ETV Bharat / entertainment

ನಟಿಯಾಗಿ, ತಾಯಿಯಾಗಿ, ಪೋಷಕ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ ಅಭಿನೇತ್ರಿ ಲೀಲಾವತಿ - ಈಟಿವಿ ಭಾರತ ಕನ್ನಡ

ಕೊಟ್ಟ ಪಾತ್ರಕ್ಕೆ ಜೀವ ತುಂಬಿ ನಟಿಯಾಗಿ, ಪೋಷಕ ನಟಿಯಾಗಿ, ತಾಯಿಯಾಗಿ ಎಲ್ಲಾ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ ಡಾ.ಲೀಲಾವತಿ.

veteran Actress leelavathi movies
ನಟಿಯಾಗಿ, ತಾಯಿಯಾಗಿ, ಪೋಷಕ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ ಅಭಿನೇತ್ರಿ ಲೀಲಾವತಿ
author img

By ETV Bharat Karnataka Team

Published : Dec 8, 2023, 9:15 PM IST

ಬಹುಭಾಷಾ ನಟಿಯಾಗಿ ಬೆಳ್ಳಿ ತೆರೆಯಲ್ಲಿ ಮಿಂಚಿದ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ಸಿನಿಮಾ ಸಾಧನೆ ಅನೇಕರಿಗೆ ಆದರ್ಶ. ನಾಲ್ಕೂವರೆ ದಶಕಗಳ ಕಾಲ ಪ್ರೇಕ್ಷಕರನ್ನು ಮನರಂಜಿಸಿದ ಪ್ರೇಮಲೋಕದ ಶಾರದಮ್ಮ ಇನ್ನು ನೆನಪು ಮಾತ್ರ. ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಲೀಲಾವತಿ ಇಂದು ಇಹಲೋಕ ತ್ಯಜಿಸಿದ್ದಾರೆ. ಸ್ಯಾಂಡಲ್​ವುಡ್​ ಕಂಡ ಅಮೋಘ ಪ್ರತಿಭೆಯ ಸಿನಿ ಸಾಧನೆ ಎಂದಿಗೂ ಅವಿಸ್ಮರಣೀಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಇವರ ಹುಟ್ಟೂರು. ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್​. ಚಿಕ್ಕವಯಸ್ಸಿನಲ್ಲೇ ನಾಟಕ, ರಂಗಭೂಮಿ ಬಗೆಗೆ ಅತೀವ ಆಸಕ್ತಿ ಹೊಂದಿದ್ದ ಲೀಲಾವತಿ, ಮೈಸೂರಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಾಲ್ಯದಲ್ಲೇ ಸಿನಿಮಾ ವ್ಯಾಮೋಹ ಹೊಂದಿದ್ದ ಲೀಲಾವತಿಯವರು ಅದ್ಭುತವಾಗಿ ನೃತ್ಯ ಕೂಡ ಮಾಡುತ್ತಿದ್ದರು. ಇದೇ ಕಾರಣಕ್ಕೆ ಅವರು ಸುಲಭವಾಗಿ ಚಿತ್ರರಂಗದ ಮೆಟ್ಟಿಲೇರಲು ಸಾಧ್ಯವಾಯಿತು.

veteran Actress leelavati movies
ನಟಿಯಾಗಿ, ತಾಯಿಯಾಗಿ, ಪೋಷಕ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ ಅಭಿನೇತ್ರಿ ಲೀಲಾವತಿ

1949ರಲ್ಲಿ ನಿರ್ದೇಶಕ ಶಂಕರ್ ಸಿಂಗ್ ಅವರ 'ನಾಗಕನ್ನಿಕ' ಚಿತ್ರದಲ್ಲಿ ಚಂಚಲ ಕುಮಾರಿ ಎಂಬ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಲೀಲಾ ಕಿರಣ್​ ಪಾದಾರ್ಪಣೆ ಮಾಡಿದರು. ಅದರೆ 'ಮಾಂಗಲ್ಯ ಯೋಗ' ಸಿನಿಮಾ ಮೂಲಕ ನಾಯಕಿಯಾಗಿ ಪರಿಚಯವಾದರು. ಈ ಚಿತ್ರ ಒಂದು ಮಟ್ಟಿಗೆ ಗಮನ ಸೆಳೆಯಿತು. ನಂತರದಲ್ಲಿ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಕೊಟ್ಟ ಪಾತ್ರಕ್ಕೆ ಜೀವ ತುಂಬಿ ನಟಿಯಾಗಿ, ಪೋಷಕ ನಟಿಯಾಗಿ, ತಾಯಿಯಾಗಿ ಎಲ್ಲಾ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಡಾ.ರಾಜ್​ಕುಮಾರ್ ಜೊತೆ 'ರಾಣಿ ಹೊನ್ನಮ್ಮ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಲೀಲಾವತಿಯವರು ಅದೇ ರಾಜ್​ಕುಮಾರ್ ಅವರಿಗೆ 'ನಾ ನಿನ್ನ ಮರೆಯಲಾರೆ' ಚಿತ್ರದಲ್ಲಿ ನಾಯಕಿಯ ತಾಯಿಯಾಗಿ ಕಾಣಿಸಿಕೊಂಡರು. ತನ್ನ ಮಗಳು ಪ್ರೇಮಿಸುವ ಹುಡುಗನನ್ನು ಅಳಿಯನನ್ನಾಗಿ ಅಂಗೀಕರಿಸದೇ ಆಕೆಗೆ ಬೇರೆ ಮದುವೆ ಮಾಡಿ ತನ್ನ ಪ್ರತಾಪ ತೋರಿ ಮಗಳ ಪ್ರೇಮ ವಿವಾಹದ ಕನಸನ್ನು ನುಚ್ಚುನೂರು ಮಾಡಿ ತನ್ನ ಇಚ್ಛೆಯಂತೆ ವಿಜಯ ಸಾಧಿಸುವ ಪಾತ್ರ ಆ ಕಾಲದಲ್ಲಿ ಇಡೀ ಯುವ ಸಮೂಹವನ್ನೇ ರೊಚ್ಚಿಗೆಬ್ಬಿಸಿತ್ತು.

ಇನ್ನು 'ನಾಗರ ‌ಹಾವು' ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರು ಅಶ್ವಥ್ ಪತ್ನಿಯಾಗಿ, ಮೇಷ್ಟ್ರ ಅಚ್ಚುಮೆಚ್ಚಿನ ವಿದ್ಯಾರ್ಥಿಯನ್ನೇ ತನ್ನ ಮಗನನ್ನಾಗಿ ಕಂಡು ಮಕ್ಕಳಿಲ್ಲದ ತನ್ನ ಕೊರಗನ್ನು ಮುಚ್ಚಿಕೊಳ್ಳುವ ಆ ತಾಯಿಯ ಪಾತ್ರದಲ್ಲಿ ಲೀಲಾವತಿ ಅವರ ಮನೋಜ್ಞ ಅಭಿನಯಕ್ಕೆ ಮನಸೋಲದವರೇ ಇಲ್ಲ. ಇದರ ಜೊತೆಗೆ 'ವೀರ ಕೇಸರಿ' ಚಿತ್ರದಲ್ಲಿನ ಪ್ರಣಯ ಪಾತ್ರ, 'ಭಕ್ತ ಕುಂಬಾರ' ಚಿತ್ರದ ಗೋರನ ಪತ್ನಿಯ ಪಾತ್ರ ಹಾಗೂ 'ಡಾ.ಕೃಷ್ಣ' ಚಿತ್ರದಲ್ಲಿ ತಾಯಿಯ ಪಾತ್ರಗಳಲ್ಲಿನ ಲೀಲಾವತಿ ಅವರ ಅತ್ಯದ್ಭುತ ಅಭಿನಯಕ್ಕೆ ಲೀಲಾವತಿ ಅವರೇ ಸಾಟಿ.

ಕನ್ನಡದ ಎರಡು ಸೂಪರ್ ಹಿಟ್ ಸಿನಿಮಾಗಳಾದ 'ಮದುವೆ ಮಾಡಿ ನೋಡು' ಹಾಗೂ 'ಸಂತ ತುಕಾರಾಂ' ಚಿತ್ರಗಳಲ್ಲಿನ ಅಭಿನಯಕ್ಕೆ ಲೀಲಾವತಿ ಆ ಕಾಲದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅಲ್ಲದೇ, ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು ಹಾಗೂ ಗೆಜ್ಜೆ ಪೂಜೆ ಚಿತ್ರಗಳಲ್ಲಿ ಅತ್ಯುತ್ತಮ ನಟನೆಗಾಗಿ ಲೀಲಾವತಿ ಅವರಿಗೆ ರಾಜ್ಯ ಪ್ರಶಸ್ತಿಗಳು ಲಭಿಸಿವೆ.

ಇವರು ಡಾ.ರಾಜ್​ಕುಮಾರ್ ಮಾತ್ರವಲ್ಲದೇ, ಕಲ್ಯಾಣ್​ ಕುಮಾರ್, ಉದಯ್ ಕುಮಾರ್, ಅಶ್ವಥ್, ಬಾಲಕೃಷ್ಣ, ನರಸಿಂಹರಾಜ್, ಪ್ರಭಾಕರ್, ಶಂಕರ್​ನಾಗ್, ಅಂಬರೀಷ್, ವಿಷ್ಣುವರ್ಧನ್, ಅನಂತ್ ನಾಗ್, ದ್ವಾರಕೀಶ್ ಅಲ್ಲದೇ, ಸ್ಟಾರ್ ನಟಿಯರಾದ ಪಂಡರಿ ಬಾಯಿ, ಭಾರತಿ ವಿಷ್ಣುವರ್ಧನ್, ಜಯಂತಿ, ಕಲ್ಪನಾ, ಆರತಿ ಸೇರಿದಂತೆ ಆ ಕಾಲದ ಎಲ್ಲಾ ಸ್ಟಾರ್ ನಟರು ಹಾಗೂ ನಟಿಯರ ಜೊತೆ ಅಭಿನಯಿಸಿರುವ ಏಕೈಕ ನಟಿ ಲೀಲಾವತಿ ಎನ್ನಬಹುದು. ಒಟ್ಟಾರೆಯಾಗಿ ಕನ್ನಡ ಚಿತ್ರರಂಗವನ್ನು ಆಳಿದ ಇಂತಹ ಅದ್ಭುತ ಪ್ರತಿಭೆ ಲೀಲಾವತಿ ನಿಧನಕ್ಕೆ ಸಿನಿಮಾರಂಗ ಕಂಬನಿ ಮಿಡಿಯುತ್ತಿದೆ.

ಇದನ್ನೂ ಓದಿ: 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ, ನೂರಾರು ಪ್ರಶಸ್ತಿ; ಕಲಾಸೇವೆ ಮುಗಿಸಿ ಮರೆಯಾದ ಲೀಲಾವತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.