ಹೈದರಾಬಾದ್: 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ನೋಡಿದ ನಂತರ ಪ್ರೇಕ್ಷಕರು ಕಣ್ಣೀರು ಹಾಕಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಚಿತ್ರ ತೋರಿಸಿದಾಗ, ಚಿತ್ರಮಂದಿರದಲ್ಲಿದ್ದ ಎಲ್ಲರೂ ಅಳುತ್ತಿದ್ದರು. 'ದಿ ಕಾಶ್ಮೀರ ಫೈಲ್ಸ್' ದೇಶದಲ್ಲೇ ಒಂದು ಸಂಚಲನ ಮೂಡಿಸಿದೆ. ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರೇ ಚಿತ್ರೀಕರಣ ಮಾಡುವಾಗ ಅತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ವಾಸ್ತವವಾಗಿ, ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಇನ್ಸ್ಟಾಗ್ರಾಂ (Instagram) ನಲ್ಲಿ ಚಿತ್ರಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ವಿವೇಕ್ ಅಗ್ನಿಹೋತ್ರಿ ಅನುಪಮ್ ಖೇರ್ ಅವರ ಎದೆಯ ಮೇಲೆ ತಲೆಯಿಟ್ಟು ಅಳುತ್ತಿರುವುದನ್ನು ಕಾಣಬಹುದು. ವಾಸ್ತವವಾಗಿ, ಇದು ಅನುಪಮ್ ಖೇರ್ ನಟಿಸಿದ ಪುಷ್ಕರ್ನಾಥ್ ಪಾತ್ರದ ಸಾವಿನ ದೃಶ್ಯ. ಈ ದೃಶ್ಯ ಚಿತ್ರೀಕರಣದ ವೇಳೆ ವಿವೇಕ್ ಅವರು ಭಾವುಕರಾಗಿರುವ ಕಾಣಬಹುದು.
ಈ ವಿಡಿಯೋವನ್ನು ಶೇರ್ ಮಾಡಿರುವ ವಿವೇಕ್, '2004ರಲ್ಲಿ ನನ್ನ ತಾಯಿ ತೀರಿಕೊಂಡಾಗ ನಾನು ಅಳಲಿಲ್ಲ, 2008ರಲ್ಲಿ ನನ್ನ ತಂದೆ ತೀರಿಕೊಂಡಾಗ ನಾನು ಅಳಲಿಲ್ಲ, ಆದರೆ ಅನುಪಮ್ ಖೇರ್ ಅವರ ಸಾವಿನ ದೃಶ್ಯ ಚಿತ್ರೀಕರಿಸುವಾಗ ದುಃಖ ತಡೆಯಲಾಗಲಿಲ್ಲ. ಬಹುತೇಕರಿಗೆ ಈ ದೃಶ್ಯ ಕಣ್ಣೀರು ತರಿಸುತ್ತದೆ, ಇದು ನಮ್ಮ ಕಾಶ್ಮೀರಿ ಹಿಂದೂ ಪೋಷಕರ ನೋವಿನ ತೀವ್ರತೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಗೋವಾ ಕಲಾ ಉತ್ಸವದಲ್ಲಿ ಭಾರತ ಗೌರವ ಪ್ರಶಸ್ತಿ ಪಡೆದ ನಟಿ - ಮಾಡೆಲ್ ಪೂಜಾ ರಮೇಶ್