ETV Bharat / entertainment

Deepika Padukone: ಕ್ಯಾಶುವಲ್​ ಲುಕ್​ನಲ್ಲಿ ದೀಪಿಕಾ ಪಡುಕೋಣೆ; ನಟಿಯ ಫ್ಯಾಷನ್​ಗೆ ಫ್ಯಾನ್ಸ್​ ಮೆಚ್ಚುಗೆ

author img

By

Published : Jun 9, 2023, 12:57 PM IST

Watch: ನಟಿ ದೀಪಿಕಾ ಪಡುಕೋಣೆ ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಶುವಲ್ ಲುಕ್​ನಲ್ಲಿ ಕಾಣಿಸಿಕೊಂಡರು.

Deepika Padukone
ದೀಪಿಕಾ ಪಡುಕೋಣೆ

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಶುವಲ್​ ಡ್ರೆಸ್​ನಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಪ್ರತಿ ಬಾರಿಯೂ ದೀಪಿಕಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ, ಅವರು ತಮ್ಮ ಟ್ರೆಂಡಿ ಬಟ್ಟೆಗಳಿಂದ ಎಲ್ಲರನ್ನೂ ಆಶ್ಚರ್ಯಗೊಳಿಸುತ್ತಾರೆ. ಈ ಬಾರಿಯೂ ಇದಕ್ಕೆ ಹೊರತಾಗಿಲ್ಲ. ತಮ್ಮ ಫ್ಯಾಷನ್​ ಸೆನ್ಸ್​ ಮತ್ತು ಸ್ಟೈಲಿಶ್​ನಿಂದ ಮತ್ತೊಮ್ಮೆ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸಿದ್ದಾರೆ.

ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಟ್ಯಾಂಕ್​ ಟಾಪ್​​, ಬ್ಲೂ ಜೀನ್ಸ್​ ಮತ್ತು ಡಿಫರೆಂಟ್​ ಜಾಕೆಟ್​ ಧರಿಸಿ ಅದ್ಭುತವಾಗಿ ಕಂಡಿದ್ದಾರೆ. ತಮ್ಮ ನೋಟವನ್ನು ಸಂಪೂರ್ಣಗೊಳಿಸಲು ಬ್ಲಾಕ್​ ಸನ್​ಗ್ಲಾಸ್​ ಮತ್ತು ಸೈಡ್​ ಬ್ಯಾಗ್​ ಧರಿಸಿದ್ದರು. ಕೂದಲನ್ನು ಹಿಂದಕ್ಕೆ ಪೋನಿಟೇಲ್​ ಕಟ್ಟಿ ವಿಥೌಟ್​ ಮೇಕಪ್​ನಲ್ಲಿ ಕಾಣಿಸಿಕೊಂಡರು.

ಪಾಪರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ, ದೀಪಿಕಾ ಕಾರಿನಿಂದ ಇಳಿದು ಎಂಟ್ರೆನ್ಸ್​ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಫೋಟೋಗ್ರಾಫರ್ಸ್​ ಕಂಡು ನಟಿ ಮುಗುಳ್ನಕ್ಕರು. ನಟಿಯ ಈ ವಿಡಿಯೋ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಬ್ಯೂಟಿಫುಲ್​ ದೃಶ್ಯ ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Google Doodle: ಇಂದು ಫೇಮಸ್​ ಡ್ಯಾನ್ಸರ್​ ವಿಲ್ಲಿ ನಿಂಜಾ ಬರ್ತಡೇ.. ಡೂಡಲ್​ ವಿಡಿಯೋ ಮೂಲಕ ಗೌರವ ಸಲ್ಲಿಸಿದ ಗೂಗಲ್​

ದೀಪಿಕಾ ಪಡುಕೋಣೆ ಮುಂಬರುವ ಚಿತ್ರಗಳು: ಇನ್ನೂ ಬಾಲಿವುಡ್​ ಮಸ್ತಾನಿಯ ಮುಂಬರುವ ಸಿನಿಮಾ ವಿಚಾರವಾಗಿ ಗಮನಿಸುವುದಾದರೆ, ದೀಪಿಕಾ ಪಡುಕೋಣೆ 'ಫೈಟರ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರನ್ನು ಆ್ಯಕ್ಷನ್​ ಅವತಾರದಲ್ಲಿ ಕಾಣಬಹುದು. ಇದರಲ್ಲಿ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾವನ್ನು ಪಠಾಣ್​ನ ಸಿದ್ದಾರ್ಥ್​ ಆನಂದ್​ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಅನಿಲ್ ಕಪೂರ್ ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಈ ಚಿತ್ರವು 2024ರ ಜನವರಿ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಉಳಿದಂತೆ 'ಪ್ರಾಜೆಕ್ಟ್ ಕೆ' ನಲ್ಲಿ ನಟಿಸಲಿದ್ದಾರೆ. ಪ್ಯಾನ್​ ಇಂಡಿಯಾ ಸ್ಟಾರ್​ ನಟ ಪ್ರಭಾಸ್​ ಮತ್ತು ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಮೂಲಕ ಅವರು ಟಾಲಿವುಡ್​ಗೆ ಕಾಲಿರಿಸಲಿದ್ದಾರೆ. ಇದು ಸೈನ್ಸ್​ ಫಿಕ್ಷನ್​ ಸಿನಿಮಾ ಆಗಿದ್ದು, ಅದಕ್ಕೆ ತಕ್ಕಂತೆಯೇ ಪಾತ್ರಧಾರಿಗಳ ಕಾಸ್ಟ್ಯೂಮ್​ ಡಿಸೈನ್​ ಮಾಡಲಾಗಿದೆ. 'ಪ್ರಾಜೆಕ್ಟ್​ ಕೆ' ಸಿನಿಮಾವು ಇಂಗ್ಲೀಷ್​ ಚಿತ್ರಗಳಿಗೂ ಪೈಪೋಟಿ ನೀಡುವ ರೀತಿಯಲ್ಲೇ ಸಜ್ಜಾಗುತ್ತಿದೆ.

ಇದಲ್ಲದೇ 'ದಿ ಇಂಟರ್ನ್' ರಿಮೇಕ್​ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ವಿವಾದಗಳ ನಡುವೆಯೇ ಇತ್ತೀಚೆಗೆ ತೆರೆಕಂಡ ಪಠಾಣ್​ ಚಿತ್ರ ಅಭೂತಪೂರ್ವ ಯಶಸ್ಸು ಕಂಡಿದೆ. ಅಲ್ಲದೇ ಭಾರತೀಯ ಮನೋರಂಕನಾ ಕ್ಷೇತ್ರಕ್ಕೆ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅವರ ಕೊಡುಗೆ ಅಪಾರ. ಜಾಗತಿಕ ಮಟ್ಟದಲ್ಲಿ ಈ ಬಹುಬೇಡಿಕೆ ತಾರೆ ದೇಶವನ್ನು ಹಲವು ಬಾರಿ ಪ್ರತಿನಿಧಿಸಿದ್ದಾರೆ.

ಇದನ್ನೂ ಓದಿ: Jawan Movie: ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರದ ಓಟಿಟಿ, ಸ್ಯಾಟಲೈಟ್ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.