ETV Bharat / entertainment

VD13 ಮುಹೂರ್ತ: 'ಗೀತಾ ಗೋವಿಂದಂ' ನಿರ್ದೇಶಕರ ಹೊಸ ಸಿನಿಮಾದಲ್ಲಿ ವಿಜಯ್​ ದೇವರಕೊಂಡಗೆ ಮೃಣಾಲ್​ ನಾಯಕಿ - ಖ್ಯಾತ ನಿರ್ಮಾಪಕ ದಿಲ್ ರಾಜು

VD13 ಸಿನಿಮಾದ ಮುಹೂರ್ತ ಕಾರ್ಯಕ್ರಮ ಹೈದರಾಬಾದ್​ನಲ್ಲಿ ಇಂದು ಅದ್ಧೂರಿಯಾಗಿ ನೆರವೇರಿದೆ.

VD13
ವಿಜಯ್​ ದೇವರಕೊಂಡಗೆ ಮೃಣಾಲ್​ ನಾಯಕಿ
author img

By

Published : Jun 14, 2023, 7:17 PM IST

ಟಾಲಿವುಡ್​ ಸ್ಟಾರ್​ ನಟ ವಿಜಯ್ ದೇವರಕೊಂಡ 'ಗೀತಾ ಗೋವಿಂದಂ' ಮೂಲಕ ಹಿಟ್​ ಆದರು. ಪರಶುರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಸದ್ದು ಮಾಡಿತ್ತು. 100 ಕೋಟಿ ಕ್ಲಬ್ ಬಾಚಿದ್ದ ಗೀತಾ ಗೋವಿಂದಂ ಸಿನಿಮಾಗೆ ಸೌತ್ ಸಿನಿಜಗತ್ತು ಜೈಕಾರ ಹಾಕಿತ್ತು. ಈ ಸಿನಿಮಾ ಬ್ಲಾಕ್​ ಬಸ್ಟರ್​ ಆದ ನಂತರ ಚಿತ್ರತಂಡ ಮತ್ತೊಮ್ಮೆ ಕೈ ಜೋಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು.

ಇದೀಗ ಆರು ವರ್ಷಗಳ ನಂತರ ಆ ಮಾತು ನಿಜವಾಗಿದೆ. ಗೀತಾ ಗೋವಿಂದ ಚಿತ್ರತಂಡ ಹೊಸ ಸಿನಿಮಾಗಾಗಿ ಮತ್ತೆ ಒಂದಾಗಿದೆ. ಇಲ್ಲಿ ನಾಯಕ ಮತ್ತು ನಿರ್ದೇಶಕ ಅವ್ರೇ, ನಾಯಕಿ ಮಾತ್ರ ಬೇರೆ. ಸೀತಾರಾಮಂ ಸಿನಿಮಾ ಮೂಲಕ ಸೌತ್ ಸಿನಿಪ್ರಿಯರಿಗೆ ಪರಿಚಿತರಾಗಿರುವ ಮೃಣಾಲ್ ಠಾಕೂರ್ ಈ ಸಿನಿಮಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

VD13
VD13 ಚಿತ್ರತಂಡ

ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಹಾಗೂ ಪರಶುರಾಮ್ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ತಾತ್ಕಾಲಿಕವಾಗಿ ಈ ಚಿತ್ರಕ್ಕೆ VD13 ಎಂದು ಹೆಸರಿಡಲಾಗಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಹಾಗೂ ಶಿರೀಶ್ ಈ ಚಿತ್ರಕ್ಕೆ ಹಣ ಹಾಕುತ್ತಿದ್ದು, ವಾಸು ವರ್ಮಾ ಕ್ರಿಯೇಟಿವ್ ಪ್ರೊಡ್ಯೂಸರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೈದರಾಬಾದ್​ನಲ್ಲಿ ಇಂದು ಅದ್ಧೂರಿಯಾಗಿ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ.

ಇದನ್ನೂ ಓದಿ: ಸಂತೋಷ್ ಆರ್ಯನ್ ನಟನೆಯ 'ದಿ ಭವಾನಿ ಫೈಲ್ಸ್'ಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸಾಥ್​

ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಸಿನಿಮಾಗೆ ಕ್ಲ್ಯಾಪ್ ಮಾಡಿದ್ರೆ, ಗೋವರ್ಧನ್ ರಾವ್ ದೇವರಕೊಂಡ ಮೊದಲ ಶಾಟ್ ನಿರ್ದೇಶಿಸಿದ್ರು. ಜನಪ್ರಿಯ ಹಣಕಾಸುದಾರ ಸತ್ತಿ ರಂಗಯ್ಯ ಕ್ಯಾಮರಾಗೆ ಚಾಲನೆ ನೀಡಿದರು. ಸದ್ಯ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ. ಇದೇ ಮೊದಲ ಬಾರಿಗೆ ವಿಜಯ್ ದಿಲ್ ರಾಜು ಹಾಗೂ ಶಿರೀಶ್ ಜೊತೆ ಕೈ ಜೋಡಿಸಿದ್ದು, ಶ್ರೀ ವೆಂಕಟೇಶ್ವರ್ ಕ್ರಿಯೇಷನ್​ನ 54ನೇ ಸಿನಿಮಾ ಇದಾಗಿದೆ. ಕೆಯು ಮೋಹನನ್ ಛಾಯಾಗ್ರಹಣ, ಗೋಪಿಸುಂದರ್ ಸಂಗೀತ, ಎಎಸ್ ಪ್ರಕಾಶ್ ಕಲಾ ನಿರ್ದೇಶನ, ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನ ಸಿನಿಮಾಕ್ಕಿದೆ.

VD13
VD13 ಚಿತ್ರತಂಡ

ಮೃಣಾಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ VD13 ಮುಹೂರ್ತ ಸಮಾರಂಭದ ಪೋಟೋಗಳನ್ನು ಹಂಚಿಕೊಂಡು, "ಬಹಳ ರೋಮಾಂಚಕಾರಿ ಪ್ರಯಾಣದ ಮೊದಲ ಹೆಜ್ಜೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ನೊಂದಿಗೆ ಮತ್ತು ವಿಜಯ್​ ದೇವರಕೊಂಡ ಜೊತೆ ಕೆಲಸ ಮಾಡಲು ಥ್ರಿಲ್ ಆಗಿದ್ದೇನೆ. ಸಿನಿಮಾ ಶೂಟಿಂಗ್​ ಪ್ರಾರಂಭಗೊಳ್ಳುವವರೆಗೆ ಕಾಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಮೃಣಾಲ್​ ಪೋಸ್ಟ್​ಗೆ ಪ್ರತಿಕ್ರಿಯಿಸಿದ ಅಭಿಮಾನಿಗಳು ನಿಮ್ಮಿಬ್ಬರನ್ನು ತೆರೆ ಮೇಲೆ ಜೋಡಿಯಾಗಿ ನೋಡಲು ಕಾಯುತ್ತಿದ್ದೇವೆ ಎಂದಿದ್ದಾರೆ. "ಚಿತ್ರವು ಗೀತಾ ಗೋವಿಂದಂ ದಾಖಲೆಯನ್ನು ಮುರಿಯಲಿದೆ" ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ವಿಜಯ್​ ಮತ್ತು ಮೃಣಾಲ್​ ಪೋಟೋಗಳಿಗೆ ಲೈಕ್ಸ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಇದನ್ನೂ ಓದಿ: Actor Jaggesh: ಮೂರು ಕನ್ನಡ ಪ್ಯಾನ್​ ಇಂಡಿಯಾ ಸಿನಿಮಾಗಳ ಬಗ್ಗೆ ಜಗ್ಗೇಶ್​ ನುಡಿದಿದ್ದ ಭವಿಷ್ಯ ನಿಜವಾಯ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.