ಹೈದರಾಬಾದ್: ಪತಿ ವಿರಾಟ್ ಕೊಹ್ಲಿಯ ಹೋಟೆಲ್ ಕೋಣೆಯ ವಿಡಿಯೋವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಇಂಟರ್ನೆಟ್‌ನಲ್ಲಿ ವೈರಲ್ ಮಾಡಿದ ಅಭಿಮಾನಿಯ ವಿರುದ್ಧ ಪತ್ನಿ ಅನುಷ್ಕಾ ಶರ್ಮಾ ವಾಗ್ದಾಳಿ ನಡೆಸಿದರು.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಖಾಸಗಿತನಕ್ಕೆ ಧಕ್ಕೆ ತಂದ ಘಟನೆ ಟಿ20 ವಿಶ್ವಕಪ್ನಲ್ಲಿ ನಡೆದಿದೆ. ಪರ್ತ್ ಹೋಟೆಲ್ನಲ್ಲಿ ವಿರಾಟ್ ಕೊಹ್ಲಿ ಕೋಣೆಗೆ ನುಗ್ಗಿದ ಅಭಿಮಾನಿಯೊಬ್ಬರು ವಿರಾಟ್ ಕೋಣೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದಕ್ಕೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಪರ್ತ್ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ 12 ಹಂತದ ಮೂರನೇ ಪಂದ್ಯವಾಡುತ್ತಿತ್ತು. ಕೊಹ್ಲಿ ತನ್ನ ಕೋಣೆಯಲ್ಲಿ ಇಲ್ಲದಿದ್ದಾಗ ಅಭಿಮಾನಿಯೊಬ್ಬರು ಭಾರತೀಯ ಕ್ರಿಕೆಟ್ ಲೆಜೆಂಡ್ ನ ಹೋಟೆಲ್ ಕೋಣೆಗೆ ಪ್ರವೇಶಿಸಿದ್ದು, ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅನುಷ್ಕಾ ಶರ್ಮಾ ಖಾಸಗಿತನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಅಭಿಮಾನಿಗಳ ಸಹಾನುಭೂತಿಯ ಕೊರತೆ ಇರುವ ಕೆಲವು ಘಟನೆಗಳನ್ನು ತಾನು ಈ ಹಿಂದೆ ಎದುರಿಸಿದ್ದೇನೆ. ಇದು ನಿಜವಾಗಿಯೂ ಕೆಟ್ಟ ವಿಷಯವಾಗಿದೆ. ಆದರೆ, ಸೆಲೆಬ್ರಿಟಿಗಳ ಮಲಗುವ ಕೋಣೆಯ ವಿಡಿಯೋ ಮಾಡುವುದು ಯಾವುದೇ ಖಾಸಗಿತನವಿಲ್ಲ ಎಂದು ತೋರಿಸುತ್ತದೆ.
ಈ ರೀತಿಯ ಖಾಸಗಿತನದ ಸಂಪೂರ್ಣ ಆಕ್ರಮಣವು ಸರಿಯಲ್ಲ. ದಯವಿಟ್ಟು ಜನರ ಗೌಪ್ಯತೆಯನ್ನು ಗೌರವಿಸಿ ಮತ್ತು ಅವರನ್ನು ಮನರಂಜನೆಯ ಸರಕು ಎಂದು ಪರಿಗಣಿಸಬೇಡಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಬಗ್ಗೆ ವಿರಾಟ್ ಕೋಪಗೊಂಡಿದ್ದು, "ಇದು ದುರಾಭಿಮಾನ ಮತ್ತು ತನ್ನ ಖಾಸಗಿತನದ ಮೇಲಿನ ಆಕ್ರಮಣ ಎಂದು ಜರಿದಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಿದಾಗ ತುಂಬಾ ಸಂತೋಷ ಪಡುತ್ತಾರೆ ಮತ್ತು ಅವರನ್ನು ಭೇಟಿ ಮಾಡಲು ಉತ್ಸುಕರಾಗುತ್ತಾರೆ. ಇದನ್ನು ನಾನು ಯಾವಾಗಲೂ ಪ್ರಶಂಸಿಸುತ್ತೇನೆ.
- " class="align-text-top noRightClick twitterSection" data="
">
ಆದರೆ, ಇಲ್ಲಿ ಈ ವೀಡಿಯೊ ನೋಡಿ ನನಗೆ ಭಯವಾಗಿದೆ. ನನ್ನ ಸ್ವಂತ ಹೋಟೆಲ್ ಕೋಣೆಯಲ್ಲಿ ನಾನು ಪ್ರೈವಸಿ ಹೊಂದಲು ಸಾಧ್ಯವಾಗದಿದ್ದರೆ, ನಾನು ಖಾಸಗಿ ಸ್ಥಳವನ್ನು ಎಲ್ಲಿ ನಿರೀಕ್ಷಿಸಬಹುದು? ಈ ರೀತಿಯ ದುರಭಿಮಾನ ಮತ್ತು ಖಾಸಗಿತನದ ಸಂಪೂರ್ಣ ಆಕ್ರಮಣವನ್ನು ನಾನು ಒಪ್ಪುವುದಿಲ್ಲ" ಎಂದು ಖಾರವಾಗಿಯೇ ವಿರಾಟ್ ಕೊಹ್ಲಿ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅರ್ಜುನ್ ಕಪೂರ್, "ಇಂದು ಕ್ಯಾಮೆರಾ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ದುಃಖದ ಭಾಗ ಇದು" ಎಂದು ಬರೆದಿದ್ದಾರೆ. ಇತ್ತ ವರುಣ್ ಧವನ್ "ಭಯಾನಕ ನಡವಳಿಕೆ" ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದ ಜೆರ್ಸಿ ಧರಿಸಿ ಕ್ರಿಕೆಟ್ ಮೈದಾನಕ್ಕಿಳಿದ ಅನುಷ್ಕಾ ಶರ್ಮಾ