ETV Bharat / entertainment

ನರೇಂದ್ರ ಮೋದಿ ಸ್ಟೇಡಿಯಂಗೆ ತಾರೆಗಳ ಮೆರುಗು: ಅನುಷ್ಕಾ, ದೀಪ್​ವಿರ್​ ಸೇರಿ ಹಲವರು- ವಿಡಿಯೋ - ವಿರಾಟ್ ಕೊಹ್ಲಿ

ಏಕದಿನ ವಿಶ್ವಕಪ್​ ಕ್ರಿಕೆಟ್‌ ಫೈನಲ್​ ಹಣಾಹಣಿ ವೀಕ್ಷಿಸಲು ಅನುಷ್ಕಾ ಶರ್ಮಾ, ದೀಪ್​ವಿರ್​ ಸೇರಿ ಹಲವು ಖ್ಯಾತನಾಮರು ಈಗಾಗಲೇ ನರೇಂದ್ರ ಮೋದಿ ಕ್ರೀಡಾಂಗಣ ತಲುಪಿದ್ದಾರೆ.

celebrities reached to Stadium
ಸ್ಟೇಡಿಯಂ ತಲುಪಿದ ಸೆಲೆಬ್ರಿಟಿಗಳು
author img

By ETV Bharat Karnataka Team

Published : Nov 19, 2023, 1:11 PM IST

Updated : Nov 19, 2023, 1:42 PM IST

ಅನುಷ್ಕಾ ಶರ್ಮಾ....

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೈವೋಲ್ಟೇಜ್​ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯ ಶುರುವಾಗಲಿದೆ. ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ ಅಂತಿಮ ಹಣಾಹಣಿಯಲ್ಲಿ ಹೆಚ್ಚಿನ ಸಂಖ್ಯೆಯ ಸೆಲೆಬ್ರಿಟಿಗಳೂ ಭಾಗಿಯಾಗಲಿದ್ದಾರೆ. ಈಗಾಗಲೇ ಹಲವರು ಸಂಭ್ರಮಕ್ಕೆ ಸಾಕ್ಷಿಯಾಗಲು ಕ್ರೀಡಾಂಗಣ ತಲುಪಿದ್ದಾರೆ. ಕ್ರೀಡಾಪ್ರೇಮಿಗಳ ಹರ್ಷೋದ್ಘಾರಕ್ಕೆ ತಾರೆಯರ ದನಿಯೂ ಸೇರಲಿದೆ. ಈ ಕುರಿತ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

  • .

ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಪುತ್ರಿ ವಾಮಿಕಾ ಕೂಡ ಇದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಬಾಲಿವುಡ್​ ನಟಿಯ ಮೊಗದಲ್ಲಿ ತೇಜಸ್ಸಿತ್ತು. ಸೆಮಿ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಭಾರತೀಯ ತಂಡಕ್ಕೆ ಅವರು ಸೂಚಿಸಿದ ಬೆಂಬಲವನ್ನು ನೀವು ಈಗಾಗಲೇ ವೈರಲ್​ ವಿಡಿಯೋಗಳಲ್ಲಿ ನೋಡಿರುತ್ತೀರಿ. ಇದೀಗ ಅಂತಿಮ ಪೈಪೋಟಿಗೆ ಭಾರತವನ್ನು ಬೆಂಬಲಿಸಲು ಸಂಪೂರ್ಣ ಸಜ್ಜಾಗಿದ್ದಾರೆ.

ಬಾಲಿವುಡ್‌ನ ಪವರ್ ಕಪಲ್ ರಣ್​​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ದೀಪ್​ವೀರ್​ ಜೋಡಿ ಟೀಮ್ ಇಂಡಿಯಾ ಜೆರ್ಸಿ ಧರಿಸಿ ಬಂದಿದ್ದಾರೆ. ದೀಪಿಕಾ ಜೊತೆ ತಂದೆ ಪ್ರಕಾಶ್ ಪಡುಕೋಣೆ ಮತ್ತು ಸಹೋದರಿ ಅನಿಶಾ ಪಡುಕೋಣೆ ಕಾಣಿಸಿಕೊಂಡರು. ನಂತರ ರಣ್​ವೀರ್​ ಆಗಮಿಸಿದರು. ಸೆಲೆಬ್ರಿಟಿಗಳು ಆಟದ ಉತ್ಸಾಹ ಹೆಚ್ಚಿಸುತ್ತಿದ್ದು, ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ.

ಸೌತ್ ಸ್ಟಾರ್ ನಟ ದಗ್ಗುಬಾಟಿ ವೆಂಕಟೇಶ್ ಕೂಡ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ನಟನ ಉತ್ಸಾಹ ಮೊಗದಲ್ಲಿ ಎದ್ದು ಕಾಣುತ್ತಿತ್ತು. ದಕ್ಷಿಣ ಚಿತ್ರರಂಗದ ನಟನ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ನಟ ಆಯುಷ್ಮಾನ್ ಖುರಾನಾ ಕೂಡ ಅಹಮದಾಬಾದ್‌ನಲ್ಲಿರುವುದಾಗಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಧರಿಸಿದ ಫೋಟೋ ಹಂಚಿಕೊಂಡು, ಬೆಳಗ್ಗಿನ ಜಾವ ಅಹಮದಾಬಾದ್‌ಗೆ ತಲುಪಿದ ವಿಚಾರವನ್ನು ಬಾಲಿವುಡ್​ ನಟ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ ಫೈನಲ್‌ನಲ್ಲಿ ಗೆಲುವು ನಮ್ಮದೇ ಎಂದ ಸೆಲೆಬ್ರಿಟಿಗಳು

ಇನ್ನೂ ಹಿರಿಯ ನಟ ಅನಿಲ್​ ಕಪೂರ್​ ಕೂಡ ಇಂದು ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಪಂದ್ಯ ವೀಕ್ಷಣೆಗೆ ತೆರಳುತ್ತಿದ್ದಾರೆಂದು ಊಹಿಸಲಾಗಿದೆ. ಇಂಟರ್​ನೆಟ್​ ಪರ್ಸನಾಲಿಟಿ ಮಿಸ್ಟರ್ ಫೈಸು ಸಹ ಅಂತಿಮ ಹೋರಾಟಕ್ಕೆ ಸಾಕ್ಷಿಯಾಗಲು ಕ್ರೀಡಾಂಗಣ ತಲುಪಿದ್ದಾರೆ.

ಇದನ್ನೂ ಓದಿ: ಫೈನಲ್‌ ಪಂದ್ಯದತ್ತ ದಿಟ್ಟ ಹೆಜ್ಜೆ ಹಾಕಿದ ಟೀಂ ಇಂಡಿಯಾ​; ಸ್ಟೇಡಿಯಂ ಸುತ್ತ ಜನಸಾಗರ! ವಿಡಿಯೋ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ರೋಚಕ ಹಣಾಹಣಿಗೆ ಸಿದ್ಧಗೊಂಡಿದೆ. ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ಪಂದ್ಯ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದಾರೆ. ಟೀಮ್ ಇಂಡಿಯಾ ಮತ್ತೊಂದು ಐತಿಹಾಸಿಕ ವಿಜಯಕ್ಕೆ ಸಾಕ್ಷಿಯಾಗಲಿರುವ ಭರವಸೆ ನೀಡಿದೆ.

Last Updated : Nov 19, 2023, 1:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.