ETV Bharat / entertainment

10 ವರ್ಷಗಳಿಂದ ಮಾಧ್ಯಮಗಳಿಗೆ ಸಂದರ್ಶನ ನೀಡದ ವಿಜಯ್: ಇದೇ ಕಾರಣವಂತೆ! - ಮಾಧ್ಯಮಗಳಿಗೆ ಸಂದರ್ಶನ ನೀಡದ ವಿಜಯ್​

ತಮಿಳು ನಟ ವಿಜಯ್​ ತಾವು 10 ವರ್ಷಗಳ ಕಾಲ ಮಾಧ್ಯಮಗಳಿಗೆ ಯಾಕೆ ಸಂದರ್ಶನ ನೀಡಿಲ್ಲ ಎಂಬ ರಹಸ್ಯವನ್ನು ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

actor-vijay
ವಿಜಯ್
author img

By

Published : Apr 11, 2022, 5:02 PM IST

ಕಾಲಿವುಡ್ ನಟ ವಿಜಯ್​ರನ್ನು ನೀವು ತೆರೆಯ ಮೇಲೆ ಮಾತ್ರ ನೋಡಲು ಸಾಧ್ಯ. ಅವರನ್ನು ಯಾವತ್ತಾದರೂ ಟಿವಿ ಸಂದರ್ಶನ, ಮಾಧ್ಯಮಗಳಲ್ಲಿ ನೋಡಿದ್ದೀರಾ? ಇಲ್ವಲ್ಲ. ಇದನ್ನು ಓದಿದ ಮೇಲೆ ನೀವೂ 'ಹೌದಲ್ವ' ಅಂತ ಮೂಗಿನ ಮೇಲೆ ಕೈಬೆರಳು ಇಟ್ಟುಕೊಳ್ಳಬಹುದು.

ಯಾಕೆಂದರೆ, ನಟ ವಿಜಯ್​ 10 ವರ್ಷಗಳಿಂದ ಟಿವಿಗಳಿಗೆ ಸಂದರ್ಶನವೇ ಕೊಟ್ಟಿಲ್ಲವಂತೆ. ಅದಕ್ಕೆ ಕಾರಣ ಮಾಧ್ಯಮಗಳೇ ಅಂತೆ. ಅಷ್ಟಕ್ಕೂ ವಿಜಯ್​ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಲು ಬಲವಾದ ಕಾರಣ ಏನಿರಬಹುದು ಅಂತೀರಾ?. ಮುಂದೆ ಓದಿ.

ಸರಿಸುಮಾರು ದಶಕಗಳ ಹಿಂದೆ ವಿಜಯ್​ ತಮ್ಮ ಸಿನಿಮಾವೊಂದರ ಪ್ರಮೋಷನ್​ಗಾಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರಂತೆ. ನಿರೂಪಕರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ವಿಜಯ್​ ಮರುದಿನ ಬೆಳಗ್ಗೆ ಪೇಪರ್​ ನೋಡಿದಾಗ ಅವರೇ ಆಶ್ಚರ್ಯರಾಗಿದ್ದಾರೆ. ಕಾರಣ ಅವರು ಸಂದರ್ಶನದಲ್ಲಿ ಆಡಿದ ಮಾತು ಬೆಳಗಾಗುವಷ್ಟರಲ್ಲಿ ಭಾರಿ ರಾದ್ಧಾಂತ ಉಂಟು ಮಾಡಿತ್ತಂತೆ.

ಆದರೆ, ಆ ಮಾತನ್ನು ವಿಜಯ್​ ಹೇಳೇ ಇಲ್ಲ ಅನ್ನೋದು ಅವರ ವಾದವಾಗಿತ್ತು. ತಾನು ಹೇಳಿದ ಆ ಮಾತನ್ನು ಮಾಧ್ಯಮದವರು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ವಿವಾದ ಉಂಟು ಮಾಡಿದ್ದರು. ಈ ಬಗ್ಗೆ ನನ್ನ ಕುಟುಂಬಸ್ಥರು, ಗೆಳೆಯರೂ ಕೂಡ ಶಾಕ್​ ಆಗಿದ್ದರು. ಅವರಿಗೆಲ್ಲಾ ನಾನು ನಡೆದ ಘಟನೆಯ ಬಗ್ಗೆ ತಿಳಿಹೇಳಿದೆ. ಆದರೆ, ಅಷ್ಟರಲ್ಲಾಗಲೇ ಆ ಮಾತು ವಿವಾದವಾಗಿತ್ತು.

ಹೀಗಾಗಿ, ನಾನು ಇನ್ನು ಮುಂದೆ ಯಾವ ಕಾರಣಕ್ಕೂ ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಎಂದು ದೂರವುಳಿದೆ ಎಂದು ಹೇಳುವ ಮೂಲಕ 10 ವರ್ಷಗಳ ಕಾಲ ಮಾಧ್ಯಮಗಳಿಂದ ದೂರ ಉಳಿದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇಷ್ಟೆಲ್ಲಾ ಹೇಳಿದ ನಟ ವಿಜಯ್​ ಅಂದು ತಾವಾಡಿದ ಯಾವ ಮಾತು ವಿವಾದಕ್ಕೆ ಕಾರಣವಾಗಿತ್ತು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.

'ಸೈಕಲ್​ ಓಡಿಸಿದ' ರಹಸ್ಯ ಬಯಲು: ವಿಜಯ್​ ಇನ್ನೊಂದು ಸ್ವಾರಸ್ಯಕರ ಘಟನೆಯನ್ನೂ ಹಂಚಿಕೊಂಡಿದ್ದಾರೆ. ಯಾವುದೋ ಚುನಾವಣೆಯ ವೇಳೆ ತಾವು ಮತ ಹಾಕಲು ಸೈಕಲ್​ ತುಳಿದುಕೊಂಡು ಹೋದಾಗ ಅದು ಭಾರಿ ಸುದ್ದಿಯಾದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಮನೆಯ ಹತ್ತಿರವೇ ಇದ್ದ ಮತಕೇಂದ್ರಕ್ಕೆ ಮತ ಚಲಾಯಿಸಲು ಹೋಗಬೇಕೆಂದಾಗ ತನ್ನ ಮಗ ಇಲ್ಲೇ ಅಣತಿ ದೂರದಲ್ಲಿರುವ ಕೇಂದ್ರಕ್ಕೆ ಸೈಕಲ್​ ಮೇಲೆ ಹೋಗಿ ಮತ ಚಲಾಯಿಸಿ ಬನ್ನಿ ಎಂದು ಸಲಹೆ ನೀಡಿದ್ದ.

ಅದರಂತೆ ನಾನು ಸೈಕಲ್​ ಹತ್ತಿ ಮತಕೇಂದ್ರಕ್ಕೆ ಹೋದಾಗ ಬೆನ್ನು ಬಿದ್ದ ಮಾಧ್ಯಮದವರು ನಾನು ಸೈಕಲ್​ ಮೇಲೆ ಬಂದಿದ್ದನ್ನೇ ರೋಚಕವಾಗಿ ಸುದ್ದಿ ಮಾಡಿದ್ದರು. ಅಲ್ಲದೇ, ಅದನ್ನು ನೇರಪ್ರಸಾರ ಕೂಡ ಮಾಡಿದ್ದರು. ಇದನ್ನು ಕಂಡು ನನ್ನ ಮಗನೇ ಫೋನ್ ಮಾಡಿ 'ಸೈಕಲ್​ ಹುಷಾರು ಅಪ್ಪ' ಎಂದಿದ್ದ ಅಂತ ವಿಜಯ್​ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದಹಾಗೆ ವಿಜಯ್​ರ 'ಬೀಸ್ಟ್​' ಸಿನಿಮಾ ನಾಳೆ (ಮಾ.13) ತೆರೆಕಾಣಲಿದೆ.

ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಪ್ರಣೀತಾ : ವಿಭಿನ್ನವಾದ ಫೋಟೋ ಹಂಚಿಕೊಂಡ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.