ETV Bharat / entertainment

54 ಕೋಟಿ ಗಳಿಸಿದ ಸ್ಯಾಮ್​ ಬಹದ್ದೂರ್: ವಿಕ್ಕಿ ಕೌಶಲ್ ಸಿನಿಮಾದ ಬಜೆಟ್​​ 55 ಕೋಟಿ ರೂ.

Sam Bahadur Collection: 55 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣವಾದ ಸ್ಯಾಮ್​ ಬಹದ್ದೂರ್ ಸಿನಿಮಾ ವಿಶ್ವದಾದ್ಯಂತ ಒಟ್ಟು 53.8 ಕೋಟಿ ರೂಪಾಯಿ ಗಳಿಸಿದೆ.

Vicky Kaushal Sam Bahadur collection
ವಿಕ್ಕಿ ಕೌಶಲ್ ಸ್ಯಾಮ್​ ಬಹದ್ದೂರ್ ಕಲೆಕ್ಷನ್​​
author img

By ETV Bharat Karnataka Team

Published : Dec 10, 2023, 2:52 PM IST

ಬಾಲಿವುಡ್​ ನಟ ವಿಕ್ಕಿ ಕೌಶಲ್ ಅವರ 'ಸ್ಯಾಮ್​ ಬಹದ್ದೂರ್' ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವಿಕರಿಸಿದೆ. ಅದಾಗ್ಯೂ, ರಣ್​​​ಬೀರ್ ಕಪೂರ್ ಅವರ 'ಅನಿಮಲ್'​ ಸಿನಿಮಾ ಜೊತೆಗೆ ಸ್ಯಾಮ್​ ಬಹದ್ದೂರ್ ತೆರೆಕಂಡ ಹಿನ್ನೆಲೆ ಬಾಕ್ಸ್​​ ಆಫೀಸ್​ನಲ್ಲಿ ಪೈಪೋಟಿ ಎದುರಾಗಿದೆ. ವಿಕ್ಕಿ ಕೌಶಲ್ ನಟನೆಯ ಸಿನಿಮಾ ಶನಿವಾರದಂದು 6.75 ಕೋಟಿ ರೂಪಾಯಿ ಗಳಿಸಿ ದೇಶಿಯ ಮಾರುಕಟ್ಟೆಯಲ್ಲಿ ಈವರೆಗೆ 49.05 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಚಿತ್ರದ ಒಟ್ಟು ಬಜೆಟ್​​ 55 ಕೋಟಿ ರೂ. ಎಂದು ವರದಿಗಳು ಸೂಚಿಸಿವೆ.

ಭಾರತ ದೇಶದ ಮೊದಲ ಫೀಲ್ಡ್ ಮಾರ್ಷಲ್, ಆರ್ಮಿ ಜನರಲ್ ಸ್ಯಾಮ್ ಮಾಣಿಕ್​ ಶಾ ಅವರ ಜೀವನವನ್ನು ಆಧರಿಸಿ ನಿರ್ಮಾಣ ಮಾಡಲಾದ ಸಿನಿಮಾವೇ 'ಸ್ಯಾಮ್​ ಬಹದ್ದೂರ್'. ಸ್ಯಾಮ್ ಮಾಣಿಕ್​ ಶಾ ಅವರು 1971ರಲ್ಲಿ ನಡೆದ ಮಹತ್ವದ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ, ಪ್ರಮುಖ ಐದು ಯುದ್ಧಗಳಲ್ಲಿ ಭಾರತೀಯ ಸೇನೆಯಲ್ಲಿ ತೊಡಗಿದ್ದರು. ಸ್ಯಾಮ್ ಮಾಣಿಕ್​ ಶಾ ಜೀವನಾಧಾರಿತ ಸಿನಿಮಾದಲ್ಲಿ ವಿಕ್ಕಿ ಕೌಶಲ್​​ ಜೊತೆಗೆ ಸಾನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್, ಎಡ್ವರ್ಡ್ ಸೊನ್ನೆನ್‌ಬ್ಲಿಕ್, ನೀರಜ್ ಕಬಿ, ಮೊಹಮ್ಮದ್ ಜೀಶನ್ ಅಯ್ಯೂಬ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮೇಘನಾ ಗುಲ್ಜಾರ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಸ್ಯಾಮ್ ಮಾಣೆಕ್​ ಶಾ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆಂದು ವಿಕ್ಕಿ ಕೌಶಲ್ ಅವರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನಿಮಲ್ ಅಲೆಯ ಹೊರತಾಗಿಯೂ, ಮೇಘನಾ ಗುಲ್ಜಾರ್ ನಿರ್ದೇಶನದ ಸ್ಯಾಮ್​ ಬಹದ್ದೂರ್ ಶನಿವಾರ 6.75 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಈವರೆಗೆ ಒಟ್ಟು 49.05 ಕೋಟಿ ರೂಪಾಯಿ ಗಳಿಸಿದೆ ಎಂದು ಸಿನಿಮೋದ್ಯಮದ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ತಿಳಿಸಿದೆ.

ಇದನ್ನೂ ಓದಿ: ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ₹400 ಕೋಟಿ ಸಮೀಪಿಸಿದ 'ಅನಿಮಲ್'​

ಸ್ಯಾಮ್ ಬಹದ್ದೂರ್ ಸಿನಿಮಾ ತೆರೆಕಂಡ ಮೊದಲ ದಿನ 6.25 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿತು. ಶನಿವಾರ 9 ಕೋಟಿ ರೂ., ಭಾನುವಾರ 10.03 ಕೋಟಿ ರೂ. ಗಳಿಸಿದ ಸಿನಿಮಾದ ಕಲೆಕ್ಷನ್​​ ವಾರದ ದಿನಗಳಲ್ಲಿ ಕೊಂಚ ಕುಸಿತ ಕಂಡಿತು. 3 ರಿಂದ 3.5 ಕೋಟಿ ರೂ.ನ ಆಸುಪಾಸಿನಲ್ಲಿ ಕಲೆಕ್ಷನ್​​ ಆದವು. ಅದಾಗ್ಯೂ, ಸಿನಿಮಾ ತನ್ನ ಎರಡನೇ ಶನಿವಾರದಂದು ಉತ್ತಮ ಸಂಪಾದನೆ ಮಾಡಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಸುಮಾರು ಎರಡು ಪಟ್ಟು ಹೆಚ್ಚು ಗಳಿಕೆ ಮಾಡಿದೆ. ಶನಿವಾರ 6.75 ಕೋಟಿ ರೂ. ಗಳಿಸಿ ಒಟ್ಟು ಅಂಕಿ ಅಂಶ 49.05 ಕೋಟಿ ರೂಪಾಯಿಗೆ ತಲುಪಿದೆ.

ಇದನ್ನೂ ಓದಿ: 2ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿಕ್ಯಾಟ್‌ ಜೋಡಿ: ರೊಮ್ಯಾಂಟಿಕ್ ಫೋಟೋ ಪೋಸ್ಟ್‌

ಸ್ಯಾಮ್ ಬಹದ್ದೂರ್ ಸಿನಿಮಾ ಜಾಗತಿಕ ಮಟ್ಟದಲ್ಲಿ ಒಟ್ಟು 53.8 ಕೋಟಿ ರೂಪಾಯಿ ಗಳಿಸಿದೆ. ಚಿತ್ರಕ್ಕೆ ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆ ವ್ಯಕ್ತವಾಗಿದ್ದರೂ ಕೂಡ, ಅನಿಮಲ್​ ಅಬ್ಬರದಿಂದ ಸ್ಯಾಮ್ ಬಹದ್ದೂರ್​ನ ಅಂಕಿ ಅಂಶ ಸಾಧಾರಣವಾಗಿದೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್​ ಸಿನಿಮಾ ಭಾರತದಲ್ಲಿ 400 ಕೋಟಿ ರೂ.ನ ಆಸುಪಾಸಿನಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.