ETV Bharat / entertainment

700 ಅಭಿಮಾನಿಗಳ ಜೊತೆ ಯಶ್ ಸೆಲ್ಫಿ... ರಾಕಿಂಗ್ ಸ್ಟಾರ್ ಸರಳತೆಗೆ ಮೆಚ್ಚುಗೆ - Kannada cinema

ಈವೆಂಟ್‌ನಲ್ಲಿ ಹಾಜರಿದ್ದ 700ಕ್ಕೂ ಹೆಚ್ಚು ಅಭಿಮಾನಿಗಳ ಜೊತೆ ಸೆಲ್ಫಿ ತೆಗೆಸಿಕೊಂಡ ನಟ ರಾಕಿಂಗ್​​ ಸ್ಟಾರ್​​ ಯಶ್.

Yash Takes selfie with 700 fans
ಈವೆಂಟ್‌ನಲ್ಲಿ ಹಾಜರಿದ್ದ 700ಕ್ಕೂ ಹೆಚ್ಚು ಅಭಿಮಾನಿಗಳ ಜೊತೆ ಸೆಲ್ಫಿ ತೆಗೆಸಿಕೊಂಡ ನಟ ರಾಕಿಂಗ್​​ ಸ್ಟಾರ್​​ ಯಶ್
author img

By

Published : Dec 17, 2022, 9:40 PM IST

ಕೆಜಿಎಫ್​ ಚಿತ್ರಗಳ ಬಳಿಕ ರಾಕಿಂಗ್​​ ಸ್ಟಾರ್​​ ಯಶ್ ಭಾರತೀಯ ಚಿತ್ರರಂಗದಲ್ಲೇ ತಮ್ಮದೇ ಆದ ಡಿಫ್ರೆಂಟ್​ ಐಡೆಂಟಿಟಿ ಹೊಂದಿದ್ದಾರೆ. ಸೂಪರ್‌ ಹಿಟ್ ಚಿತ್ರಗಳಿಗೆ ಮಾತ್ರವಲ್ಲದೇ ಅವರ ಅಭಿಮಾನಿಗಳ ಮೇಲಿನ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅಭಿಮಾನಿಗಳೊಂದಿಗೆ ಅವರ ಪ್ರೀತಿಯ ವರ್ತನೆ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ.

ಅಭಿಮಾನಿಗಳ ಮನ ಗೆಲ್ಲುವ ವಿಷಯದಲ್ಲಿ ತಾವು ಮೇರು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಹೌದು, ಯಶ್ ಇತ್ತೀಚಿಗೆ ಬೆಂಗಳೂರಿನಲ್ಲಿ ಈವೆಂಟ್​ ಒಂದರಲ್ಲಿ ಭಾಗಿಯಾಗಿದ್ದ ವೇಳೆ 700ಕ್ಕೂ ಹೆಚ್ಚು ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈವೆಂಟ್‌ನ ಸಂಘಟಕರು ಎಲ್ಲರೊಂದಿಗೆ ಒಟ್ಟಾಗಿ ಗ್ರೂಪ್​ ಫೋಟೋ ಕ್ಲಿಕ್ಕಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಆದರೆ ಯಶ್​​ ಒಪ್ಪಲಿಲ್ಲ, ಈವೆಂಟ್‌ನಲ್ಲಿ ಹಾಜರಿದ್ದ ಎಲ್ಲಾ ಅಭಿಮಾನಿಗಳೊಂದಿಗೆ ಫೋಟೋ ತೆಗೆದುಕೊಳ್ಳಲು ನಿರ್ಧರಿಸಿದರು. ಸೆಲ್ಫಿ ಮತ್ತು ಫೋಟೋಗಳನ್ನು ಕ್ಲಿಕ್ಕಿಸಿದ ಹಿನ್ನೆಲೆ, ಕಾರ್ಯಕ್ರಮ ಮುಗಿಯಲು ಹೆಚ್ಚುವರಿ ಗಂಟೆ ತೆಗೆದುಕೊಂಡಿತು.

ಅಭಿಮಾನಿಗಳು ಯಶ್ ಅವರ ಈ ಸ್ವಭಾವವನ್ನು ಪ್ರಶಂಸಿಸುತ್ತಿದ್ದಾರೆ. ದೂರದ ಊರುಗಳಿಂದ ಬೆಂಗಳೂರಿಗೆ ಆಗಮಿಸಿದ್ದ ಅಭಿಮಾನಿಗಳು, ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು. ಕನ್ನಡ ಚಿತ್ರರಂಗಕ್ಕೆ ಯಶ್ ಕೊಡುಗೆ ಅಪಾರ. ಯಶ್ ದೊಡ್ಡ ಸ್ಟಾರ್ ಆಗಿದ್ದರೂ ಸರಳ, ವಿನಯ ಸ್ವಭಾವದಿಂದ ನೆಟ್ಟಿಗರ ಮನ ಗೆದ್ದಿದ್ದಾರೆ.

ಇದನ್ನೂ ಓದಿ:ಅಪ್ಪು ಜೀವನ ಎಲ್ಲರಿಗೂ ಮಾದರಿ, ಬೆಂಗಳೂರು ನನ್ನ ಎರಡನೇ ಮನೆ: ನಟ ವಿಶಾಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.