ETV Bharat / entertainment

ರೋಹಿತ್​ ಶೆಟ್ಟಿ ಜೊತೆಗಿನ 'ಸಿಂಗಮ್ ಅಗೇನ್' ಚಿತ್ರದಿಂದ ಹೊರಬಂದ ವಿಕ್ಕಿ ಕೌಶಲ್​.. ಏಕೆ ಗೊತ್ತಾ? - ಈಟಿವಿ ಭಾರತ ಕನ್ನಡ

ನಟ ವಿಕ್ಕಿ ಕೌಶಲ್​ ಅವರು ರೋಹಿತ್​ ಶೆಟ್ಟಿ ಜೊತೆಗಿನ 'ಸಿಂಗಮ್ ಅಗೇನ್' ಚಿತ್ರದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

Vicky Kaushal
ವಿಕ್ಕಿ ಕೌಶಲ್
author img

By

Published : Jul 25, 2023, 10:48 PM IST

ಬಾಲಿವುಡ್​ನ ಬಹುಬೇಡಿಕೆಯ ನಟ ವಿಕ್ಕಿ ಕೌಶಲ್​ ಅವರು ರೋಹಿತ್​ ಶೆಟ್ಟಿ ಜೊತೆಗಿನ 'ಸಿಂಗಮ್ ಅಗೇನ್' ಚಿತ್ರದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಸ್ಟಾರ್​ ನಟ ಅಜಯ್​ ದೇವಗನ್​ ಅವರ ಕಿರಿಯ ಸಹೋದರನಾಗಿ ನಟಿಸಲು ವಿಕ್ಕಿ ಕೌಶಲ್​ನನ್ನು ಆಹ್ವಾನಿಸಲಾಗಿತ್ತು. ಆದರೆ, ರೋಹಿತ್​ ಶೆಟ್ಟಿ ಅವರ ಚಿತ್ರ ಮತ್ತು ವಿಕ್ಕಿಯ ಇನ್ನೊಂದು ಪ್ರಾಜೆಕ್ಟ್ ಛಾವಾ ನಡುವಿನ ಶೂಟಿಂಗ್ ವೇಳಾಪಟ್ಟಿಯಲ್ಲಿನ ಘರ್ಷಣೆಯಿಂದಾಗಿ ಅವರು ಈ ಅವಕಾಶವನ್ನು ಕೈಬಿಡಬೇಕಾಯಿತು.

ವಿಕ್ಕಿ ಕೌಶಲ್,​ ರೋಹಿತ್​ ಶೆಟ್ಟಿ ಅವರ ನಿರ್ದೇಶನದ 'ಸಿಂಗಮ್ ಅಗೇನ್' ಮಾಸ್​ ಚಿತ್ರದ ಭಾಗವಾಗಲು ಪೂರ್ಣ ಪ್ರಮಾಣದಲ್ಲಿ ಉತ್ಸುಕರಾಗಿದ್ದರು ಎಂದು ಹತ್ತಿರದ ಮೂಲವು ಬಹಿರಂಗಪಡಿಸಿದೆ. ಅವರು ಚಿತ್ರಕ್ಕಾಗಿ ತಮ್ಮ ನೋಟವನ್ನು ಅಂತಿಮಗೊಳಿಸಿದ್ದರು. ಆದರೆ, ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದ ಲಕ್ಷ್ಮಣ್​ ಉಟೇಕರ್​ ಅವರ ಛಾವಾ ಚಿತ್ರದಲ್ಲಿ ವಿಕ್ಕಿ ಕೌಶಲ್​ ನಟಿಸಲಿದ್ದಾರೆ. ಈ ಎರಡು ಸಿನಿಮಾಗಳ ಶೂಟಿಂಗ್​ ವೇಳಾಪಟ್ಟಿಯ ಘರ್ಷಣೆಯಿಂದಾಗಿ ವಿಕ್ಕಿ ಕೌಶಲ್​ 'ಸಿಂಗಮ್ ಅಗೇನ್'ನಿಂದ ಹೊರಬಂದಿದ್ದಾರೆ.

ಛಾವಾವನ್ನು ಇದೇ ಸಮಯದಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. 'ಸಿಂಗಮ್ ಅಗೇನ್' ಸಿನಿಮಾಕ್ಕಾಗಿ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ವೇಳಾಪಟ್ಟಿಯನ್ನು ಸರಿಹೊಂದಿಸಲು ಎಲ್ಲಾ ಪ್ರಯತ್ನಗಳು ನಡೆಯಿತು. ಆದರೆ, ಕೊನೆಗೆ ವಿಕ್ಕಿ ತಮ್ಮ ನಿರ್ಧಾರವನ್ನು ರೋಹಿತ್​ ಶೆಟ್ಟಿಗೆ ತಿಳಿಸಬೇಕಾಯಿತು. ಸಂಪೂರ್ಣ ವೃತ್ತಿಪರರಾಗಿದ್ದ ಶೆಟ್ಟಿ ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು ಮತ್ತು ಅವರ ಆಯ್ಕೆಯನ್ನು ಗೌರವಿಸಿದರು.

ಇದನ್ನೂ ಓದಿ: ಕತ್ರಿನಾ-ವಿಕ್ಕಿ ರೊಮ್ಯಾಂಟಿಕ್ ಫೋಟೋ; ಮೇಡ್​ ಫಾರ್ ಈಚ್​ ಅದರ್ ಎನ್ನುವಂತಿದೆ 'ವಿಕ್ಯಾಟ್'​ ಜೋಡಿ

ರೋಹಿತ್ ಶೆಟ್ಟಿ ಅವರು ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಬಹು ತಾರೆಯರನ್ನು ಒಟ್ಟಿಗೆ ಶೂಟ್ ಮಾಡಲು ಯೋಜಿಸಿದ್ದರಿಂದ ದಿನಾಂಕದ ಸಮಸ್ಯೆಗಳು ಉದ್ಭವಿಸಿದವು. ಉಳಿದವರೆಲ್ಲರೂ ಅಕ್ಟೋಬರ್​ಗೆ ತಮ್ಮ ದಿನಾಂಕವನ್ನು ನಿಗದಿಪಡಿಸುವಲ್ಲಿ ಯಶಸ್ವಿಯಾದರು. ಆದರೆ, ವಿಕ್ಕಿ ಈಗಾಗಲೇ ಛಾವಾ ಸಿನಿಮಾ ಒಪ್ಪಿಕೊಂಡಿದ್ದರು. ಇದು 'ಸಿಂಗಮ್ ಅಗೇನ್'ಗಾಗಿ ಮತ್ತೊಮ್ಮೆ ಎಲ್ಲರ ದಿನಾಂಕಗಳನ್ನು ಮರುಹೊಂದಿಸಲು ಸವಾಲಾಗಿತ್ತು. ಆದರೆ, ಇದೀಗ ವಿಕ್ಕಿ ಈ ಪ್ರಾಜೆಕ್ಟ್​ನಿಂದ ಹೊರಬಂದಿದ್ದಾರೆ.

ವಿಕ್ಕಿ ಕೌಶಲ್ ಸದ್ಯ ತಮ್ಮ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಜೂನ್​​ 2ರಂದು ಬಿಡುಗಡೆಯಾದ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ತಮ್ಮ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಬಯಸುವ ದಂಪತಿಗಳ ಕುರಿತಾಗಿದೆ. ಇನ್ನೂ ವಿಕ್ಕಿ, ಮೇಘನಾ ಗುಲ್ಜಾರ್ ಆ್ಯಕ್ಷನ್​ ಕಟ್​ ಹೇಳಿರುವ ಸ್ಯಾಮ್ ಬಹದ್ದೂರ್‌ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಇದು ಸ್ಯಾಮ್ ಮಾಣೆಕ್​ ಷಾ ಅವರ ಬಯೋಪಿಕ್. ಇದು ಡಿಸೆಂಬರ್​ 1ರಂದು ತೆರೆಕಾಣಲು ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: ವಿಕ್ಕಿ ಕೌಶಲ್​ ನಟನೆಯ 'ಮಸಾನ್‌' ಚಿತ್ರಕ್ಕೆ ಎಂಟು ವರ್ಷ: ಪೋಸ್ಟ್​ ಹಂಚಿಕೊಂಡ ನಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.