮೂಲಕ ಹೊಂಬಾಳೆ‌ ಸಂಸ್ಥೆ ಲಾಂಚ್ ಮಾಡುತ್ತಿರುವುದು ಗೊತ್ತೇ ಇದೆ. ಟೈಟಲ್​ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ 'ಯುವ' ಸಿನಿಮಾ ಎಲ್ಲ ಅಂದುಕೊಂಡಂತೆ ನಡೆದು, ಶೂಟಿಂಗ್ ಮುಗಿಯುತ್ತಿದ್ದರೆ, ಇದೇ ವರ್ಷದ ಡಿಸೆಂಬರ್ 22ಕ್ಕೆ ಬಿಡುಗಡೆ ಆಗಬೇಕಿತ್ತು. ತಂಡದ ಮುಹೂರ್ತದ ದಿನವೇ ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿತ್ತು. ಆದರೆ, ಈಗ ಕೆಲವು ತಾಂತ್ರಿಕ ಕಾರಣದಿಂದ ಯುವ ಸಿನಿಮಾ ಬಿಡುಗಡೆ ದಿನ ಮುಂದಕ್ಕೆ ಹೋಗಿದೆ. ಹೊಸ ದಿನಾಂಕವನ್ನು ಪೋಸ್ಟರ್​ ಮೂಲಕ ಚಿತ್ರತಂಡ ಘೋಷಣೆ ಮಾಡಿದೆ.

ಇದೀಗ ಯುವ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದ್ದು, ಚಿತ್ರಕ್ಕೆ ಬಂಡವಾಳ ಹೂಡಿರುವ ಪ್ರತಿಷ್ಠಿತ ಹೊಂಬಾಳೆ ಸಂಸ್ಥೆ ಚಿತ್ರದ ಆಫೀಶಿಯಲ್ ಬಿಡುಗಡೆ ಡೇಟ್ ಅನ್ನು ಅನೌನ್ಸ್​ ಮಾಡಿದೆ. ಮಿಸ್ಟರ್ ಅಂಡ್​​ ಮಿಸೆಸ್ ರಾಮಾಚಾರಿ, ರಾಜಕುಮಾರಗಳಂತಹ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ಸಂತೋಷ್ ಆನಂದ್​ರಾಮ್ 'ಯುವ' ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಯೂತ್ ಲವ್ ಸ್ಟೋರಿ ಜೊತೆಗೆ ಆ್ಯಕ್ಷನ್ ಸೀಕ್ವೆನ್ಸ್​ಗಳನ್ನೂ ಹೊಂದಿರುವ ಸಿನಿಮಾದಲ್ಲಿ ಯುವ ರಾಜ್ ಕುಮಾರ್ ಸಖತ್ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಕಾಂತಾರ ಚೆಲುವೆ ಸಪ್ತಮಿ ಗೌಡ ಯುವ ರಾಜ್​ ಕುಮಾರ್​ ಅವರಿಗೆ ಜೋಡಿಯಾಗಿದ್ದಾರೆ‌.

ಸದ್ಯ ಟೈಟಲ್​ನಿಂದಲೇ ಕ್ರೇಜ್ ಹುಟ್ಟಿಸಿರುವ 'ಯುವ' ಯಾವಾಗ ಬಿಡುಗಡೆಯಾಗಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಬಹು ನಿರೀಕ್ಷಿತ ಈ ಚಿತ್ರ 2024 ರ ಮಾರ್ಚ್ 28 ರಂದು ಬಿಡುಗಡೆಯಾಗುತ್ತಿದೆ. ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹೊಂಬಾಳೆ ಫಿಲಂಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಇದು ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಲ್ಲೂ ಸಂಭ್ರಮಕ್ಕೆ ಕಾರಣವಾಗಿದೆ.

ಹೊಂಬಾಳೆ ಫಿಲಂಸ್​ ಬಂಡವಾಳ ಹೂಡುತ್ತಿರುವ ಹಾಗೂ ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್​ ಹೇಳುತ್ತಿರುವ ತೆಲುಗು ನಟ ಪ್ರಭಾಸ್​ ಅಭಿನಯದ ಸಲಾರ್ ಸಿನಿಮಾ ಕೂಡ ಸೆಪ್ಟೆಂಬರ್​ 28ಕ್ಕೆ ಬಿಡುಗಡೆ ಅಗುವ ಬದಲು ಮುಂದೂಡಲ್ಪಟ್ಟು ಡಿಸೆಂಬರ್​ 22ಕ್ಕೆ ಬಿಡುಗಡೆಯಾಗುತ್ತಿದೆ. ಆದ ಕಾರಣ ಯುವ ಸಿನಿಮಾವನ್ನು ಮಾರ್ಚ್​ 28ಕ್ಕೆ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ನಿರ್ಧಾರ ಮಾಡಿದೆ.

ಇದನ್ನೂ ಓದಿ: ಪುಷ್ಕರ್​ ಗಿರಿಗೌಡ ಚೊಚ್ಚಲ ನಿರ್ದೇಶನದ 'ಸೈಕಿಕ್'​ ಚಿತ್ರದ ಟೀಸರ್​ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.