ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇದೇ ಜುಲೈ 28ರಂದು ರಿಲೀಸ್ ಆಗಲಿದ್ದು, ಸುದೀಪ್ ಅಭಿಮಾನಿಗಳಲ್ಲಿ ಈಗಾಗಲೇ ಸಂಭ್ರಮಾಚರಣೆ ಶುರುವಾಗಿದೆ. ಚಿತ್ರದ ಪ್ರಮೋಷನ್ ಕಾರ್ಯಕ್ರಮ ಇಂದು ಮುಂಬೈನಲ್ಲಿ ನಡೆದಿದ್ದು, ಇದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಭಾಗಿಯಾಗಿದ್ದರು.
- — VikrantRona (@VikrantRona) July 25, 2022 " class="align-text-top noRightClick twitterSection" data="
— VikrantRona (@VikrantRona) July 25, 2022
">— VikrantRona (@VikrantRona) July 25, 2022
ಕಾರ್ಯಕ್ರಮದ ವೇಳೆ ಇಬ್ಬರು ನಾಯಕರು ಸೌತ್ ವರ್ಸಸ್ ಬಾಲಿವುಡ್ ಇಂಡಸ್ಟ್ರೀ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುದೀಪ್ ಮಾತನಾಡಿ, ಇದರ ಬಗ್ಗೆ ಹೆಚ್ಚಿಗೆ ಏನು ಹೇಳಲ್ಲ. ಜೊತೆಗೆ ಅದನ್ನೆಲ್ಲ ಸಾಮಾನ್ಯೀಕರಿಸಲು ಬಯಸುವುದಿಲ್ಲ. ಈಗಾಗಲೇ ಅನೇಕ ಚಿತ್ರಗಳು ಬಂದು ಹೋಗಿವೆ. ಪ್ರತಿ ಚಿತ್ರವೂ ಉತ್ತಮವಾಗಿ ಕೆಲಸ ಮಾಡಿರುತ್ತದೆ.
ಕೆಲವೊಂದು ಚಿತ್ರಗಳು ಚೆನ್ನಾಗಿರುತ್ತವೆ. ಒಂದೆರಡು ಚಿತ್ರಗಳು ಇರಲ್ಲ. ಇದನ್ನ ಸಾಮಾನ್ಯೀಕರಿಸಲು ಎಲ್ಲರೂ ಹೋಗುತ್ತಾರೆ. ಜೊತೆಗೆ ಪ್ರಾಬಲ್ಯ ಸಾಧಿಸುತ್ತಿವೆ ಎಂದು ಹೇಳುತ್ತೇವೆ. ಎಲ್ಲದಕ್ಕೂ ಒಳ್ಳೆಯ ಸಮಯ ಇರುತ್ತದೆ. ಹಿಂದಿ ಚಲನಚಿತ್ರೋದ್ಯಮ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ ಮತ್ತು ಹಿಂದಿ ಚಿತ್ರರಂಗ ಉತ್ತಮ ವ್ಯಕ್ತಿಗಳನ್ನ ಹೊಂದಿಲ್ಲದಿದ್ದರೆ ಇಷ್ಟು ವರ್ಷಗಳ ಕಾಲ ಹೇಗೆ ಉಳಿಸಿಕೊಳ್ಳುತ್ತೀರಿ? ವಿರಾಟ್ ಕೊಹ್ಲಿ ಸ್ವಲ್ಪ ಸಮಯದವರೆಗೆ ಫಾರ್ಮ್ನಿಂದ ಹೊರಗುಳಿದಂತೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.
- — VikrantRona (@VikrantRona) July 25, 2022 " class="align-text-top noRightClick twitterSection" data="
— VikrantRona (@VikrantRona) July 25, 2022
">— VikrantRona (@VikrantRona) July 25, 2022
ಇದೇ ವೇಳೆ, ಮಾತನಾಡಿರುವ ಸಲ್ಮಾನ್ ಖಾನ್, ನಾವೆಲ್ಲರೂ ಪ್ರಯತ್ನಪಟ್ಟು ಉತ್ತಮವಾದದನ್ನು ಜನರಿಗೆ ನೀಡುತ್ತಿದ್ದೇವೆ. ಅತ್ಯುತ್ತಮವಾದ ಚಿತ್ರವನ್ನೇ ಮಾಡಿ ಜನರಿಗೆ ತಲುಪಿಸುತ್ತೇವೆ. ಅದು ಕೆಲವೊಮ್ಮೆ ಕೆಲಸ ಮಾಡುತ್ತದೆ, ಕೆಲವೊಮ್ಮೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಪ್ರಪಂಚದಾದ್ಯಂತ ವಿಕ್ರಾಂತ್ ರೋಣ ಜುಲೈ 28ರಂದು ಒಟ್ಟು 14 ಭಾಷೆಗಳಲ್ಲಿ ಬಿಡುಗಡೆಯಾಗ್ತಿದ್ದು, ನಾಳೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ಆಯೋಜನೆಯಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಸಿನಿಮಾಗಳ ಕುರಿತು ಮಾತನಾಡುವಾಗ ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ಸಹ ನಡೆದಿತ್ತು. ಹಿಂದಿ ರಾಷ್ಟ್ರ ಭಾಷೆ ಅಂದ ಅಜಯ್ ದೇವಗನ್ಗೆ ಸುದೀಪ್ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿರಿ: 'ವಿಕ್ರಾಂತ್ ರೋಣ' ಬಿಡುಗಡೆ ದಿನಕ್ಕೆ ಸಾಕ್ಷಿಯಾಗಲಿದೆ ಈ ಸ್ನೇಹ ಬಾಂಧವ್ಯದ ಕಟೌಟ್!