ಚೆನ್ನೈ(ತಮಿಳುನಾಡು): ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ತಮಿಳು ಚಲನಚಿತ್ರ 'ವರಿಸು'ಗೆ ಇದೀಗ ಸಂಕಷ್ಟ ಎದುರಾಗಿದೆ. ಕಡ್ಡಾಯವಾಗಿ ಪಡೆಯಬೇಕಿದ್ದ ಅನುಮತಿ ಪಡೆಯದೇ ಐದು ಆನೆಗಳನ್ನು ಬಳಸಿದ್ದಕ್ಕಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯೂಬಿಐ) ಶೋಕಾಸ್ ನೋಟಿಸ್ ನೀಡಿದೆ.
ವರಿಸು ಚಿತ್ರವನ್ನು ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಎಡಬ್ಲ್ಯೂಬಿಐ ಕಾರ್ಯದರ್ಶಿ ಎಸ್.ಕೆ ದತ್ತಾ ಅವರು ನವೆಂಬರ್ 23 ರ ನೋಟಿಸ್ನಲ್ಲಿ, ವರಿಸು ಚಿತ್ರದಿಂದ ಕಡ್ಡಾಯ ಪೂರ್ವ ಚಿತ್ರೀಕರಣ ಅನುಮತಿ ಅರ್ಜಿಯನ್ನು ಮಂಡಳಿ ಸ್ವೀಕರಿಸಿಲ್ಲ ಮತ್ತು ಚಿತ್ರ ನಿರ್ಮಾಪಕರು ಪ್ರಾಣಿಗಳ ಪ್ರದರ್ಶನ (ನೊಂದಣಿ) ನಿಯಮಗಳು 2001 ಅನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ.
ನಿಯಮಗಳ ಪ್ರಕಾರ, ಪ್ರಾಣಿಗಳನ್ನು ಪ್ರದರ್ಶಿಸಬೇಕಾದರೆ ಅಥವಾ ತರಬೇತಿ ನೀಡುವುದಾದರೆ ಆ ವ್ಯಕ್ತಿಯು ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಆದರೆ ವೆಂಕಟೇಶ್ವರ ಕ್ರಿಯೇಷನ್ಸ್ನಿಂದ ಪ್ರಿ-ಶೂಟ್ ಅರ್ಜಿಯನ್ನು ಮಂಡಳಿ ಸ್ವೀಕರಿಸಿಲ್ಲ. ಮಂಡಳಿಯ ಅನುಮತಿಯಿಲ್ಲದೆ ಪ್ರಾಣಿಗಳನ್ನು ಪ್ರದರ್ಶಿಸುವುದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, 1960ರ ಸೆಕ್ಷನ್ 26ರ ಅಡಿಯಲ್ಲಿ ಅಪರಾಧವಾಗಿದೆ. ಈ ಬಗ್ಗೆ ಮಂಡಳಿಯು, ಉಲ್ಲಂಘನೆಯ ಸಂಪೂರ್ಣ ಮತ್ತು ಸಮಗ್ರ ವಿವರಣೆಗಳನ್ನು ಏಳು ದಿನಗಳಲ್ಲಿ ಸಲ್ಲಿಸುವಂತೆ ವೆಂಕಟೇಶ್ವರ ಕ್ರಿಯೇಷನ್ಸ್ಗೆ ನಿರ್ದೇಶಿಸಿದೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ದೃಶ್ಯಂ ಹವಾ.. 100 ಕೋಟಿ ಕ್ಲಬ್ ಸೇರಲಿದೆ ದೃಶ್ಯಂ 2 ಸಿನಿಮಾ!