ETV Bharat / entertainment

ಪಶ್ಚಿಮ ಬಂಗಾಳದಲ್ಲೂ 'ದಿ ಕೇರಳ ಸ್ಟೋರಿ' ಪ್ರದರ್ಶನ ರದ್ದು: ಶಾಂತಿ ಕಾಪಾಡಲು ಈ ನಿರ್ಧಾರ ಎಂದ ಸಿಎಂ

ಪಶ್ಚಿಮ ಬಂಗಾಳ ಸರ್ಕಾರವು ಥಿಯೇಟರ್​ಗಳಲ್ಲಿ 'ದಿ ಕೇರಳ ಸ್ಟೋರಿ' ಪ್ರದರ್ಶನಕ್ಕೆ ತಡೆಯೊಡ್ಡಿದೆ.

The Kerala Story
ದಿ ಕೇರಳ ಸ್ಟೋರಿ
author img

By

Published : May 8, 2023, 6:32 PM IST

ಧಾರ್ಮಿಕವಾಗಿ ವಿವಾದಕ್ಕೆ ಕಾರಣವಾದ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಪಶ್ಚಿಮ ಬಂಗಾಳದಲ್ಲಿ ವಿರೋಧ ವ್ಯಕ್ತವಾಗಿದೆ. ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ವಿವಾದಗಳಿಂದ ಸುತ್ತುವರಿದಿರುವ ಚಿತ್ರವು ಹಲವಾರು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ಎದುರಿಸುತ್ತಿದೆ. ಇದೀಗ ಪಶ್ಚಿಮ ಬಂಗಾಳದಲ್ಲೂ ಈ ಚಿತ್ರ ಪ್ರದರ್ಶನ ಕಾಣದಂತೆ ತಡೆಯೊಡ್ಡಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಈ ನಿರ್ಧಾರ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ಕಾಣುತ್ತಿರುವ ಥಿಯೇಟರ್​ನಿಂದ ಚಿತ್ರವನ್ನು ತೆಗೆದುಹಾಕುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದ್ದಾರೆ.

"ಬಂಗಾಳದಲ್ಲಿ ಶಾಂತಿ ಕಾಪಾಡಲು ಮತ್ತು ದ್ವೇಷದ ಕಿಚ್ಚು ಹರಡದಂತೆ ಹಾಗೂ ಹಿಂಸಾಚಾರದ ಯಾವುದೇ ಘಟನೆ ನಡೆಯದಂತೆ ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ಪಕ್ಷದವರು ಈ ಸಿನಿಮಾ ಪ್ರದರ್ಶನಕ್ಕೆ ಧನ ಸಹಾಯ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈಗಾಗಲೇ ಕೆಲವು ರಾಜಕೀಯ ವ್ಯಕ್ತಿಗಳು, ಮುಸ್ಲಿಂ ಸಂಘಟನೆಗಳು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಇದೀಗ ಪಶ್ಚಿಮ ಬಂಗಾಳದಲ್ಲೂ ಚಿತ್ರ ನಿಷೇಧಿಸಲಾಗಿದೆ.

ತಮಿಳುನಾಡಿನಲ್ಲೂ ಸಿನಿಮಾ ಪ್ರದರ್ಶನ ರದ್ದು​: ವಿವಾದ ಮತ್ತು ಪ್ರತಿಭಟನೆಗಳ ನಡುವೆಯೇ ಮೇ 5 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 'ದಿ ಕೇರಳ ಸ್ಟೋರಿ' ಚಿತ್ರದ ಪ್ರದರ್ಶನವನ್ನು ತಮಿಳುನಾಡಿನಲ್ಲಿಯೂ ಸ್ಥಗಿತಗೊಳಿಸಲಾಗಿದೆ. ಸಿನಿಮಾದ ಕುರಿತಾದ ವಿಮರ್ಶೆ, ಕಳಪೆ ಬಾಕ್ಸ್ ಆಫೀಸ್ ಕಲೆಕ್ಷನ್‌ ಮತ್ತು ಕಾವೇರಿದ ಪ್ರತಿಭಟನೆಗಳ ನಡುವೆ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ನಿನ್ನೆಯಿಂದ (ಮೇ 7 ) ರಿಂದ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ. ಏಪ್ರಿಲ್ 6 ರಂದು ನಾಮ್ ತಮಿಳರ್ ಕಚ್ಚಿ (ಎನ್​ಟಿಕೆ) ಚೆನ್ನೈನಲ್ಲಿ ಚಿತ್ರದ ಬಿಡುಗಡೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸಿತ್ತು.

ಇದನ್ನೂ ಓದಿ: ಪಿಎಂ ಮೋದಿಗೆ ಧನ್ಯವಾದ ಅರ್ಪಿಸಿದ 'ದಿ ಕೇರಳ ಸ್ಟೋರಿ' ನಟಿ: ವಿರೋಧಿಗಳಿಗೆ ಅದಾ ಶರ್ಮಾ ಹೀಗಂದ್ರು!

ನಟ ಮತ್ತು ನಿರ್ದೇಶಕರೂ ಆಗಿರುವ ಸೀಮಾನ್ ಅವರು ಎನ್‌ಟಿಕೆ ಕಾರ್ಯಕರ್ತರೊಂದಿಗೆ ಅಣ್ಣಾನಗರ ಆರ್ಚ್ ಬಳಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. "ದಿ ಕೇರಳ ಸ್ಟೋರಿ" ಸಿನಿಮಾವು ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯಂತಹ ಕಥಾವಸ್ತುವನ್ನು ಹೊಂದಿದೆ. ಜೊತೆಗೆ, ಸಿನಿಮಾದಲ್ಲಿ ಕೇರಳ ಮತ್ತು ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ, ಇದರಿಂದ ಕೋಮು ಉದ್ವಿಗ್ನತೆ ಉಂಟಾಗಬಹುದು ಎಂಬ ಆರೋಪ ಕೇಳಿಬಂದಿದೆ.

ಸುದೀಪ್ತೋ ಸೇನ್​ ನಿರ್ದೇಶನದ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. ಚಲನ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಮೇ 5 ರಂದು ಬಿಡುಗಡೆಯಾದ ಚಿತ್ರ ಮೊದಲ ದಿನವೇ ಕೇರಳದ 20 ಥಿಯೇಟರ್​ನಲ್ಲಿ ಮಾತ್ರ ಪ್ರದರ್ಶನ ಕಂಡಿದೆ. ಕಾಶ್ಮೀರ್‌ ಫೈಲ್ಸ್‌ ಸಿನಿಮಾ ತೆರೆಕಂಡ ನಂತರ ಧಾರ್ಮಿಕವಾಗಿ ವಿವಾದಕ್ಕೆ 'ದಿ ಕೇರಳ ಸ್ಟೋರಿ' ಕಾರಣವಾಗಿದೆ. ವಿವಾದದ ನಡುವೆಯೂ ಸಹ ಹಲವೆಡೆ ಚಿತ್ರಮಂದಿರಗಳು ಹೌಸ್​ ಫುಲ್​​ ಆಗಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 'ದಿ ಕೇರಳ ಸ್ಟೋರಿ' ವೀಕ್ಷಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.