ETV Bharat / entertainment

2023 ಪ್ಯಾಚ್-ಅಪ್‌ ವರ್ಷ: ದ್ವೇಷ ಮರೆತು ಒಂದಾದ ಬಾಲಿವುಡ್ ಮಂದಿ ಇವರೇ ನೋಡಿ - ಸೂಪರ್‌ಸ್ಟಾರ್ ಸಲ್ಮಾನ್ ಖಾನ್

ಬಾಲಿವುಡ್​ನಲ್ಲಿ ಒಳ್ಳೆಯ ಸ್ನೇಹಿತರಾಗಿದ್ದವರು ಯಾವುದೋ ವಿಷಯಕ್ಕೆ ಮನಸ್ತಾಪ ಮಾಡಿಕೊಂಡು ಬೇರೆ ಬೇರೆಯಾಗಿ ಕೊನೆಗೂ 2023 ರಲ್ಲಿ ಒಂದಾಗಿರುವ ಘಟನೆಗಳ ನಡೆದಿದೆ.

Salman Khan
Salman Khan
author img

By ETV Bharat Karnataka Team

Published : Dec 28, 2023, 9:53 AM IST

ಹೈದರಾಬಾದ್ : ಬಾಲಿವುಡ್​ಗೆ ಸಂಬಂಧಿಸಿದಂತೆ 2023 ಅನ್ನು ಪ್ಯಾಚ್ ಅಪ್‌ ವರ್ಷ ಎಂದು ಕರೆಯಬಹುದು. ಗಾಯಕ ಅರಿಜಿತ್ ಸಿಂಗ್ ಅವರು ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಮನೆಗೆ ಬಂದ ನಂತರ ಮತ್ತು ಕರಣ್ ಜೋಹರ್ ಅವರು ಕಾರ್ತಿಕ್ ಆರ್ಯನ್‌ ಹೊಸ ಚಿತ್ರಕ್ಕೆ ಸಹಿ ಹಾಕಿದ ಬಳಿಕ ಹಾಗೂ ಒಂದು ವರ್ಷದ ನಂತರ ಶಾರುಖ್ ಖಾನ್ ಮತ್ತು ಸನ್ನಿ ಡಿಯೋಲ್ ಒಬ್ಬರನ್ನೊಬ್ಬರು ಹಾಡಿ ಹೊಗಳುತ್ತಿರುವುದನ್ನು ಕಂಡು 2023ರನ್ನು ಅಧಿಕೃತವಾಗಿ ಪ್ಯಾಚ್-ಅಪ್‌ಗಳ ವರ್ಷ ಎನ್ನಬಹುದು.

ಹೌದು, ಸಿನಿಮಾ ರಂಗದಲ್ಲಿ ಯಾರು?, ಯಾವಾಗ? ಯಾವ ಕಾರಣಕ್ಕೆ ಜಗಳ ಮಾಡಿಕೊಂಡು ದೂರ ದೂರ ಆಗುತ್ತಾರೆ ಅಂತ ಊಹಿಸುವುದಕ್ಕೂ ಆಗುವುದಿಲ್ಲ, ಅಷ್ಟರ ಮಟ್ಟಿಗೆ ಇಲ್ಲಿ ಸಂಬಂಧಗಳು ನಾಜೂಕಾಗಿವೆ. ಅದರಲ್ಲೂ, ಬಾಲಿವುಡ್‌ನಲ್ಲಿ ಇಂದು ಒಳ್ಳೆಯ ಸ್ನೇಹಿತರಾಗಿರುವವರು ನಾಳೆ ಯಾವುದೋ ವಿಷಯಕ್ಕೆ ಮನಸ್ತಾಪ ಮಾಡಿಕೊಂಡು ದೂರ ಆಗಿರುತ್ತಾರೆ. ಬಳಿಕ, ಮತ್ಯಾವುದೋ ಸಂದರ್ಭದಲ್ಲಿ ಒಂದಾಗುತ್ತಾರೆ.

'ದೋಸ್ತಾನಾ 2' ಅನ್ನು ಅಧಿಕೃತವಾಗಿ ಘೋಷಿಸಿದ ನಂತರ ಕರಣ್ ಜೋಹರ್ ಮತ್ತು ಕಾರ್ತಿಕ್ ಆರ್ಯನ್ ನಡುವಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗಿವೆ. ಹಾಗೆಯೇ, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಅವರ 9 ವರ್ಷಗಳ ವೈಷಮ್ಯ 2023 ರಲ್ಲಿ ಕೊನೆಗೊಂಡಿದೆ.

2014 ರಲ್ಲಿ ಪ್ರಶಸ್ತಿ ಸಮಾರಂಭವೊಂದರಲ್ಲಿ ಸಲ್ಮಾನ್ ಖಾನ್ ಮತ್ತು ಅರಿಜಿತ್ ಸಿಂಗ್ ನಡುವೆ ದೊಡ್ಡ ಜಗಳವೇ ನಡೆದಿತ್ತು. ಆ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಅರಿಜಿತ್ ಸಿಂಗ್ ವೇದಿಕೆಗೆ ಬಂದಾಗ ಸಲ್ಮಾನ್ ಖಾನ್ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಆದರೆ, ಇತ್ತಿಚೆಗಷ್ಟೇ ಗಾಯಕ ಅರಿಜಿತ್ ಸಿಂಗ್ ಮುಂಬೈನಲ್ಲಿರುವ ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಿಂದ ತಮ್ಮ ಕಾರಿನಲ್ಲಿ ಕೂತು ಹೊರ ಹೋಗುತ್ತಿರುವ ವಿಡಿಯೋವನ್ನು ಸೆರೆ ಹಿಡಿಯಲಾಗಿತ್ತು. ಈ ವಿಡಿಯೋ ನೋಡಿದ ಅಭಿಮಾನಿಗಳು ಇಬ್ಬರ ನಡುವಿನ ದ್ವೇಷ ಕಡಿಮೆಯಾಗಿದೆ ಎಂದು ಮಾತನಾಡಿಕೊಂಡಿದ್ದರು.

ಶಾರುಖ್ ಖಾನ್ ಮತ್ತು ಸನ್ನಿ ಡಿಯೋಲ್: ಇನ್ನು ಶಾರುಖ್ ಖಾನ್ ಮತ್ತು ಸನ್ನಿ ಡಿಯೋಲ್ ನಡುವಿನ ಶೀತಲ ಸಮರ ತಣ್ಣಗಾಗಿದೆ. ಇಬ್ಬರು ನಟರು 16 ವರ್ಷಗಳ ನಂತರ ರಾಜಿ ಮಾಡಿಕೊಂಡಿದ್ದಾರೆ. ಡರ್ರ್‌ನಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡ ನಂತರ ವೈಷಮ್ಯ ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಸೋನು ನಿಗಮ್ ಮತ್ತು ಭೂಷಣ್ ಕುಮಾರ್ ಪ್ಯಾಚ್ ಅಪ್: ಮೂರು ವರ್ಷಗಳ ಹಗೆತನದ ನಂತರ ಟಿ ಸಿರೀಸ್ ಸಿಇಒ ಭೂಷಣ್ ಕುಮಾರ್ ಮತ್ತು ಗಾಯಕ ಸೋನು ನಿಗಮ್ ತಮ್ಮ ಭಿನ್ನಾಭಿಪ್ರಾಯಗಳನ್ನು ರಾಜಿ ಮಾಡಿಕೊಂಡಿದ್ದಾರೆ. 2020 ರಲ್ಲಿ ಸೋನು ಅವರು ಸಾಮಾಜಿಕ ಮಾಧ್ಯಮದಲ್ಲಿ ಮ್ಯೂಸಿಕ್​ "ಮಾಫಿಯಾ" ಕುರಿತು ಬಹಿರಂಗವಾಗಿ ಮಾತನಾಡಿದಾಗ ಇಬ್ಬರ ನಡುವೆ ಮುನಿಸು ಉಂಟಾಗಿತ್ತು. ಆದರೆ ಈಗ ಇಬ್ಬರ ನಡುವೆ ಎಲ್ಲವೂ ಚೆನ್ನಾಗಿದೆಯಂತೆ.

ಇದನ್ನೂ ಓದಿ : ಮಾಜಿ ಪತಿ ಮದುವೆ ಬೆನ್ನಲ್ಲೇ ಮಲೈಕಾ ಅರೋರಾ 'ಲವ್​​' ಸ್ಟೋರಿ

ರಾಜಿ ಮಾಡಿಕೊಂಡ ಗೋವಿಂದ ಮತ್ತು ಡೇವಿಡ್ ಧವನ್ : ಗೋವಿಂದ ಮತ್ತು ಡೇವಿಡ್ ಧವನ್ ಅವರು ಕೊನೆಯ ಚಲನಚಿತ್ರ 2009 ರ ಡು ನಾಟ್ ಡಿಸ್ಟರ್ಬ್ ( Do Knot Disturb ) ಅನ್ನು ಒಟ್ಟಿಗೆ ಚಿತ್ರಿಸಿದ ನಂತರ 2010 ರ ದಶಕದ ಮಧ್ಯಭಾಗದಲ್ಲಿ ಜಗಳ ಮಾಡಿಕೊಂಡಿದ್ದರು. ಚಿತ್ರನಿರ್ಮಾಪಕ ಡೇವಿಡ್ ಧವನ್ ಐದು ಸಿನಿಮಾಗಳನ್ನು ಮಾಡಲು ಮುಂದಾದರೂ ಅವುಗಳಲ್ಲಿ ಗೋವಿಂದ ನಟಿಸಲಿಲ್ಲ. 2023 ರಲ್ಲಿ ಐಕಾನಿಕ್ ಯುಗಳ ಗೀತೆ ಮಾಡುವಾಗ ರಾಜಿಯಾಗಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್: ಅಕ್ಷಯ್ ಮತ್ತು ರವೀನಾ ಸ್ವಲ್ಪ ಸಮಯದ ಡೇಟಿಂಗ್ ನಂತರ ಪರಸ್ಪರ ದೂರವಾಗಿದ್ದರು. ಆದರೆ, 2023 ರಲ್ಲಿ ಇಬ್ಬರೂ ಒಂದೇ ಸಿನಿಮಾದಲ್ಲಿ ಅಭಿನಯಿಸುವುದಾಗಿ ಬಹಿರಂಗಪಡಿಸಿದ ಬಳಿಕ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದ್ದರು. ಇವರಿಬ್ಬರು ಮುಂಬರುವ ವೆಲ್ಕಮ್ ಟು ದಿ ಜಂಗಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.