ETV Bharat / entertainment

ಎಸ್.​ಎಲ್​​ ಭೈರಪ್ಪ ಅವರ 'ಪರ್ವ' ತೆರೆಮೇಲೆ: ಸಿನಿಮಾ ಘೋಷಿಸಿದ ಕಾಶ್ಮೀರ್ ಫೈಲ್ಸ್‌ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

Parva: ಎಸ್.​ಎಲ್​​ ಭೈರಪ್ಪ ಅವರ 'ಪರ್ವ' ಕಾದಂಬರಿಗೆ ಸಿನಿಮಾ ಸ್ಪರ್ಶ ಸಿಗಲಿದೆ. ಮೂರು ಭಾಗಗಳಲ್ಲಿ ಪರ್ವ ಸಿನಿಮಾ ಮೂಡಿ ಬರಲಿದೆ.

Vivek Agnihotri announces Parva film
ಪರ್ವ ಸಿನಿಮಾ ಘೋಷಿಸಿದ ವಿವೇಕ್ ಅಗ್ನಿಹೋತ್ರಿ
author img

By ETV Bharat Karnataka Team

Published : Oct 21, 2023, 1:58 PM IST

Updated : Oct 21, 2023, 2:09 PM IST

ದಿ ತಾಷ್ಕೆಂಟ್ ಫೈಲ್ಸ್, ದಿ ಕಾಶ್ಮೀರ್ ಫೈಲ್ಸ್‌, ದಿ ವ್ಯಾಕ್ಸಿನ್​ ವಾರ್​ನಂತಹ ಸಿನಿಮಾಗಳಿಗೆ ಹೆಸರುವಾಸಿಯಾದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ತಮ್ಮ ಮಹತ್ವಾಕಾಂಕ್ಷೆಯ 'ಪರ್ವ' ವನ್ನು ಇಂದು ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ.

'ಪರ್ವ' ಕಾದಂಬರಿಗೆ ಸಿನಿಮಾ ಸ್ಪರ್ಶ: ಸಿನಿಮಾ ಎಸ್.​ಎಲ್​​ ಭೈರಪ್ಪ ಅವರ 'ಪರ್ವ' ಕಾದಂಬರಿ ಆಧರಿಸಿದ್ದು, ಮೂರು ಭಾಗಗಳಲ್ಲಿ ಮೂಡಿ ಬರಲಿದೆ. ಬಾಲಿವುಡ್​ನ ಖ್ಯಾತ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು, ಮೂರು ಭಾಗಗಳಲ್ಲಿ ಮೂಡಿ ಬರಲಿರುವ ಸಿನಿಮಾವನ್ನು ಇಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಪತ್ನಿ, ನಟಿ, ನಿರ್ಮಾಪಕಿ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. 'ಪರ್ವ' ಕಥೆಯನ್ನು ನಿರ್ದೇಶಕ ಪ್ರಕಾಶ್ ಬೆಳವಾಡಿ ಹಾಗೂ ಮೂಲ ಕಾದಂಬರಿಯ ಲೇಖಕ ಎಸ್.ಎಲ್ ಭೈರಪ್ಪ ಸೇರಿ ಬರೆಯಲಿದ್ದಾರೆ.

  • BIG ANNOUNCEMENT:

    Is Mahabharat HISTORY or MYTHOLOGY?

    We, at @i_ambuddha are grateful to the almighty to be presenting Padma Bhushan Dr. SL Bhyrappa’s ‘modern classic’:
    PARVA - AN EPIC TALE OF DHARMA.

    There is a reason why PARVA is called ‘Masterpiece of masterpieces’.

    1/2 pic.twitter.com/BiRyClhT5c

    — Vivek Ranjan Agnihotri (@vivekagnihotri) October 21, 2023 " class="align-text-top noRightClick twitterSection" data=" ">

ಪರ್ವ ಫಸ್ಟ್ ಲುಕ್​ ಅನಾವರಣ: ಪರ್ವ ಸಿನಿಮಾ ಎಸ್​.ಎಲ್​ ಭೈರಪ್ಪ ಅವರ ಕಾದಂಬರಿಯ ರೂಪಾಂತರ. ಸಂಸ್ಕೃತ ಮಹಾಕಾವ್ಯ 'ಮಹಾಭಾರತ' ಬಗೆಗಿನ ಕುರಿತಾದ ಕಾದಂಬರಿ. ಪ್ರಮುಖ ಪಾತ್ರಗಳ ಆಂತರಿಕ ಆಲೋಚನೆಗಳು ಮತ್ತು ದೃಷ್ಟಿಕೋನಗಳ ಸುತ್ತ ಕಥೆ ಸಾಗಿದೆ. ಎಸ್​.ಎಲ್​ ಭೈರಪ್ಪ ಅವರ ಬರಹ 'ಆಧುನಿಕ ಕ್ಲಾಸಿಕ್' ಎಂದು ಗುರುತಿಸಲ್ಪಟ್ಟಿದೆ. ವ್ಯಾಪಕ ಮೆಚ್ಚುಗೆಯನ್ನೂ ಸ್ವೀಕರಿಸಿದೆ. ತಮ್ಮ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕರು, ಚಿತ್ರದ ಫಸ್ಟ್ ಲುಕ್ ಅನ್ನೂ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

'ನರ್ಗೀಸ್ ದತ್' ಪ್ರಶಸ್ತಿ.. ವಿವೇಕ್ ರಂಜನ್ ಅಗ್ನಿಹೋತ್ರಿ ಅವರಿಗೆ ಇತ್ತೀಚೆಗಷ್ಟೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಕ್ಟೋಬರ್ 17 (ಮಂಗಳವಾರ) ರಂದು ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ದಿ ಕಾಶ್ಮೀರ ಫೈಲ್ಸ್ ಸಿನಿಮಾ ರಾಷ್ಟ್ರೀಯ ಏಕೀಕರಣ ವಿಭಾಗದಲ್ಲಿ 'ನರ್ಗೀಸ್ ದತ್' ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಚೆನ್ನೈಗೆ ಶಿಫ್ಟ್​​ ಆಗಲಿದ್ದಾರಾ ಸೂಪರ್ ಸ್ಟಾರ್ ಅಮೀರ್ ಖಾನ್?

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​ (ಟ್ವಿಟರ್) ನಲ್ಲಿ ಕೃತಜ್ಞತೆ ತಿಳಿಸಿದ್ದರು. "ಈ ಪ್ರತಿಷ್ಟಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಾಗಿ ಧನ್ಯವಾದಗಳು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಾಗಿ ಸಿಕ್ಕ ಈ ಪ್ರಶಸ್ತಿಯು ಧಾರ್ಮಿಕ ಭಯೋತ್ಪಾದನೆಗೆ ಬಲಿಯಾದವರಿಗೆ ಸಂದ ಗೌರವ. ಮಾನವೀಯತೆಯ ಅನುಪಸ್ಥಿತಿಯ ಪರಿಣಾಮಗಳನ್ನು ಚಿತ್ರ ವಿವರಿಸಿದೆ. ಭಾರತದ ಎಲ್ಲಾ ನಾಗರಿಕರಿಗೆ ಧನ್ಯವಾದಗಳು" ಎಂದು ಟ್ವೀಟ್​ ಮಾಡಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು, ಅವರ ಫೋಟೋ - ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಇಳಿಕೆ ಕಂಡ 'ಲಿಯೋ' ಕಲೆಕ್ಷನ್​​: ಮೊದಲ ದಿನ 64, ಎರಡನೇ ದಿನ 36 ಕೋಟಿ ರೂ.

ದಿ ವ್ಯಾಕ್ಸಿನ್ ವಾರ್ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಕೊನೆಯ ಚಿತ್ರ. ಬಾಲಿವುಡ್​ ನಟರೊಂದಿಗೆ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಕೂಡ ನಟಿಸಿದ್ದಾರೆ. ಕೋವಿಡ್​​ ಎಂಬ ಕಠಿಣ ವಾತಾವರಣದಲ್ಲಿ, ಭಾರತೀಯ ವಿಜ್ಞಾನಿಗಳು ಮತ್ತು ವೈದ್ಯಕೀಯ ಕ್ಷೇತ್ರದ ಸೇವೆಯನ್ನು ಈ ಸಿನಿಮಾ ಒಳಗೊಂಡಿದೆ.

Last Updated : Oct 21, 2023, 2:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.