ಹೈದರಾಬಾದ್: ಜೈಲರ್ ಹಿಟ್ನಲ್ಲಿ ತೇಲಾಡುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇತ್ತೀಚೆಗೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಭೇಟಿ ಮಾಡಿದ್ದರು. ರಜಿನಿಕಾಂತ್ ಅವರ ಭೇಟಿಯ ಬಗ್ಗೆ ಮಲೇಷ್ಯಾ ಪ್ರಧಾನಿ ತಮ್ಮ ಎಕ್ಸ್ ಆ್ಯಪ್ ಖಾತೆಯಲ್ಲಿ ಪೋಸ್ಟ್ ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
-
Hari ini saya menerima kunjungan bintang filem India, Rajinikanth yakni satu nama yang tidak asing lagi di pentas dunia seni asia dan antarabangsa.
— Anwar Ibrahim (@anwaribrahim) September 11, 2023 " class="align-text-top noRightClick twitterSection" data="
Saya hargai penghormatan yang diberikan beliau terhadap perjuangan saya khasnya terkait isu kesengsaraan dan penderitaan rakyat.… pic.twitter.com/Sj1ChBMuN6
">Hari ini saya menerima kunjungan bintang filem India, Rajinikanth yakni satu nama yang tidak asing lagi di pentas dunia seni asia dan antarabangsa.
— Anwar Ibrahim (@anwaribrahim) September 11, 2023
Saya hargai penghormatan yang diberikan beliau terhadap perjuangan saya khasnya terkait isu kesengsaraan dan penderitaan rakyat.… pic.twitter.com/Sj1ChBMuN6Hari ini saya menerima kunjungan bintang filem India, Rajinikanth yakni satu nama yang tidak asing lagi di pentas dunia seni asia dan antarabangsa.
— Anwar Ibrahim (@anwaribrahim) September 11, 2023
Saya hargai penghormatan yang diberikan beliau terhadap perjuangan saya khasnya terkait isu kesengsaraan dan penderitaan rakyat.… pic.twitter.com/Sj1ChBMuN6
ಭೇಟಿಯ ವೇಳೆಯ ಫೋಟೋಗಳನ್ನು ಹಂಚಿಕೊಂಡ ಅವರು, "ಇಂದು ನಾನು ಏಷ್ಯನ್ ಮತ್ತು ಅಂತಾರಾಷ್ಟ್ರೀಯ ಕಲಾ ಪ್ರಪಂಚದಲ್ಲಿ ಚಿರಪರಿಚಿತರಾಗಿರುವ ಭಾರತೀಯ ಚಲನಚಿತ್ರ ತಾರೆ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ಹೋರಾಟಕ್ಕೆ, ವಿಶೇಷವಾಗಿ ಜನರ ದುಃಖ ಮತ್ತು ಸಂಕಟದ ವಿಷಯದಲ್ಲಿ ಸಿನಿಮಾದ ಮೂಲಕ ಬೆಳಕು ಚೆಲ್ಲುತ್ತಿರುವುದನ್ನು ನಾನು ಪ್ರಶಂಸಿಸುತ್ತೇನೆ. ಅವರ ಮುಂದಿನ ಚಿತ್ರದಲ್ಲೂ ಸಾಮಾಜಿಕ ಸಮಸ್ಯೆಗಳ ಕುರಿತಾದ ವಿಚಾರಗಳನ್ನು ನಿಸ್ಸಂದೇಹವಾಗಿ ಪ್ರಸ್ತುತವಾಗುತ್ತದೆ. ರಜನಿಕಾಂತ್ ಅವರ ಯಶಸ್ಸು ಹೀಗೆ ಮುಂದುವರೆಯಲಿ ಎಂದು ನಾವು ಹಾರೈಸುತ್ತೇವೆ. ರಜನಿಕಾಂತ್ ಅವರು ಚಲನಚಿತ್ರ ಜಗತ್ತಿನಲ್ಲಿ ಯಶಸ್ಸನ್ನು ಮುಂದುವರೆಸಬೇಕು ಎಂದು ಹಾರೈಸುತ್ತೇವೆ" ಎಂದು ತಮ್ಮ ಪೋಸ್ಟ್‌ಗೆ ಕ್ಯಾಪ್ಶನ್ ಬರೆದಿದ್ದಾರೆ.
ರಜನಿಕಾಂತ್ ಅವರು ಬಿಳಿ ಶರ್ಟ್ ಮತ್ತು ಧೋತಿಯಲ್ಲಿ ಭೇಟಿ ಮಾಡಿದ್ದಾರೆ. ಆದರೆ ಪ್ರಧಾನಿ ಅನ್ವರ್ ಇಬ್ರಾಹಿಂ ಅಧಿಕೃತವಾಗಿ ಸೂಟ್‌ನಲ್ಲಿ ಧರಿಸಿದ್ದರು. ಮಲೇಷ್ಯಾ ಪ್ರಧಾನಿ ರಜನೀಕಾಂತ್ ಅವರು ಹತ್ತಿರಕ್ಕೆ ಬಂದಾಗ ಅವರ ಶಿವಾಜಿ ಸಿನಿಮಾದಲ್ಲಿ ಮಾಡುವ ಆ್ಯಕ್ಷನ್ ಮಾಡಿ ನಗಿಸಿದ್ದಾರೆ. ರಜನಿಕಾಂತ್ ಶೇಕ್ ಹ್ಯಾಡ್ ಮಾಡಲು ಮುಂದಾದಾಗ ಪ್ರಧಾನಿ ಅವರಂತೆ ನಟಿಸಿದರು.
-
PM Terima Kunjungan Bintang Filem India, Rajinikanth di Putrajaya
— Malaysian Update🇲🇾 (@Msia_Update) September 12, 2023 " class="align-text-top noRightClick twitterSection" data="
PM hargai penghormatan yang diberikan oleh Rajnikanth terhadap perjuangan PM yang berkait dengan isu kesengsaraan dan penderitaan rakyat. pic.twitter.com/4vgUsm4Feb
">PM Terima Kunjungan Bintang Filem India, Rajinikanth di Putrajaya
— Malaysian Update🇲🇾 (@Msia_Update) September 12, 2023
PM hargai penghormatan yang diberikan oleh Rajnikanth terhadap perjuangan PM yang berkait dengan isu kesengsaraan dan penderitaan rakyat. pic.twitter.com/4vgUsm4FebPM Terima Kunjungan Bintang Filem India, Rajinikanth di Putrajaya
— Malaysian Update🇲🇾 (@Msia_Update) September 12, 2023
PM hargai penghormatan yang diberikan oleh Rajnikanth terhadap perjuangan PM yang berkait dengan isu kesengsaraan dan penderitaan rakyat. pic.twitter.com/4vgUsm4Feb
ಆಗಸ್ಟ್ 10 ರಂದು ಬಿಡುಗಡೆಯಾದ ಜೈಲರ್ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ. ತಮಿಳು ಮಾತ್ರವಲ್ಲದೇ ಪ್ಯಾನ್ ಇಂಡೀಯಾ ಸಿನಿಮಾ ಆಗಿ ಹಿಟ್ ಆಗಿದೆ. ಬಿಡುಗಡೆ ಆದ ಎರಡೇ ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಹಳೆ ದಾಖಲೆಗಳನ್ನು ಧೂಳಿ ಪಟಮಾಡಿತ್ತು. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಆ್ಯಕ್ಷನ್ ಚಿತ್ರದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ ಜೊತೆಯಲ್ಲಿ ಮೋಹನ್‌ಲಾಲ್, ಶಿವರಾಜ್‌ಕುಮಾರ್, ಸುನೀಲ್, ತಮನ್ನಾ, ವಿನಾಯಕ್ ನಟಿಸಿದ್ದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಗಳಿಸಿದಾಗ, ಚಿತ್ರದ ನಿರ್ಮಾಪಕ ಕಲಾನಿದಿ ಮಾರನ್ ಅವರು ರಜನಿಕಾಂತ್‌ಗೆ ದೊಡ್ಡ ಸಂಭಾವನೆ ಮತ್ತು ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಚಿತ್ರದ ಅಗಾಧ ಯಶಸ್ಸಿನ ಮೇಲೆ ಮಾರನ್ ನೆಲ್ಸನ್ ಮತ್ತು ಅನಿರುದ್ಧ್ ಪೋರ್ಷೆ ಕಾರುಗಳನ್ನು ಉಡುಗೊರೆಯಾಗಿ ನೀಡಿದರು. ಇನ್ನು ಮುಂದೆ, ರಜನಿಕಾಂತ್ ಅವರು ಲಾಲ್ ಸಲಾಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅದರಲ್ಲಿ ಅವರು ಅತಿಥಿ ಪಾತ್ರವನ್ನು ಮಾಡುತ್ತಾರೆ. ಈ ಚಿತ್ರವನ್ನು ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸಿದ್ದಾರೆ. ಜೈ ಭೀಮ್ ನಿರ್ದೇಶನದ ಜ್ಞಾನವೇಲ್ ಚಿತ್ರದಲ್ಲೂ ಅವರು ಮುಂದೆ ನಟಿಸಲಿದ್ದಾರೆ.
ಇದನ್ನೂ ಓದಿ: ಒಂದು ಸಿನಿಮಾಗೆ ನಟ ದರ್ಶನ್ ಎಷ್ಟು ದಿನ ಕಾಲ್ ಶೀಟ್ ಕೊಡ್ತಾರೆ?