ETV Bharat / entertainment

2022 ವರ್ಷದ ಕೊನೆಯ ಪೋಟೋ ಹಂಚಿಕೊಂಡ ವಿರುಷ್ಕಾ ದಂಪತಿ - 2022ರ ಕೊನೆಯ ಸೂರ್ಯೋದಯ

ದುಬೈಯಲ್ಲಿ ತಮ್ಮ ಮಗುವಿನೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆ ಮಾಡಲಿರುವ ಅನುಷ್ಕಾ ಮತ್ತು ವಿರಾಟ್ -ಈ ವರ್ಷದ ಕೊನೆಯ ಫೋಟೋಗಳನ್ನು ಹಂಚಿಕೊಂಡ ವಿರುಷ್ಕಾ ದಂಪತಿ.

A photo of a couple in a black dress shared on Instagram
ಇನ್ಸ್​ಟ್ರಗ್ರಾಮ್​ನಲ್ಲಿ ಹಂಚಿಕೊಂಡಿರುವ ಕಪ್ಪು ಬಣ್ಣದ ಉಡುಗೆಯೊಂದಿಗಿರುವ ದಂಪತಿಯ ಪೋಟೋ
author img

By

Published : Dec 31, 2022, 4:14 PM IST

ಮುಂಬೈ: 2023 ಹೊಸ ವರ್ಷಕ್ಕೆ ಇನ್ನೇನು ಅರ್ಧ ದಿನ ಬಾಕಿ ಇದ್ದು ವಿಶ್ವದಾದ್ಯಂತ ನ್ಯೂ ಇಯರ್​ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಭಾರತದ ಸ್ಟಾರ್ ಜೋಡಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಹೊಸ ವರ್ಷ 2023 ಅನ್ನು ವಿಶೇಷ ರೀತಿಯಲ್ಲಿ ಆಚರಿಸಲು ಸಂಪೂರ್ಣ ತಯಾರಿ ನಡೆಸಿದ್ದಾರೆ.

Last night and last sunrise images of Dubai 2022
2022ರ ದುಬೈನ ಕೊನೆಯ ರಾತ್ರಿ ಮತ್ತು ಕೊನೆಯ ಸೂರ್ಯೋದಯದ ಚಿತ್ರಗಳು

ಹೌದು, ದಂಪತಿಗಳು ಹೊಸ ವರ್ಷವನ್ನು ಮಗಳು ವಾಮಿಕಾಳೊಂದಿಗೆ ದುಬೈನಲ್ಲಿ ಆಚರಿಸಲಿದ್ದಾರೆ. ಇದರ ಬೆನ್ನಲ್ಲೇ ಈ ತಾರಾ ಜೋಡಿ ತಮ್ಮ ಹೊಸ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ಅನುಷ್ಕಾ-ವಿರಾಟ್ 2023 ರ ವರ್ಷವನ್ನು ದುಬೈನಲ್ಲಿ ಆಚರಿಸಲಿದ್ದು, ಡಿಸೆಂಬರ್ 30 ರ ರಾತ್ರಿ ಮತ್ತು ಡಿಸೆಂಬರ್ 31 ರ ಬೆಳಗಿನ ಸುಂದರ ಚಿತ್ರಗಳನ್ನು ತಮ್ಮ ಇನ್ಸ್ಟಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆ ಅನುಷ್ಕಾ ಶರ್ಮಾ ನಿನ್ನೆ ಪತಿ ವಿರಾಟ್ ಜೊತೆಗಿನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ಜೋಡಿಯ ಫೋಟೋದಲ್ಲಿ ಇಬ್ಬರು ಕಪ್ಪು ಬಣ್ಣದ ಬಟ್ಟೆ ಧರಿಸಿದ್ದು ಅಭಿಮಾನಿಗಳಿಗೆ ಈ ಪೋಟೋದಿಂದ ಪುಲ್​ ಖುಷ್​ ಆಗಿದೆ. ಪೋಟೋಕ್ಕೆ ಅನುಷ್ಕಾ ಶರ್ಮಾ ಈ ನಗರದಲ್ಲಿ ನಾವು ಕಳೆದ ಕೊನೆಯ ರಾತ್ರಿ ಎಂದು ಬರೆದುಕೊಂಡಿದ್ದಾರೆ. ಹಾಗೆ ವಿರಾಟ್​ ಕೊಹ್ಲಿ ತಮ್ಮ ಖಾತೆಯಲ್ಲಿ ಮಗುವಿನೊಂದಿಗೆ ತಾನು ಮತ್ತು ಪತ್ನಿ ಅನುಷ್ಕಾವಿರುವ ಫೋಟೋ ಶೇರ್​ ಮಾಡಿ 2022ರ ಕೊನೆಯ ಸೂರ್ಯೋದಯ ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಇದೀಗ ಜೋಡಿಯ ಈ ಚಿತ್ರಗಳಿಗೆ ಅಭಿಮಾನಿಗಳ ಪ್ರೀತಿಯ ಕಾಮೆಂಟ್​ಗಳು ಹರಿದು ಬರುತ್ತಿದೆ. ವಿರಾಟ್ ಶೇರ್ ಮಾಡಿರುವ ಚಿತ್ರಕ್ಕೆ 3 ಲಕ್ಷ 63 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಸ್ವಲ್ಪ ಸಮಯದ ಹಿಂದೆ ಅನುಷ್ಕಾ ಶೇರ್ ಮಾಡಿದ ಚಿತ್ರಕ್ಕೆ 1 ಲಕ್ಷ 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

ಹಾಗೆ ಅನುಷ್ಕಾ-ವಿರಾಟ್ ಅಭಿಮಾನಿಗಳು ಹೊಸ ವರ್ಷಕ್ಕೆ ಶುಭಾಶಯಗಳನ್ನು ಕೋರುವುದರ ಜೊತೆಗೆ ವಿರಾಟ್ ಭಾಯ್ ಪಂತ್​ ಅವರಿಗೆ ಅಪಘಾತ ಸಂಭವಿಸಿದೆ. ಅವರನ್ನು ನೋಡಿಕೊಳ್ಳಿ ಎಂದು ವಿರಾಟ್​ಗೆ ಬರೆದಿದ್ದಾರೆ.

ಇದನ್ನೂ ಓದಿ: ರಿಷಭ್​ ಪಂತ್ ಭೇಟಿಯಾದ ಅನಿಲ್ ಕಪೂರ್, ಅನುಪಮ್ ಖೇರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.