ಇಂದು 'ಪ್ರಾಜೆಕ್ಟ್ ಕೆ' ಸಿನಿಮಾದ ಫಸ್ಟ್ ಗ್ಲಿಂಪ್ಸ್ ಅನಾವರಣಗೊಂಡು ಸಖತ್ ಸದ್ದು ಮಾಡುತ್ತಿದೆ. 'ಕಲ್ಕಿ 2898 ಎಡಿ' ('Kalki 2898 AD') ಎಂದು ಟೈಟಲ್ ಇಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ. ಬಳಿಕ ಚಿತ್ರತಂಡ ಮಾಧ್ಯಮದೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಭಾಸ್, ಅದೇ ವೇದಿಕೆಯಲ್ಲಿ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
-
😍 waiting for this combo.. #Prabhas #DilRaju50thBirthdayBash #Adipurush #RadheShyam #DilRaju50thbdaybash #RamCharan #rrr #prabhasramcharan #BheemforRamaraju pic.twitter.com/Kp2ZMWewl3
— Rebel 🦁 (@Setti_Tweetz) December 18, 2020 " class="align-text-top noRightClick twitterSection" data="
">😍 waiting for this combo.. #Prabhas #DilRaju50thBirthdayBash #Adipurush #RadheShyam #DilRaju50thbdaybash #RamCharan #rrr #prabhasramcharan #BheemforRamaraju pic.twitter.com/Kp2ZMWewl3
— Rebel 🦁 (@Setti_Tweetz) December 18, 2020😍 waiting for this combo.. #Prabhas #DilRaju50thBirthdayBash #Adipurush #RadheShyam #DilRaju50thbdaybash #RamCharan #rrr #prabhasramcharan #BheemforRamaraju pic.twitter.com/Kp2ZMWewl3
— Rebel 🦁 (@Setti_Tweetz) December 18, 2020
"ಬಾಹುಬಲಿ, ಆದಿಪುರುಷ್, ಸಾಹೋ, ಸಲಾರ್, ಈಗ ಕಲ್ಕಿ 2898 AD ಎಲ್ಲಾ ಬಿಗ್ ಬಜೆಟ್ ಚಿತ್ರಗಳಲ್ಲೇ ನಟಿಸುತ್ತಿದ್ದೀರಿ. 'ಪ್ರಾಜೆಕ್ಟ್ ಕೆ'ನಲ್ಲಿ ಬಹಳಷ್ಟು ಬ್ಲೂ ಸ್ಕ್ರೀನ್ ದೃಶ್ಯಗಳಿವೆ, ಅವುಗಳನ್ನು ನೋಡಿ ನಿಮಗೆ ಬೇಸರವಾಗುವುದಿಲ್ಲವೇ?" ಎಂದು ವರದಿಗಾರರೊಬ್ಬರು ಪ್ರಭಾಸ್ಗೆ ಪ್ರಶ್ನಿಸಿದರು. 'ಮೊದಲು ನನಗೆ ತುಂಬಾ ಬೇಸರವಾಗಿತ್ತು. ಅಂತಹ ದೊಡ್ಡ ಬ್ಲೂ ಸ್ಕ್ರೀನ್ ಮುಂದೆ ನಾನು ತುಂಬಾ ಚಿಕ್ಕದಾಗಿ ಕಾಣುತ್ತಿದ್ದೆ. ಆದರೆ, ಝಲಕ್ ನೋಡಿ ನನಗೆ ಖುಷಿಯಾಯಿತು. ಚೆನ್ನಾಗಿದೆ ಅನ್ನಿಸಿತು' ಎಂದರು.
ಒಟ್ಟಿಗೆ ಸಿನಿಮಾ ಮಾಡುತ್ತೇವೆ.. "ಭಾರತದ ಅದ್ಭುತ ನಿರ್ದೇಶಕರಲ್ಲಿ ರಾಜಮೌಳಿ ಒಬ್ಬರು. 'ಆರ್‌ಆರ್‌ಆರ್' ಅದ್ಭುತ ಚಿತ್ರ. ಆ ಚಿತ್ರದ ಹಾಡಿಗೆ ಆಸ್ಕರ್ ಸಿಕ್ಕಿದ್ದು, ನನಗೆ ತುಂಬಾ ಖುಷಿಯಾಯಿತು. ಇದು ಭಾರತದ ಎಲ್ಲ ಜನರಿಗೆ ಗೌರವ ಎಂದು ನಾನು ಭಾವಿಸುತ್ತೇನೆ. ಹಾಗೆಯೇ ರಾಜಮೌಳಿ ಇಂತಹದ್ದಕ್ಕೆ ಅರ್ಹರು. ಮತ್ತು ರಾಮ್ಚರಣ್ ನನಗೆ ಒಳ್ಳೆಯ ಸ್ನೇಹಿತ. ಮುಂದೊಂದು ದಿನ ನಾವು ಒಟ್ಟಿಗೆ ಸಿನಿಮಾ ಮಾಡುತ್ತೇವೆ" ಎಂದು ಅವರು ಹೇಳಿದರು.
-
Arey
— DHRUVA 01 (@saikalyanmorla1) July 21, 2023 " class="align-text-top noRightClick twitterSection" data="
Prahbas Anna Charan Anna
Inta close ha
Nenu asalu expect cheyaledhu
Tq Prabhas Anna❤
Prabhas-Ram charan
Bahubali-Ramaraju#Prabhas𓃵 #RamCharan #ProjectKGlimpse #ProjectK #rangastalam @PrabhasRaju @AlwaysRamCharan pic.twitter.com/xjUqHRGHAU
">Arey
— DHRUVA 01 (@saikalyanmorla1) July 21, 2023
Prahbas Anna Charan Anna
Inta close ha
Nenu asalu expect cheyaledhu
Tq Prabhas Anna❤
Prabhas-Ram charan
Bahubali-Ramaraju#Prabhas𓃵 #RamCharan #ProjectKGlimpse #ProjectK #rangastalam @PrabhasRaju @AlwaysRamCharan pic.twitter.com/xjUqHRGHAUArey
— DHRUVA 01 (@saikalyanmorla1) July 21, 2023
Prahbas Anna Charan Anna
Inta close ha
Nenu asalu expect cheyaledhu
Tq Prabhas Anna❤
Prabhas-Ram charan
Bahubali-Ramaraju#Prabhas𓃵 #RamCharan #ProjectKGlimpse #ProjectK #rangastalam @PrabhasRaju @AlwaysRamCharan pic.twitter.com/xjUqHRGHAU
ಇದನ್ನು ಕೇಳಿದ ಚೆರ್ರಿ ಮತ್ತು ಡಾರ್ಲಿಂಗ್ ಅಭಿಮಾನಿಗಳು ಖುಷಿಯಿಂದ ಸಂಭ್ರಮಿಸಿದ್ದಾರೆ. ಇವರಿಬ್ಬರ ಚಿತ್ರ ಬಂದರೆ ಸೂಪರ್ ಹಿಟ್ ಆಗುವುದಂತು ಪಕ್ಕಾ ಅಂತಿದ್ದಾರೆ ಸಿನಿ ಪ್ರೇಕ್ಷಕರು. 'ಪ್ರಾಜೆಕ್ಟ್-ಕೆ' ಚಿತ್ರದಲ್ಲಿ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಚೆರ್ರಿ ಪ್ರೊಡಕ್ಷನ್ ಹೌಸ್ ನಲ್ಲಿ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತೇನೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.
ಫಸ್ಟ್ ಗ್ಲಿಂಪ್ಸ್ ರೋಮಾಂಚನ: ಜಗತ್ತನ್ನು ಕತ್ತಲೆ ಆವರಿಸಿದಾಗ ಶಕ್ತಿಯೊಂದು ಹೊರಹೊಮ್ಮುತ್ತದೆ. ಅಂತ್ಯ ಶುರುವಾಗಲಿದೆ ಎಂಬ ಹಿನ್ನೆಲೆಯಲ್ಲಿ ಚಿತ್ರಕಥೆ ಸಾಗಲಿದೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಗ್ಲಿಂಪ್ಸ್ನಲ್ಲಿ ಸಿನಿಮಾ ಕುರಿತು ಭಾರಿ ನಿರೀಕ್ಷೆ ಮೂಡಿಸುವ ಸಾಹಸ ದೃಶ್ಯಗಳಿವೆ. ದೃಶ್ಯಗಳು ರೋಮಾಂಚಕವಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ನೋಟ ಅದ್ಭುತವಾಗಿದೆ ಎಂದು ಸಿನಿಮಾ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ 'ಸ್ಯಾನ್ ಡಿಯಾಗೋ ಕಾಮಿಕ್ ಕಾನ್' ಸಮಾರಂಭದಲ್ಲಿ ಚಿತ್ರತಂಡ ಫಸ್ಟ್ ಗ್ಲಿಂಪ್ಸ್ ಅನಾವರಣಗೊಳಿಸಿ, ಚಿತ್ರದ ಅಂತಿಮ, ಅಧಿಕೃತ ಶೀರ್ಷಿಕೆಯನ್ನು ಬಹಿರಂಗಗೊಳಿಸಿತು. ಈ ಕುರಿತ ವಿಡಿಯೋವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ವಿಶ್ವದ ಪ್ರತಿಷ್ಟಿತ ಸಮಾರಂಭದಲ್ಲಿ ಸಿನಿಮಾ ಪ್ರಚಾರ ಮಾಡಿರುವ ಮೊದಲ ಭಾರತೀಯ ಚಲನಚಿತ್ರ ಇದಾಗಿದೆ.
ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದೆ. 600 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ದಿಶಾ ಪಟಾನಿ ನಟಿಸಿದ್ದಾರೆ. ಜನವರಿ 12, 2024ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: 'ಕಾಮಿಕ್ ಕಾನ್ ಈವೆಂಟ್ನ ಮಹತ್ವವನ್ನು ಪುತ್ರನಿಂದ ತಿಳಿದುಕೊಂಡೆ': ಅಮಿತಾಭ್ ಬಚ್ಚನ್