ETV Bharat / entertainment

ಭರದಿಂದ ಸಾಗಿದ ಅನ್ ಲಾಕ್ ರಾಘವ ಕ್ಲೈಮ್ಯಾಕ್ಸ್ ಚಿತ್ರೀಕರಣ

author img

By

Published : Dec 24, 2022, 9:07 PM IST

ಅನ್ ಲಾಕ್ ರಾಘವ ಸಿನಿಮಾ ಚಿತ್ರೀಕರಣ - ಭರದಿಂದ ಸಾಗಿದ ಕ್ಲೈಮ್ಯಾಕ್ಸ್ ಶೂಟಿಂಗ್​ - ಮಾಹಿತಿ ಹಂಚಿಕೊಂಡ ಚಿತ್ರತಂಡ.

Unlock Raghava
ಅನ್ ಲಾಕ್ ರಾಘವ ಚಿತ್ರೀಕರಣ

ಸ್ಯಾಂಡಲ್​ವುಡ್​ನಲ್ಲಿ ಶೀರ್ಷಿಕೆಯಿಂದ ಗಮನ ಸೆಳೆದಿರುವ ಅನ್ ಲಾಕ್ ರಾಘವ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಭರದಿಂದ ಸಾಗಿದೆ. ಸತ್ಯ ಮತ್ತು ಮಯೂರ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಕ್ಲೈಮಾಕ್ಸ್ ಹಾಸ್ಯದೊಂದಿಗೆ ಸಾಕಷ್ಟು ಅಚ್ಚರಿ ಮೂಡಿಸಲಿದೆಯಂತೆ.

ದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮಿಲಿಂದ್ ನಾಯಕ ನಟನಾಗಿ ನಟಿಸುತ್ತಿದ್ದು, ನಾಯಕಿಯಾಗಿ ರೇಚಲ್ ಡೇವಿಡ್ ನಟಿಸುತ್ತಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಾಯಕ, ನಾಯಕಿ ಒಳಗೊಂಡಂತೆ ಸಾಧುಕೋಕಿಲ, ಸುಂದರ್, ವೀಣಾ ಸುಂದರ್, ಶೋಭರಾಜ್, ಅವಿನಾಶ್ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದಾರೆ. ಚಿತ್ರತಂಡ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ನಾಯಕ ನಟ ಮಿಲಿಂದ್ ಮಾತನಾಡಿ, ಒಬ್ಬ ಹೀರೋ ಆಗಿ ನನಗೆ ಬಹಳ ಮುಖ್ಯವಾದ ಸಿನಿಮಾವಿದು. ಅದ್ಭುತವಾದ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ಸತ್ಯ ಸರ್ ಬರವಣಿಗೆಯು ಈ ಸಿನಿಮಾದ ಶಕ್ತಿ. ಕಮರ್ಶಿಯಲ್ ಸಿನಿಮಾವಾದ್ರೂ ಕೂಡ ಜಾಸ್ತಿ ಆ್ಯಕ್ಷನ್​ ಸೀನ್​ಗಳಿಲ್ಲ. ಬದಲಾಗಿ ರೊಮ್ಯಾನ್ಸ್ ಮತ್ತು ಕಾಮಿಡಿಗೆ ಹೆಚ್ಚು ಒತ್ತು ನೀಡಿದ್ದೇವೆ. ಮೊದಲ ಸಿನಿಮಾದಲ್ಲಿ ಪೆಟ್ಟು ತಿಂದಿದ್ದರಿಂದ, ಈ ಸಿನಿಮಾ ಮಾಡುವಾಗ ಒಂದು ಫಿಯರ್ ಇತ್ತು. ನಿರ್ದೇಶಕ ದೀಪಕ್ ಸರ್ ಅದನ್ನೆಲ್ಲ ಹೋಗಲಾಡಿಸಿ, ನನ್ನನ್ನು ಸಾಕಷ್ಟು ತಿದ್ದಿದ್ದಾರೆ. ನಾನು ಈ ಸಿನಿಮಾ ಮಾಡಲು ನಮ್ಮ ತಂದೆ ಪ್ರಮುಖ ಕಾರಣ. ಅವರಿಗೆ ಸಿನಿಮಾ ಅಂದ್ರೆ ಪ್ಯಾಶನ್, ನಾನು ನಟನಾಗಬೇಕು ಎಂಬುದು ಅವರ ಆಸೆ. ಈ ಸಿನಿಮಾ ಜರ್ನಿಯಲ್ಲಿ ಪ್ರತಿ ಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಈ ಸಿನಿಮಾ ಗೆಲ್ಲುತ್ತೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.

Unlock Raghava
ಅನ್ ಲಾಕ್ ರಾಘವ ಚಿತ್ರತಂಡ

ಇನ್ನು ಈ ಚಿತ್ರದ ನಟಿ ರೇಚಲ್ ಡೇವಿಡ್ ಮಾತನಾಡಿ, ವಿಶೇಷವಾದ ಪಾತ್ರ ನನ್ನದು. ಈಗ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಇಲ್ಲಿವರೆಗೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಿರಿಯ ನಟರೊಂದಿಗೆ ನಟಿಸಿದ್ದು ಒಳ್ಳೆ ಅನುಭವ ಕೊಟ್ಟಿದೆ. ಚಿತ್ರದಲ್ಲಿ ಜಾನಕಿ ಹೆಸರಲ್ಲಿ ಆರ್ಕಿಯೋಲಜಿಸ್ಟ್ ಪಾತ್ರ ನಿರ್ವಹಿಸಿದ್ದೇನೆ ಎಂದರು.

ಹಿರಿಯ ನಟ ಅವಿನಾಶ್ ಮಾತನಾಡಿ, ಇದು ಬಹಳ ಒಳ್ಳೆಯ ಕಥಾಹಂದರವಿರುವ ಸಿನಿಮಾ. ಹಲವು ಕಲಾವಿದರು ಈ ಚಿತ್ರದಲ್ಲಿದ್ದೇವೆ. ಥ್ರಿಲ್ ಇದೆ, ಹ್ಯೂಮರ್ ಇದೆ, ವಿಡಂಬನಾತ್ಮಕವಾಗಿ ಸಿನಿಮಾ ಹೋಗುತ್ತೆ. ನಿರ್ದೇಶಕ ದೀಪಕ್ ಸಿನಿಮಾವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ನನಗೆ ಒಳ್ಳೆಯ ಅನುಭವ ನೀಡಿದೆ ಎಂದರು.

Unlock Raghava
ಅನ್ ಲಾಕ್ ರಾಘವ ಚಿತ್ರತಂಡ

ಅನ್ ಲಾಕ್ ರಾಘವ ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡಿ, ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಎಂಟು ದಿನಗಳ ಕಾಲ ಕ್ಲೈಮಾಕ್ಸ್ ಚಿತ್ರೀಕರಣ ಯೋಜಿಸಿದ್ದು, ಇನ್ನು ಮೂರು ದಿನಗಳಲ್ಲಿ ಮುಗಿಯಲಿದೆ. ಒಟ್ಟು 50 ರಿಂದ 55 ದಿನ ಚಿತ್ರೀಕರಣ ಮಾಡಿದ್ದೇವೆ. ಎಲ್ಲಾ ಕಲಾವಿದರ ಕಾಂಬಿನೇಶನ್​ನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಿಸುತ್ತಿದ್ದೇವೆ. ವಿನೋದ್ ಮಾಸ್ಟರ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ರೀತಿಯ ಪ್ರಯತ್ನ ಸಿನಿಮಾದಲ್ಲಿದೆ. ಆ್ಯಕ್ಷನ್ ಜೊತೆಗೆ ಹ್ಯೂಮರ್ ಕೂಡ ಇಡೀ ಸಿನಿಮಾದಲ್ಲಿ ಜೊತೆಯಾಗಿ ಟ್ರಾವೆಲ್ ಆಗಲಿದೆ. ಸಿನಿಮಾಗೆ ಏನೂ ಕೊರತೆ ಆಗದ ಹಾಗೆ ನಿರ್ಮಾಪಕರು ನೋಡಿಕೊಂಡಿದ್ದಾರೆ ಎಂದರು.

ಚಿತ್ರದ ನಿರ್ಮಾಪಕ ಮಂಜುನಾಥ್ ಡಿ ಮಾತನಾಡಿ, ಒಳ್ಳೆಯ ಕಂಟೆಂಟ್ ಕೊಟ್ರೆ ಖಂಡಿತ ಜನ ಸಿನಿಮಾವನ್ನು ನೋಡ್ತಾರೆ, ಗೆಲ್ಲಿಸ್ತಾರೆ. ಈ ಸಿನಿಮಾದ ಕಂಟೆಂಟ್ ತುಂಬಾ ಚೆನ್ನಾಗಿದೆ. ಒಳ್ಳೆಯ ಕಲಾವಿದರು ಇದ್ದಾರೆ. ಗೆಲ್ಲುವ ವಿಶ್ವಾಸದಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದರು.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಡಿ ಸತ್ಯಪ್ರಕಾಶ್ ಮಾತನಾಡಿ, ಖಂಡಿತವಾಗಿಯೂ ಇಡೀ ಸಿನಿಮಾ ನಿಮಗೆ ನಗು ತರಿಸಲಿದೆ. ಸಬ್ಜೆಕ್ಟ್ ಬಹಳ ವಿಭಿನ್ನವಾಗಿದೆ. ದೊಡ್ಡ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಸಾಧುಕೋಕಿಲ ಸರ್ ಪೂರ್ತಿ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ. ಇನ್ನು ಸುಂದರ್ ಸರ್ ಬಹಳ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ವಿಶೇಷ ಅಂದರೆ ಎಲ್ಲ ಪಾತ್ರಗಳಿಗೂ ಅದರದ್ದೇ ಆದ ವಿಶೇಷತೆಗಳಿವೆ. ಇಡೀ ಫ್ಯಾಮಿಲಿ ಒಟ್ಟಾಗಿ ಕುಳಿತು ನೋಡುವ ಸಿನಿಮಾವಿದು. ಒಂದೊಳ್ಳೆ ಸಂದೇಶ ಚಿತ್ರದಲ್ಲಿದೆ. ಇನ್ನೂ ನನ್ನ ಮತ್ತು ದೀಪಕ್ ಅವರ ಸ್ನೇಹ 15 ವರ್ಷದ್ದು. ನಾನು ಕಥೆಯಲ್ಲಿ ಬರೆದಿರೋ ಹ್ಯೂಮರ್​ ಅನ್ನು ದೀಪಕ್ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಇಡೀ ಸಿನಿಮಾ ಕಟ್ಟುವಾಗ ನಮ್ಮ ಜೊತೆ ಸಪೋರ್ಟಿವ್ ಆಗಿ ನಿಂತು ನಿರ್ಮಾಪಕರಾದ ಮಂಜುನಾಥ್ ಅವರು ಸಹಕಾರ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ನನಸಾಗಲಿಲ್ಲ ದೊಡ್ಮನೆ ಮಕ್ಕಳ ಆ ಕನಸು.. ತಮ್ಮನ ನೆನೆದು ಶಿವಣ್ಣ ಭಾವುಕ

ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ. ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಏಪ್ರಿಲ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.