ಮಧುರವಾದ ಪ್ರೇಮಕಥೆ ಜೊತೆಗೆ ಫಿಲಾಸಫಿ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಕಟಕವಿ ಎಂದೇ ಜನಪ್ರಿಯರಾಗಿರುವ ನಿರ್ದೇಶಕ ಯೋಗರಾಜ್ ಭಟ್. ಸದ್ಯ ಗರಡಿ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಗರಡಿ ಚಿತ್ರದ ಮೊದಲ ಹಾಡನ್ನು ಭಟ್ರು ಅನಾವರಣಗೊಳಿಸಿದ್ದಾರೆ.
ತಮಟೆ ಬಾರಿಸುವ ಮೂಲಕ ತಮ್ಮ ಗರಡಿ ಚಿತ್ರದ ಪ್ರಚಾರ ಮಾಡಿದ ಭಟ್ರ ಹೊಸ ಅವತಾರಕ್ಕೆ ಸಿನಿ ಸ್ನೇಹಿತರು, ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಈವರೆಗೂ ಮೀಸೆಯಲ್ಲೇ ಕಾಣಿಸಿಕೊಂಡಿದ್ದ ಭಟ್ರು ಇದೇ ಮೊದಲ ಬಾರಿಗೆ ಮೀಸೆ ತೆಗೆದಿದ್ದಾರೆ. ಅವರ ಈ ಹೊಸ ಅವತಾರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.
ಅಷ್ಟಕ್ಕೂ ಡೈರೆಕ್ಟರ್ ಯೋಗರಾಜ್ ಭಟ್ ಮೀಸೆ ತೆಗೆದಿರೋದು ಯಾಕೆ ಗೊತ್ತಾ?. ಒಂದು ಪಾತ್ರಕ್ಕಾಗಿ ಎಂದರೆ ನೀವು ನಂಬಲೇಬೇಕು. ಹೌದು, ಯೋಗರಾಜ್ ಭಟ್ಟರಿಗೆ ಅಭಿನಯ ಹೊಸದಲ್ಲ. ಈಗಾಗಲೇ ದೇವ್ರು ಚಿತ್ರದಿಂದ ಹಿಡಿದು ಹಲವು ಚಿತ್ರಗಳಲ್ಲಿ ಅವರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ಅವರು ದೊಡ್ಡದೊಂದು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅದೇ ಪಾತ್ರದ ಗೆಟಪ್ಗಾಗಿ ಅವರು ಮೀಸೆ ತೆಗೆದಿದ್ದಾರಂತೆ
ಯೋಗರಾಜ್ ಭಟ್ ಮೀಸೆ ತೆಗೆದು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿರೋ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅಂದ ಹಾಗೆ, ಭಟ್ಟರು ಮೀಸೆ ತೆಗೆದಿದ್ದು ತಮ್ಮದೇ 'ಕರಟಕ ದಮನಕ' ಚಿತ್ರಕ್ಕಾಗಿ. ಶಿವ ರಾಜ್ಕುಮಾರ್ ಮತ್ತು ಪ್ರಭುದೇವ ಅಭಿನಯದಲ್ಲಿ ಯೋಗರಾಜ್ ಭಟ್ ಈ 'ಕರಟಕ ದಮನಕ' ಚಿತ್ರವನ್ನು ನಿರ್ದೇಶಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಆ ಚಿತ್ರದಲ್ಲಿ ಅವರು ಅಜ್ಜಯ್ಯ ಎಂಬ ಪಾತ್ರವನ್ನು ಮಾಡಿದ್ದಾರೆ.
ಈ ಪಾತ್ರ ಇಡೀ ಚಿತ್ರದಲ್ಲಿ ಕೆದರಿದ ಕೂದಲು ಮತ್ತು ಉದ್ದ ಗಡ್ಡದಲ್ಲಿ ಕಾಣಿಸಿಕೊಳ್ಳುತ್ತದೆಯಂತೆ. ಗಡ್ಡದ ವಿಗ್ ಹೇಗೂ ಇದ್ದೇ ಇದೆ. ಇನ್ನು, ಮೀಸೆ ಮೇಲೆ ಮೀಸೆ ಅಂಟಿಸಿದರೆ ಅದು ಸರಿಯಾಗಿ ಕಾಣಿಸುತ್ತಿರಲಿಲ್ಲವಂತೆ. ಅದೇ ಕಾರಣಕ್ಕೆ, ಅದೆಷ್ಟೋ ವರ್ಷಗಳ ನಂತರ ಅವರು ಮೀಸೆ ತೆಗಿದಿದ್ದೇನೆಂದು ತಿಳಿಸಿದ್ದಾರೆ.
ಇದನ್ನೂ ಓದಿ: Adipurush: ರಾಮಾಯಣ ಆಧಾರಿತ ಪೌರಾಣಿಕ ಚಿತ್ರದ ಟ್ವಿಟರ್ ವಿಮರ್ಶೆ.. ಹೇಗಿದೆಯಂತಾ ಗೊತ್ತಾ?
ಮೀಸೆ ಬೋಳಿಸಿದಾಗ ಯೋಗರಾಜ್ ಭಟ್ಟರಿಗೆ ಬಹಳ ಕಸಿವಿಸಿ ಆಯಿತಂತೆ. ಅದೇನೋ ಕಳೆದುಕೊಂಡ ಅನುಭವವಾಯಿತಂತೆ. ಅದೂ ಅಲ್ಲದೇ, ಎಲ್ಲರೂ ಈ ಹೊಸ ಗೆಟಪ್ ನೋಡಿ ಪ್ರಶ್ನಿಸಿದಾಗ ಇನ್ನೂ ಕಿರಿಕಿರಿ ಕೂಡ ಆಯಿತಂತೆ. ಈಗ ನಿಧಾನವಾಗಿ ಎಲ್ಲವೂ ಅಭ್ಯಾಸವಾಗುತ್ತಿದೆ ಎಂಬುದು ನಿರ್ದೇಶಕರ ಮಾತು.
ಇದನ್ನೂ ಓದಿ: ತಮಟೆ ಬಾರಿಸಿಕೊಂಡು 'ಗರಡಿ' ಪ್ರಚಾರ ಮಾಡಿದರು ಯೋಗರಾಜ್ ಭಟ್ರು..
ಇನ್ನೂ ಕರಟಕ ದಮನಕ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಹಾಡುಗಳ ಚಿತ್ರೀಕರಣ ಮುಗಿಸಿ, ಈ ವರ್ಷದ ಕೊನೆಯಲ್ಲಿ ಸಿನಿಮಾ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯಿಸುತ್ತಿದ್ದು, ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಮಧ್ಯೆ ಯೋಗರಾಜ್ ಭಟ್ ಮೀಸೆ ತೆಗಿಸಿರೋ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಟಾಕ್ ಆಗ್ತಾ ಇರೋದಂತೂ ಸತ್ಯ.