ETV Bharat / entertainment

ನಾಳೆ ವಸಿಷ್ಠ ಸಿಂಹ ಜನ್ಮದಿನ: ಬಹುಬೇಡಿಕೆ ನಟನ ಹೊಸ ಸಿನಿಮಾ ಘೋಷಣೆ - Vasishta Simha birthday

Vasishta Simha Upcoming Movie: ಬ್ರಹ್ಮ ಅವರ ನಿರ್ದೇಶನದಲ್ಲಿ ವಸಿಷ್ಠ ಸಿಂಹ ಅವರ ಮುಂದಿನ ಸಿನಿಮಾ ಮೂಡಿ ಬರಲಿದೆ.

Vasishta Simha
ವಸಿಷ್ಠ ಸಿಂಹ ಮುಂದಿನ ಸಿನಿಮಾ
author img

By ETV Bharat Karnataka Team

Published : Oct 18, 2023, 1:25 PM IST

ಕನ್ನಡ ಚಿತ್ರರಂಗದಲ್ಲಿ ತಮ್ಮ ಕಂಚಿನ ಕಂಠದ ಜೊತೆಗೆ ಅಮೋಘ ಅಭಿನಯದಿಂದ ಸಿನಿಪ್ರಿಯರ ಮನಗೆದ್ದಿರುವ ನಟ ವಸಿಷ್ಠ ಸಿಂಹ. ಲವ್ ಲಿ ಸಿನಿಮಾದ ಜಪ ಮಾಡುತ್ತಿರುವ ವಸಿಷ್ಠ ಸಿಂಹ ಅವರು ಅಕ್ಟೋಬರ್ 19 ರಂದು ಅಂದರೆ ಗುರುವಾರ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ನಟ ವಸಿಷ್ಠ ಸಿಂಹ ಜನ್ಮದಿನ ಸಲುವಾಗಿ 'ಕಲಾ ಸೃಷ್ಠಿ ಪ್ರೊಡಕ್ಷನ್ಸ್' ವತಿಯಿಂದ ಹೊಸ ಚಿತ್ರದ ಘೋಷಣೆ ಆಗಿದೆ. ಈ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ಮೊದಲ ಚಿತ್ರವಿದು.

ಬ್ರಹ್ಮ ನಿರ್ದೇಶನದಲ್ಲಿ ವಸಿಷ್ಠ ಸಿಂಹರ ಮುಂದಿನ ಸಿನಿಮಾ: ಗುರುವಾರದಂದು 35ನೇ ಬರ್ತ್ ಡೇ ಸೆಲೆಬ್ರೇಟ್​ ಮಾಡಿಕೊಳ್ಳಲಿರುವ ವಸಿಷ್ಠ ಸಿಂಹ ಅವರಿಗೆ ಮತ್ತು ಅಭಿಮಾನಿಗಳಿಗಿದು ಚಿತ್ರತಂಡದ ಕಡೆಯಿಂದ ಸಿಗುತ್ತಿರುವ ಉಡುಗೊರೆ​. ಅಫ್ಜಲ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸಿದ್ದಿ ಸೀರೆ ಹಾಗೂ ರಾಗಿಣಿ ಅಭಿನಯದ ಸಾರಿ ಕರ್ಮ ರಿಟರ್ನ್ಸ್ ಚಿತ್ರ ನಿರ್ದೇಶಿಸಿದ್ದ ಬ್ರಹ್ಮ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

Vasishta Simha
ಬ್ರಹ್ಮ ಅವರ ನಿರ್ದೇಶನದಲ್ಲಿ ವಸಿಷ್ಠ ಸಿಂಹರ ಮುಂದಿನ ಸಿನಿಮಾ

ದೀಪಾವಳಿ ಬಳಿಕ ಚಿತ್ರೀಕರಣ ಶುರು: ಕ್ರೈಮ್ ಥ್ರಿಲ್ಲರ್ ಹಾಗೂ ರಿವೆಂಜ್ ಕಥಾಹಂದರ ಹೊಂದಿರುವ ಈ ಚಿತ್ರದ ಮೇಕಿಂಗ್​​ ಹಾಲಿವುಡ್ ಸ್ಟೈಲ್​ನಲ್ಲಿ (ನಾನ್ ಲೀನಿಯರ್ ಸ್ಕ್ರೀನ್ ಪ್ಲೇ) ಇರಲಿದೆ. ಬೆಂಗಳೂರು, ಕೊಡಗು ಸೇರಿದಂತೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ದೀಪಾವಳಿ ಹಬ್ಬದ ಬಳಿಕ ಚಿತ್ರೀಕರಣ ಆರಂಭ ಆಗಲಿದೆ.

ರಾಜೀವ್ ಗಣೇಶನ್ ಛಾಯಾಗ್ರಹಣ ಹಾಗೂ ರಾಘವನ್ ಕಾರ್ತಿಕ್ ಸಂಗೀತ ನಿರ್ದೇಶನ "ಪ್ರೊಡಕ್ಷನ್ ನಂ 1" (ತಾತ್ಕಾಲಿಕ ಶೀರ್ಷಿಕೆ) ಚಿತ್ರಕ್ಕಿರಲಿದೆ. ಅನೇಕ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಶೀರ್ಷಿಕೆ ಸೇರಿದಂತೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ನಾಳೆ ಬೆಂಗಳೂರಿನಲ್ಲಿರಲ್ಲ ವಸಿಷ್ಠ ಸಿಂಹ: ನಾಳೆ ನಟ ವಸಿಷ್ಠ ಸಿಂಹ 35ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಈ ಸಂಬಂಧ ಮಂಗಳವಾರ ಸಂಜೆಯೇ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದೆ. ಆದ್ರೆ ಕಾರಣಾಂತರಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ನೀವು ಇರುವ ಜಾಗದಿಂದಲೇ ನನಗೆ ಆಶೀರ್ವಾದ ಮಾಡಿ, ಪ್ರೀತಿ ಕೊಡಿ. ನಿಮ್ಮೆಲ್ಲರ ಪ್ರಾರ್ಥನೆ ನನ್ನೊಂದಿಗಿರಲಿ. ಆದಷ್ಟು ಬೇಗ ಬೆಂಗಳೂರಿನಲ್ಲಿ ಸಿಗೋಣ. ತಡವಾಗಿ ಮಾಹಿತಿ ಕೊಡುತ್ತಿರುವುದಕ್ಕೆ ಕ್ಷಮಿಸಿ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: 'ದಯಮಾಡಿ ಉರಿಸಬೇಡ ಬಡವನ ಹೃದಯ'..ಗರಡಿ ಸಿನಿಮಾ ಸಾಂಗ್​ ಮೆಚ್ಚಿದ ಪ್ರೇಕ್ಷಕರು

ಕನ್ನಡ ಚಿತ್ರರಂಗದಲ್ಲಿ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡಿರುವ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಜೋಡಿ ಜನವರಿ 26 ರಂದು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮೂರು ವರ್ಷಗಳ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಈ ಸಾಲಿನಲ್ಲಿ ಬಿದ್ದಿದೆ. ಮದುವೆ ಬಳಿಕ ವಸಿಷ್ಠ ಸಿಂಹ ಅವರು ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಪತ್ನಿ ಹರಿಪ್ರಿಯ ಅವರು ಸ್ಪೆಷಲ್​ ಸರ್​ಪ್ರೈಸ್​ ಕೊಡಲಿದ್ದಾರೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.

ಇದನ್ನೂ ಓದಿ: ನಾಳೆ ಲಿಯೋ ಬಿಡುಗಡೆ: ಆದರೆ ವಿಜಯ್​​ ಅಭಿಮಾನಿಗಳಿಗಿದೆ ಬೇಸರದ ಸಂಗತಿ! ಏನದು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.