ETV Bharat / entertainment

ಏಷ್ಯಾ, ಇಂಟರ್​ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ ಸೇರಿದ‌ 'ವಿಷ್ಣುವರ್ಧನ್‌ ಕಟೌಟ್ ಜಾತ್ರೆ' - Vishnuvardhan

2022 ರ ಸೆಪ್ಟೆಂಬರ್‌ 18 ರಂದು ಬೆಂಗಳೂರಿನಲ್ಲಿ ನಡೆದಿದ್ದ 'ವಿಷ್ಣುವರ್ಧನ್‌ ಕಟೌಟ್ ಜಾತ್ರೆ' ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಇಂಟರ್​ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ ಪುಟ​​ ಸೇರಿದೆ.

Vishnuvardhan Cutout Fair
ವಿಷ್ಣುವರ್ಧನ್‌ ಕಟೌಟ್ ಜಾತ್ರೆ
author img

By

Published : Jun 2, 2023, 1:07 PM IST

'ಸಾಹಸಸಿಂಹ' ದಿ.ವಿಷ್ಣುವರ್ಧನ್‌ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ. ಅಭಿನಯ ಮಾತ್ರವಲ್ಲದೇ ವ್ಯಕ್ತಿತ್ವದಿಂದಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದವರು. ಸದ್ಯ ಅವರು ನಮ್ಮೊಂದಿಗಿಲ್ಲ. ಆದರೂ ಅವರ ನೆನಪು, ಸಿನಿಮಾ ಸಾಧನೆ ಜನಮನದಲ್ಲಿ ಅಚ್ಚಳಿಯದೇ ಉಳಿದಿದೆ. ನಟನ ಹೆಸರಿನಲ್ಲಿ ಈಗಲೂ ಕಾರ್ಯಕ್ರಮಗಳು, ಸಮಾಜ ಸೇವೆಗಳು ನಡೆಯುತ್ತಿರುತ್ತವೆ. ಇದೀಗ ಅವರ ಹೆಸರಿನಲ್ಲಿ ಅತ್ಯುನ್ನತ ಗೌರವ ಕರುನಾಡಿಗೆ ಲಭ್ಯವಾಗಿದೆ.

Vishnuvardhan Cutout Fair
ವಿಷ್ಣುವರ್ಧನ್‌ ಕಟೌಟ್ ಜಾತ್ರೆ

ಡಾ.ವಿಷ್ಣುವರ್ಧನ್‌ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳಾದ ಹಿನ್ನೆಲೆಯಲ್ಲಿ ಅವರ 50 ಸೇನಾನಿಗಳು, ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ 2022 ರ ಸೆಪ್ಟೆಂಬರ್‌ 18 ರಂದು ಬೆಂಗಳೂರಿನ ಡಾ.ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್‌ ಕಟೌಟ್‌ಗಳನ್ನು ಸ್ಥಾಪಿಸಿ "ಕಟೌಟ್‌ ಜಾತ್ರೆ" ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಆ ಕಟೌಟ್‌ಗಳಿಗೆ ಬೃಹತ್‌ ಹಾರಗಳನ್ನು ಸಹ ಹಾಕಿಸಿದ್ದರು. ಇಡೀ ಕಾರ್ಯಕ್ರಮಕ್ಕೆ ಅಂದಾಜು 40 ಲಕ್ಷ ರೂ.ಯಷ್ಟು ಹಣ ಖರ್ಚಾಗಿತ್ತು. ಅದ್ಧೂರಿಯಾಗಿಯೇ ಆ ಕಾರ್ಯಕ್ರಮ ನಡೆದಿತ್ತು. ಪೊಲೀಸ್‌ ಇಲಾಖೆಯ ಪ್ರಕಾರ, ಎರಡೂವರೆ ಲಕ್ಷ ಜನರು ಈ ಕಟೌಟ್‌ ಜಾತ್ರೆಯಲ್ಲಿ ಭಾಗವಹಿಸಿದ್ದರು.

Vishnuvardhan Cutout Fair
'ವಿಷ್ಣುವರ್ಧನ್‌ ಕಟೌಟ್ ಜಾತ್ರೆ'ಗೆ ಗೌರವ

ಅಂದೇ ಈ ಕಟೌಟ್‌ ಜಾತ್ರೆ ವಿಚಾರವನ್ನು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ ಮತ್ತು ಇಂಟರ್​ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್​ನಲ್ಲಿ ದಾಖಲಿಸಲು ಮನವಿ ಸಲ್ಲಿಸಲಾಗಿತ್ತು. ಆ ಸಂಸ್ಥೆಗಳು ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದರಲ್ಲದೇ, ಖುದ್ದಾಗಿ ಸ್ಥಳ ಪರಿಶೀಲನೆ ಸಹ ಮಾಡಿದ್ದರು. ಇದೀಗ ಆ ಎಲ್ಲಾ ಹಂತದ ಪರೀಕ್ಷೆಗಳೂ ಮುಗಿದಿವೆ. ಈ ಕಟೌಟ್ ಜಾತ್ರೆಯು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಇಂಟರ್​ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್​ ಪುಸ್ತಕದ ಪುಟಗಳಲ್ಲಿ ದಾಖಲೆಯಾಗಿ ಸೇರಿದೆ. ಆ ಎರಡೂ ದಾಖಲೆಗಳ ಸರ್ಟಿಫಿಕೇಟ್‌ ಮತ್ತು ಪದಕಗಳನ್ನು ವಿಷ್ಣುವರ್ಧನ್ ಅಭಿಮಾನಿಯಾಗಿರುವ ವೀರಕಪುತ್ರ ಶ್ರೀನಿವಾಸ್ ಪಡೆದುಕೊಂಡಿದ್ದಾರೆ‌.

ಇದನ್ನೂ ಓದಿ: Photos: ಮಳೆ, ಚಳಿ, ಬಿಸಿಲು ಲೆಕ್ಕಕ್ಕಿಲ್ಲ - 'ಕೇರಳ ಸ್ಟೋರಿ' ಅದಾ ಶರ್ಮಾ ಶ್ರಮ

ಈ ಬಗ್ಗೆ ಮಾತನಾಡಿರುವ ‌ಶ್ರೀನಿವಾಸ್, "ತೆರೆ ಮೇಲೆ ಹಾಗು ತೆರೆ ಹಿಂದೆ ನುಡಿದಂತೆ ನಡೆದ ಮೇರುನಟನ ಹೆಸರಲ್ಲಿ ಇಂತಹದ್ದೊಂದು ದಾಖಲೆಯನ್ನು ಅವರಿಲ್ಲದ ಹೊತ್ತಿನಲ್ಲಿ ಸ್ಥಾಪಿಸಲು ಸಾಧ್ಯವಾಗಿದ್ದಕ್ಕೆ ನಿಜಕ್ಕೂ ಹೆಮ್ಮೆ ಪಡುತ್ತೇವೆ. ಈ ದಾಖಲೆಯು ಡಾ. ವಿಷ್ಣುವರ್ಧನ್‌ ಅವರ ಅಗಲಿಕೆಯ 13 ವರ್ಷಗಳ ನಂತರವೂ ಅವರ ನೆನಪನ್ನು ಹಸಿರಾಗಿಡುವ ಕೆಲಸವನ್ನು ಅವರ ಅಭಿಮಾನಿಗಳು ನಿರಂತರವಾಗಿ ಮಾಡುತ್ತಿರುವುದರ ದ್ಯೋತಕವಾಗಿದೆ. ಈ ಕಟೌಟ್‌ ಜಾತ್ರೆಗೆ ಬೆನ್ನೆಲುಬಾಗಿ ನಿಂತ 50 ಸೇನಾನಿಗಳಿಗೆ, ಯೋಜನೆ ಕಾರ್ಯಸಾಧುಗೊಳಿಸಿದ ಆನಂದ್‌, ಕಟೌಟ್‌ ವಿನ್ಯಾಸ ಮಾಡಿದ ರಾಜುವಿಷ್ಣು ಮತ್ತು ಈ ಸಂಸ್ಥೆಗಳ ಜೊತೆ ಸಂವಹನ ನಡೆಸಿ, ಕಾರ್ಯಕ್ರಮ ಸಾಧ್ಯವಾಗಿಸಿದ ಸಾಹಿತಿ ಜನಾರ್ಧನ್‌ ರಾವ್‌ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತೇನೆ" ಎಂದರು.

ಇದನ್ನೂ ಓದಿ: ನಗುವಲ್ಲೇ 'ಸನ್ನಿಧಿ' ಜಾದೂ; ಸಾಧಾರಣ ಸೀರೆಯಲ್ಲೂ ಅದ್ಭುತ ಸೌಂದರ್ಯ- ನಟಿ ವೈಷ್ಣವಿಯ ಫೋಟೋಸ್ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.