ETV Bharat / entertainment

10 ವರ್ಷ ಪೂರೈಸಿದ YJHD: ಕಲಾವಿದರ ಸಮಾಗಮ, ಸೆಲ್ಫಿಗೆ ಪೋಸ್​ ಕೊಟ್ಟ​ ಮಾಜಿ ಲವರ್ಸ್ - ಯೇ ಜವಾನಿ ಹೈ ದಿವಾನಿ ನಟರು

ಯೇ ಜವಾನಿ ಹೈ ದಿವಾನಿ ಸಿನಿಮಾ 10 ವರ್ಷ ಪೂರೈಸಿದ್ದು, ಚಿತ್ರತಂಡ ಮುಂಬೈನಲ್ಲಿ ಪಾರ್ಟಿ ಆಯೋಜಿಸಿತ್ತು.

Yeh Jawaani Hai Deewani cast
ಯೇ ಜವಾನಿ ಹೈ ದಿವಾನಿ ತಂಡ
author img

By

Published : Jun 1, 2023, 1:54 PM IST

ಅಯಾನ್ ಮುಖರ್ಜಿ ಅವರ ಯೇ ಜವಾನಿ ಹೈ ದಿವಾನಿ (Yeh Jawaani Hai Deewani) ಸಿನಿಮಾ ಬಿಡುಗಡೆಗೊಂಡು ನಿನ್ನೆಗೆ 10 ವರ್ಷ ಪೂರೈಸಿದೆ. 2013 ರ ಚಲನಚಿತ್ರದ ದಶಕದ ಸಂಭ್ರಮವನ್ನು ಜೋರಾಗೇ ಆಚರಿಸಲಾಗಿದೆ. ಸಿನಿಮಾದಲ್ಲಿ ನಟಿಸಿದ ಕಲಾವಿದರು ಸೇರಿದಂತೆ ಚಿತ್ರತಂಡ ಈ ವಿಶೇಷ ಸಂದರ್ಭವನ್ನು ಗುರುತಿಸಲು ಮುಂಬೈನಲ್ಲಿ ಪಾರ್ಟಿ ಆಯೋಜಿಸಿದ್ದರು. ಯೇ ಜವಾನಿ ಹೈ ದಿವಾನಿ ತಂಡ, ನಟರಾದ ರಣ್​​ಬೀರ್ ಕಪೂರ್, ದೀಪಿಕಾ ಪಡುಕೋಣೆ, ಆದಿತ್ಯ ರಾಯ್ ಕಪೂರ್ ಮತ್ತು ಕಲ್ಕಿ ಕೊಚ್ಲಿನ್‌, ಚಿತ್ರದ ನಿರ್ಮಾಪಕ ಕರಣ್ ಜೋಹರ್ ಮತ್ತು ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ಈ ಖಾಸಗಿ ಪಾರ್ಟಿಯಲ್ಲಿ ಒಟ್ಟುಗೂಡಿದರು.

ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ 'ಯೇ ಜವಾನಿ ಹೈ ದಿವಾನಿ' ಪಾರ್ಟಿಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲ ಫೋಟೋಗಳನ್ನು ಹಂಚಿಕೊಂಡ ಅವರು, "ಕಳೆದ ರಾತ್ರಿ'' (ರೆಡ್​ ಹಾರ್ಟ್ ಎಮೋಜಿಯೊಂದಿಗೆ)" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಈ ಚಿತ್ರಗಳಲ್ಲಿ, ರಣ್​​​ಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಸಹ ನಟರಾದ ಆದಿತ್ಯ ರಾಯ್ ಕಪೂರ್ ಮತ್ತು ಕಲ್ಕಿ ಕೊಚ್ಲಿನ್ ಜೊತೆಗೆ ಪೋಸ್ ನೀಡುವುದನ್ನು ಕಾಣಬಹುದು. ಆದಿತ್ಯ ಮೆರೂನ್ ಶರ್ಟ್ ಧರಿಸಿದ್ದರೆ, ಕಲ್ಕಿ ಕಪ್ಪು ಬಿಳುಪು ಉಡುಪು ಧರಿಸಿದ್ದರು. ಮಾಜಿ ಲವರ್ಸ್ ರಣ್​​​ಬೀರ್ ಮತ್ತು ದೀಪಿಕಾ ಮ್ಯಾಚಿಂಗ್​​ ಬ್ಲ್ಯಾಕ್​ ಡ್ರೆಸ್​ನಲ್ಲಿ ಕಂಗೊಳಿಸಿದರು. ಅವರೆಲ್ಲರೂ ಖುಷಿಯ ಅಲೆಯಲ್ಲಿ ತೇಲಿರುವುದನ್ನು ಚಿತ್ರದಲ್ಲಿ ಕಾಣಬಹುದು ಮತ್ತು ಸೆಲ್ಫಿ ತೆಗೆದುಕೊಳ್ಳುವಾಗ ಪರಸ್ಪರ ಹತ್ತಿರ ಇದ್ದರು.

ನಿರ್ದೇಶಕ ಅಯಾನ್ ಮುಖರ್ಜಿ ಅವರು ರಣ್​​ಬೀರ್, ದೀಪಿಕಾ, ಆದಿತ್ಯ ಮತ್ತು ಕಲ್ಕಿ ಜೊತೆಗೆ ಕರಣ್ ಜೋಹರ್, ಮನೀಶ್ ಮಲ್ಹೋತ್ರಾ ಮತ್ತು ಚಿತ್ರದ ಸಂಗೀತ ಸಂಯೋಜಕ ಪ್ರೀತಮ್ ಚಕ್ರವರ್ತಿ ಅವರೊಂದಿಗಿನ ಗ್ರೂಪ್ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಆದಿತ್ಯ ಅವರ ಸಹೋದರರಾದ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ನಟ ಕುನಾಲ್ ರಾಯ್ ಕಪೂರ್ ಕೂಡ ಇದ್ದಾರೆ. ಇವರು ಸಹ ಯೇ ಜವಾನಿ ಹೈ ದಿವಾನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷದಾಯಕ ಕ್ಲಿಕ್​ಗಾಗಿ, ಕೆಲವರು ಸೋಫಾದಲ್ಲಿ ಕುಳಿತು ಪೋಸ್ ನೀಡಿದರೆ, ಇತರರು ನೆಲದ ಮೇಲೆ ಕುಳಿತಿರುವುದು ಕಂಡುಬಂದಿದೆ. ಈ ಚಿತ್ರದಲ್ಲಿ, ಕರಣ್ ಮತ್ತು ಪ್ರೀತಮ್ ಪಕ್ಕದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದರೆ, ರಣ್​​ಬೀರ್ ಕಲ್ಕಿಯನ್ನು ಬಿಗಿದಪ್ಪಿ ಕುಳಿತಿದ್ದಾರೆ.

ಇದನ್ನೂ ಓದಿ: ತಂದೆಯ ಜನ್ಮದಿನದಂದೇ ಮಹೇಶ್ ಬಾಬು ಹೊಸ ಸಿನಿಮಾ ಶೀರ್ಷಿಕೆ, ಟೀಸರ್ ಅನಾವರಣ

ಬುಧವಾರದಂದು, ಅಯಾನ್ ಮುಖರ್ಜಿ, ಕರಣ್ ಜೋಹರ್ ಮತ್ತು ದೀಪಿಕಾ ಪಡುಕೋಣೆ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವು ಅವರ ಸ್ನೇಹ ಮತ್ತು ಸಂಬಂಧಗಳ ಮೇಲೆ ಕೇಂದ್ರೀಕರಿಸಿದೆ.

ಇದನ್ನೂ ಓದಿ: ದೇಗುಲ ದರ್ಶನ ಪಡೆದ ಸಾರಾ ಅಲಿ ಖಾನ್ ಟ್ರೋಲ್​: ನನ್ನ ನಂಬಿಕೆ, ಭೇಟಿ ಮುಂದುವರಿಸುವೆ ಎಂದ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.