ETV Bharat / entertainment

ಬಾಲಯ್ಯ 'ಆಹಾ' ಕಾರ್ಯಕ್ರಮದಲ್ಲಿ ಪವರ್​ ಸ್ಟಾರ್​ ಪವನ್​ ಕಲ್ಯಾಣ್​!

author img

By

Published : Jan 15, 2023, 7:19 PM IST

ತೆಲುಗಿನ ಟಾಪ್​ ಒಟಿಟಿ ಕಾರ್ಯಕ್ರಮವಾದ ಸೆಲೆಬ್ರಿಟಿ ಟಾಕ್ ಶೋ ಅನ್‌ಸ್ಟಾಪಬಲ್ ವಿತ್ ನಂದಮೂರಿ ಬಾಲಕೃಷ್ಣ ಸೀಸನ್ 2 ನಲ್ಲಿ ಇಂದು ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಬರುತ್ತಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

PSPK x NBK
ಅನ್‌ಸ್ಟಾಪಬಲ್ ವಿತ್ ಬಾಲಯ್ಯದಲ್ಲಿ ಪವರ್​ ಸ್ಟಾರ್​ ಪವನ್​ ಕಲ್ಯಾಣ್​

ಹೈದರಾಬಾದ್: ತೆಲುಗು ಸೆಲೆಬ್ರಿಟಿ ಟಾಕ್ ಶೋ ಅನ್‌ಸ್ಟಾಪಬಲ್ ವಿತ್ ನಂದಮೂರಿ ಬಾಲಕೃಷ್ಣ ಸೀಸನ್ 2ರ ಈ ಭಾನುವಾರದ ಎಪಿಸೋಡ್​ನ ಗೆಸ್ಟ್ ​ಬಗ್ಗೆ ಆಹಾ ಟ್ರೈಲರ್​ ಬಿಡುಗಡೆ ಮಾಡಿದೆ. ಈ ಹಿಂದೆಯೇ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಭಾಗವಹಿಸಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದ್ದವು, ಈಗ ಆ ಮಾತು ಸತ್ಯ ಆಗಿದ್ದು ಟ್ರೈಲರ್​ನಲ್ಲಿ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಅವರ ಗ್ಯಾಂಡ್​ ಎಂಟ್ರಿಯನ್ನು ರಿವಿಲ್​ ಮಾಡಿದ್ದಾರೆ.

ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಮತ್ತು ಬಾಲಯ್ಯ ಅವರ ನಡುವಿನ ಸಂವಾದ ಇಂದೇ ಆಹಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. PSPK x NBK (ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಮತ್ತು ನಂದಮೂರಿ ಬಾಲಕೃಷ್ಣ) ಸಂವಾದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಬ್ಬರೂ ಇಂಡಸ್ಟ್ರೀಯ ಸೂಪರ್​ ಸ್ಟಾರ್​ಗಳಾಗಿದ್ದಾರೆ. ಎರಡು ನಟರು ತಮ್ಮದೇ ಆದ ಫ್ಯಾನ್​​ ಪಾಲೋಯಿಂಗ್ ಹೊಂದಿದ್ದಾರೆ.

  • " class="align-text-top noRightClick twitterSection" data="">

ಬಿಡುಗಡೆ ಆದ ಟ್ರೈಲರ್​ನಲ್ಲಿ ನಟರ ಸಂಭಾಷಣೆ ಬಿಡುಗಡೆಯಾಗಿಲ್ಲ. ಶೋಗೆ ಬರುತ್ತಿರುವ ಇಬ್ಬರು ಸೂಪರ್​ ಸ್ಟಾರ್​ಗಳ ಎಂಟ್ರಿ ಮಾತ್ರ ತೋರಿಸಿದ್ದಾರೆ. ಈ ಹಿಂದಿನ ಎಪಿಸೋಡ್​ನಲ್ಲಿ ಪ್ರಭಾಸ್​ ಬಂದಿದ್ದು, ಅದು ತುಂಬಾ ವೀಕ್ಷಣೆಗಳಿಸಿತ್ತು ಮತ್ತು ಅದರಲ್ಲಿ ಪ್ರಭಾಸ್​ ಅವರ ಡೇಟಿಂಗ್​ ಬಗ್ಗೆ ಬಾಲಯ್ಯ ಪ್ರಶ್ನೆ ಕೇಳಿದ್ದು ಸಿಕ್ಕಾ ಪಟ್ಟೆ ವೈರಲ್​ ಆಗಿತ್ತು. ಈಗ ಈ ಇಬ್ಬರ ಸಮಾಗಮದ ಬಗ್ಗೆ ಹೆಚ್ಚಿನ ಹೈಪ್​ ಕ್ರಿಯೆಟ್​ ಆಗಿದ್ದು ಇದು ಅನ್‌ಸ್ಟಾಪಬಲ್ ವಿತ್ ನಂದಮೂರಿ ಬಾಲಕೃಷ್ಣ ಸೀಸನ್ 2 ಅತೀ ಹೆಚ್ಚು ವೀಕ್ಷಿಸಲ್ಪಡುವ ಎಪಿಸೋಡ್​ ಎನ್ನಲಾಗಿದೆ.

ಇಬ್ಬರು ಸೂಪರ್​ ಸ್ಟಾರ್​ಗಳು ಮೊದಲ ಬಾರಿಗೆ ಕಿರುತೆರೆಯಲ್ಲಿ ಒಟ್ಟಿಗೆ ಒಂದು ಶೋದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕ್ಷಣವನ್ನು ಎರಡು ಸ್ಟಾರ್​ಗಳ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅಭಿಮಾನಿ ಒಬ್ಬರು ಕಮೆಂಟ್​ ಮಾಡಿದ್ದು "ಇದು ಇಬ್ಬರು ಶಕ್ತಿಶಾಲಿ ತಾರೆಗಳನ್ನು ಒಳಗೊಂಡ ಅತ್ಯಂತ ರೋಮಾಂಚಕಾರಿ ಸಂಚಿಕೆಯಾಗಿದೆ" ಎಂದಿದ್ದಾರೆ. ಇನ್ನೊಬ್ಬ ಅಭಿಮಾನಿ "ಅತ್ಯಂತ ಅಪರೂಪದ ಸಂಚಿಕೆ. ಒಟಿಟಿಯಲ್ಲಿ ಪವನ್​ ಕಲ್ಯಾಣ್ ಬರುತ್ತಿದ್ದು ಒಂದು ದೊಡ್ಡ ಮನರಂಜನೆ" ಎಂದು ಬರೆದು ಕೊಂಡಿದ್ದಾರೆ.

ಇಂಟರ್ನೆಟ್ ಮೂವಿ ಡೇಟಾಬೇಸ್ (IMDb)ಯಲ್ಲಿ ಟಾಪ್​ ಶೋ ಎನ್ನಿಸಿಕೊಂಡಿರುವ ಸ್ಟಾಪಬಲ್ ವಿತ್ ನಂದಮೂರಿ ಬಾಲಕೃಷ್ಣ ಸೀಸನ್ 2 ಇಂದಿನ ಸಂಚಿಕೆಯಿಂದ ಇನ್ನಷ್ಟು ಹೈಪ್​ಗೆ ಹೋಗಲಿದೆ. ಟ್ವಿಟರ್​ನಲ್ಲಿ ಪೋಸ್ಟರ್​ಗಳು ರಾರಾಜಿಸುತ್ತಿದೆ. ಅಲ್ಲದೇ ಶೋನಲ್ಲಿ ಭಾಗವಹಿಸಿದ ಪ್ರೇಕ್ಷಕರು ತಮ್ಮ ಮೊಬೈಲ್​ನಲ್ಲಿ ತೆಗೆದಿರುವ ವಿಡಿಯೋಗಳನ್ನು ಶೇರ್​ ಮಾಡುತ್ತಿದ್ದಾರೆ.

ಟಾಕ್​ ಶೋದ ಎರಡನೇ ಆವೃತ್ತಿ ಅಕ್ಟೋಬರ್​ನಲ್ಲಿ ಆರಂಭವಾಯಿತು. ತೆಲುಗು ಸಿನಿಮಾ ರಂಗದ ಖ್ಯಾತ ನಟ, ನಿರ್ಮಾಪಕ ಮತ್ತು ನಿರ್ದೇಶಕರು ಭಾಗವಗಹಿಸಿದ್ದರು. ಇಂದು ಪ್ರಸಾರವಾಗಲಿರುವ ಪವನ್ ಕಲ್ಯಾಣ್ ಭಾಗವಹಿಸುತ್ತಿರುವ ಎಪಿಸೋಡ್ ಈ ಆವೃತ್ತಿಯ ಕೊನೆಯದ್ದು ಎಂದು ಹೇಳಲಾಗುತ್ತಿದೆ. ಈ ಕಾರಣ ಯಾವುದೇ ಸೆಲೆಬ್ರಿಟಿ ಟಾಕ್ ಶೋನಲ್ಲಿ ಕಾಣಿಸಿಕೊಳ್ಳದ ಪವನ್ ಕಲ್ಯಾಣ್ ಅವರನ್ನು ಕರೆಸಿ ಅದ್ಧೂರಿಯಾಗಿ ತೆರೆ ಎಳೆಯಲು ಆಹಾ ಬಯಸಿದೆ. ಇಡೀ ಸೀಸನ್​ನ ಅತೀ ಹೆಚ್ಚು ಫ್ಯಾನ್​ ಬೇಸ್​ ಕಾರ್ಯಕ್ರಮ ಇದಾಗಿರಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಆರ್​ಆರ್​ಆರ್​ ಬಾಲಿವುಡ್​ ಸಿನಿಮಾವಲ್ಲ, ಅಪ್ಪಟ ತೆಲುಗು ಚಿತ್ರ: ಅಮೆರಿಕದಲ್ಲಿ ರಾಜಮೌಳಿ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.