ETV Bharat / entertainment

ವಯೋಸಹಜ ಅನಾರೋಗ್ಯ: ಯಶ್ ಚೋಪ್ರಾ ಪತ್ನಿ ಪಮೇಲಾ ನಿಧನ!

ದಿವಂಗತ ಯಶ್ ಚೋಪ್ರಾ ಪತ್ನಿ ಪಮೇಲಾ ಚೋಪ್ರಾ ಕೊನೆಯುಸಿರೆಳೆದಿದ್ದಾರೆ.

Pamela Chopra died
ಯಶ್ ಚೋಪ್ರಾ ಪತ್ನಿ ಪಮೇಲಾ ನಿಧನ
author img

By

Published : Apr 20, 2023, 1:55 PM IST

ಖ್ಯಾತ ಹಿಂದಿ ಚಲಚಿತ್ರ ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ದಿವಂಗತ ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ (Pamela Chopra) ಅವರು ತಮ್ಮ 85ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಮುಂಜಾನೆ ನಿಧನರಾಗಿದ್ದು, ಅಭಿಮಾನಿಗಳು ಮತ್ತು ಚಿತ್ರರಂಗ ಕಂಬನಿ ಮಿಡಿದಿದೆ.

ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ, ನಿರ್ಮಾಪಕ ಆಗಿ ಹಿಂದಿ ಚಿತ್ರರಂಗದಲ್ಲಿ ಬಹು ಕಾಲ ಸದ್ದು ಮಾಡಿದ್ದ ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ ಅವರು ತಮ್ಮ ಹಿರಿಯ ಮಗ ಆದಿತ್ಯ ಚೋಪ್ರಾ ಮತ್ತು ಸೊಸೆ, ಬಾಲಿವುಡ್ ಬೇಡಿಕೆ ನಟಿ ರಾಣಿ ಮುಖರ್ಜಿ ಅವರೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದರು. ವೃದ್ಧಾಪ್ಯ ಹಿನ್ನೆಲೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ, ಪತಿ ಯಶ್ ಚೋಪ್ರಾ ಅವರೊಂದಿಗಿನ ಸಂಬಂಧದ ಬಗ್ಗೆ ಇತ್ತೀಚೆಗೆ ಮಾತನಾಡಿದ್ದರು. ಪತಿ ಚಲನಚಿತ್ರ ನಿರ್ಮಾಪಕರಾಗಿ ಕೆಲಸ ಪ್ರಾರಂಭಿಸಿದ ಸಂದರ್ಭ ಹೇಗಿತ್ತು ಎಂಬುದರ ಕುರಿತು ಮಾತನಾಡಿದ್ದರು. ಯಶ್ ಚೋಪ್ರಾ ತಮ್ಮ ಆರಂಭಿಕ ದಿನಗಳಲ್ಲಿ ಸವಾಲುಗಳನ್ನು ಎದುರಿಸಿದ್ದರು. ಬಾಕ್ಸ್ ಆಫೀಸ್ ಗಳಿಕೆ ಸದ್ದು ಮಾಡಲಿಲ್ಲ. ಆದರೂ ಸಹ ಚಲನಚಿತ್ರಗಳನ್ನು ನಿರ್ಮಿಸಿದ ಬಗ್ಗೆ, ಆರಂಭದ ದಿನಗಳ ಬಗ್ಗೆ ಮಾತನಾಡಿದ್ದರು. ತಮ್ಮ ಸ್ವಂತ ನಿರ್ಮಾಣ ಕಂಪನಿಯನ್ನು ಹೇಗೆ ಸ್ಥಾಪಿಸಿದರು ಎಂಬುದನ್ನು ಚರ್ಚಿಸಿದರು.

ಸದ್ಯ ಈ ಸಂಸ್ಥೆ ರಾಷ್ಟ್ರದಲ್ಲೇ ದೊಡ್ಡ ಸ್ಥಾನದಲ್ಲಿದೆ. ಪ್ರಸಿದ್ಧ ಹಿನ್ನೆಲೆ ಗಾಯಕಿ ಪಮೇಲಾ ಅವರು ಯಶ್ ಚೋಪ್ರಾ ಅವರ ಬೆಂಬಲಕ್ಕೆ ಸದಾ ಒಂದು ಹೆಜ್ಜೆ ಮುಂದಿದ್ದರು. ಯಶ್ ಚೋಪ್ರಾ, ಆದಿತ್ಯ ಚೋಪ್ರಾ ಮತ್ತು ಅವರ ಪ್ರೊಡಕ್ಷನ್ ಹೌಸ್ ರಚಿಸಿದ ಹಲವಾರು ಚಿತ್ರಗಳು ಯಶಸ್ವಿಯಾಗಿದೆ. ನಿರ್ಮಾಪಕಿ, ಕಥೆಗಾರ್ತಿ, ಹಿನ್ನೆಲೆ ಗಾಯಕಿಯಾಗಿಯೂ ಕೆಲಸ ಮಾಡಿದ್ದಾರೆ.

1970ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದ ಯಶ್ ಮತ್ತು ಪಮೇಲಾ ಅವರಿಗೆ ಆದಿತ್ಯ ಚೋಪ್ರಾ ಮತ್ತು ಉದಯ್ ಚೋಪ್ರಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದಿತ್ಯ ಚೋಪ್ರಾ ನಿರ್ಮಾಪಕ ಮತ್ತು ನಿರ್ದೇಶಕ. ಅವರು ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರನ್ನು ಮದುವೆಯಾಗಿದ್ದಾರೆ. ಇನ್ನೂ ಉದಯ್ ಚೋಪ್ರಾ ನಟ, ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಒಟಿಟಿ, ಥಿಯೇಟರ್‌ಗಳಲ್ಲಿ ಕಾಂತಾರದ 'ವರಾಹ ರೂಪಂ' ಬ್ಯಾನ್​ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಅನಾರೋಗ್ಯ ಹಿನ್ನೆಲೆ 15 ದಿನಗಳ ಕಾಲ ಪಮೇಲಾ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ಕೊಡುತ್ತಿದ್ದರು. ಆದರೆ ಅವರ ಸ್ಥಿತಿಯು ಹದಗೆಡುತ್ತಲೇ ಇತ್ತು. ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ. ಅಂತ್ಯಕ್ರಿಯೆ ಬಗ್ಗೆ ಕುಟುಂಬದವರು ಇನ್ನೂ ಬಹಿರಂಗಪಡಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಚಿತ್ರರಂಗದವರು ಮತ್ತು ಅಭಿಮಾನಿಗಳು ಪಮೇಲಾ ಚೋಪ್ರಾ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ಕಚೇರಿಯಲ್ಲಿ ಐಟಿ ಅಧಿಕಾರಿಗಳ ಶೋಧ ಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.