ETV Bharat / entertainment

ಕಾರವಾರದ ವಿಲಕ್ಷಣ ವ್ಯಕ್ತಿಯ ಕಥೆ 'ಟೋಬಿ'.. ಕುತೂಹಲಕಾರಿ ಸಂಗತಿ ಹಂಚಿಕೊಂಡ ಕತೆಗಾರ ದಯಾನಂದ್ - interesting information about toby movie

ಫಸ್ಟ್ ಲುಕ್ ಮೂಲಕವೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಟೋಬಿ ಚಿತ್ರದ ಬಗ್ಗೆ ಖ್ಯಾತ ಕತೆಗಾರ ಟಿ.ಕೆ. ದಯಾನಂದ್ ಕುತೂಹಲಕಾರಿ ವಿಚಾರ ಹಂಚಿಕೊಂಡಿದ್ದಾರೆ.

toby movie
ಕಾರವಾರದ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆ ಟೋಬಿ
author img

By

Published : Jul 1, 2023, 11:13 PM IST

Updated : Jul 2, 2023, 6:25 AM IST

ಕುರುಚಲು ಗಡ್ಡ, ಮೂಗಿಗೆ ದೊಡ್ಡ ಮೂಗುತಿ, ತಲೆ ಹಾಗೂ ಮೂಗಿನಲ್ಲಿ ರಕ್ತದ ಕಲೆಯಿಂದ ಕೂಡಿರುವ ಗಾಯ. ಇದು ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಅಭಿನಯದ 'ಟೋಬಿ' ಸಿನಿಮಾದ ಫಸ್ಟ್ ಲುಕ್ ವಿಶೇಷ. ತಮ್ಮ ಸಹಜ ಅಭಿನಯದ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಚಿತ್ರ ಸದ್ಯ ಗಾಂಧಿನಗರದಲ್ಲಿ ಟಾಕ್ ಆಫ್ ದಿ‌ ಟೌನ್ ಆಗಿದೆ‌.

ಕತೆಗಾರ ಟಿ.ಕೆ. ದಯಾನಂದ್ ಹೇಳುವ ಹಾಗೆಯೇ ಟೋಬಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಾನು ಕಾರವಾರದಲ್ಲಿ ಕಂಡ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆಯಿದು. ನೀವು ಒಬ್ಬರನ್ನು ನೋಡಿದಾಗ ಇವರು ಇಂತಹವರು ಅಂತ ಹೇಳಬಹುದು. ಆದರೆ, ಈ ವ್ಯಕ್ತಿಯನ್ನು ಆ ರೀತಿ ಹೇಳಲಾಗದು. ನಾನು ಆತನ ಕುರಿತು ಕಥೆ ಬರೆದಿದ್ದೇನೆ. ಅದುವೆ ಟೋಬಿ ಅಂತಾರೆ ದಯಾನಂದ್.

ಟೋಬಿ ಅವತಾರದಲ್ಲಿ ಕಾಣಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಮಾತನಾಡಿ, ''ಸಿನಿಮಾ ನೋಡಲು ಬಂದ ಪ್ರೇಕ್ಷಕನಿಗೆ ಮೊದಲು ಸಿನಿಮಾ ಇಷ್ಟ ಆಗಬೇಕು. ನನಗೆ ಅಂತಹ ಸಿನಿಮಾ ಮಾಡುವ ಆಸೆ. ಟೋಬಿ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಎನ್ನಬಹುದು. ನೀವು ಫಸ್ಟ್ ಲುಕ್​ನಲ್ಲಿ ನೋಡುತ್ತಿರುವುದು ಚಿತ್ರದ ಒಂದು ಭಾಗವಷ್ಟೆ. ಇಡೀ ಚಿತ್ರ ಈ ರೀತಿ ಇರುವುದಿಲ್ಲ. ನನಗೆ ಈ ಚಿತ್ರದ ಕಥೆ ಹೊಸತು ಎನಿಸಿತು. ನನ್ನ ಪಾತ್ರ ಕೂಡ ಹಿಂದಿನ ಚಿತ್ರಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ. ನನಗೆ ಗೊತ್ತಿಲ್ಲದ ವಿಷಯವನ್ನು ಕಲಿತು ಈ ಚಿತ್ರದಲ್ಲಿ ಹೇಳಿದ್ದೇನೆ'' ಅಂತಾರೆ.

toby movie
ಟೋಬಿ ಚಿತ್ರತಂಡ

ಇದೇ ಮೊದಲ ಬಾರಿಗೆ ಟೋಬಿ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿಗೆ ಇಬ್ಬರು ನಾಯಕಿಯರಾಗಿ ಸಂಯುಕ್ತ ಹೊರನಾಡು ಹಾಗೂ ಚೈತ್ರಾ ಆಚಾರ್ ಜೊತೆಯಾಗಿದ್ದಾರೆ. ಅಲ್ಲದೆ, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ, ಶ್ರೀಕಾಂತ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಬಹುನಿರೀಕ್ಷಿತ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ಮುಹೂರ್ತ ಫಿಕ್ಸ್​.. ಯಾವಾಗ ಗೊತ್ತಾ?

ಚಿತ್ರವನ್ನು ನಿರ್ದೇಶಕ ಬಾಸಿಲ್ ನಿರ್ದೇಶನ ಮಾಡಿದ್ದು, ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಟೋಬಿ ಚಿತ್ರಕ್ಕೆ 'ಮಾರಿ ಮಾರಿ ..ಮಾರಿಗೆ ದಾರಿ' ಎಂಬ ಅಡಿಬರಹವಿದೆ. ರಾಜ್ ಬಿ ಶೆಟ್ಟಿ ಅವರ ಈ ಹಿಂದಿನ ಚಿತ್ರಗಳಿಗಿಂತ ಟೋಬಿ ಬಿಗ್ ಬಜೆಟ್​ ಸಿನಿಮಾ ಆಗಿದೆ.

ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್, ಕಾಫಿ ಗ್ಯಾಂಗ್ ಸ್ಟುಡಿಯೋಸ್ ಮತ್ತು ಸ್ಮೂತ್ ಸೈಲರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಸದ್ಯ, ಟೋಬಿ ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಾರಿ ಕುತೂಹಲ ಮೂಡಿಸಿದೆ. ಫಸ್ಟ್ ಲುಕ್​ನಲ್ಲಿನ ರಾಜ್ ಬಿ ಶೆಟ್ಟಿ ಅವತಾರ ಕಂಡ ಚಿತ್ರರಸಿಕರ ಕಾತುರವನ್ನು ಮತ್ತಷ್ಟು ಹೆಚ್ಚಿದೆ. ಈ‌ ಚಿತ್ರದ ಟೀಸರ್, ಟ್ರೇಲರ್ ಸದ್ಯದಲ್ಲೇ ಬರಲಿದೆ. ಆಗಸ್ಟ್ 25ಕ್ಕೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: Toby: ಯಪ್ಪಾ! ಮೂಗುತಿ ಧರಿಸಿ 'ಟೋಬಿ' ಅವತಾರ ತಾಳಿದ ರಾಜ್​​ ಬಿ ಶೆಟ್ಟಿ

Last Updated : Jul 2, 2023, 6:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.