ETV Bharat / entertainment

ಡಿಸೆಂಬರ್ 9 ರಂದು ಬಿಡುಗಡೆಗೆ ಸಿದ್ಧಗೊಂಡ ತುಷಾರ್ ಕಪೂರ್ ಅಭಿನಯದ ಮಾರಿಚ್

author img

By

Published : Sep 13, 2022, 5:40 PM IST

ನಟ ತುಷಾರ್ ಕಪೂರ್ ತಮ್ಮ ಮುಂಬರುವ ಮಾರಿಚ್ ಚಿತ್ರವು ಡಿಸೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ.

Tusshar Kapoor's 'Maarrich' set for December release

ಮುಂಬೈ: ಬಾಲಿವುಡ್​ ತಾರೆ ತುಷಾರ್ ಕಪೂರ್ ನಟನೆಯ 'ಮಾರಿಚ್' ಚಿತ್ರವು ಡಿಸೆಂಬರ್ 9 ರಂದು ನೇರವಾಗಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಂಗಳವಾರ ಘೋಷಿಸಿದೆ.

ಹಿರಿಯ ನಟ ನಾಸಿರುದ್ದೀನ್ ಶಾ ಸಹ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತುಷಾರ್ ಎಂಟರ್ಟೈನ್ಮೆಂಟ್ ಹೌಸ್​ನಿಂದ ಬಿಡುಗೆಡೆಗೊಳ್ಳುತ್ತಿರುವ ಎರಡನೇ ಚಿತ್ರ ಇದಾಗಿದೆ. ಈ ಮೊದಲು ಅಕ್ಷಯ್ ಕುಮಾರ್ ಅಭಿನಯದ "ಲಕ್ಷ್ಮಿ" ಚಿತ್ರವು ಇದೇ ಬ್ಯಾನರ್​ ಅಡಿ ತೆರೆ ಕಂಡಿತ್ತು. "ಮಾರಿಚ್" ಅನ್ನು ಧ್ರುವ ಲಾಥರ್ ಬರೆದು ನಿರ್ದೇಶಿಸಿದ್ದಾರೆ. ನಟ ಕಪೂರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • Almost 20 yrs down this wonderful journey of making stories come to life, beginning 2021 with #Maarrich..a departure from my usual style,a film that challenges me to evolve as an actor! Excited to share glimpses, even more excited to share screen space with Naseer Sir after long! pic.twitter.com/BTC2rY0PKa

    — Tusshar (@TusshKapoor) January 19, 2021 " class="align-text-top noRightClick twitterSection" data=" ">

"ಹಲವು ಕಾರಣಗಳಿಗಾಗಿ ಈ ಚಿತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ನಿರ್ಮಾಪಕನಾಗಿ 'ಲಕ್ಷ್ಮಿ' ನಂತರ 'ಮಾರಿಚ್' ನನ್ನ ಎರಡನೇ ಚಿತ್ರ ಇದಾಗಿದೆ. ಬಹಳ ದಿನಗಳ ಬಳಿಕ ನಾನು ಮತ್ತು ನಾಸಿರುದ್ದೀನ್ ಶಾ ಅವರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದೇವೆ. ನಟನಾಗಿ ನಾನು ಈ ಹಿಂದೆ ಹಲವು ಸಿನಿಮಾಗಳಲ್ಲಿ ನಟಿಸಿರುವೆ.

ಆದರೆ, ಈ ಚಿತ್ರ ತುಂಬಾ ವಿಭಿನ್ನವಾಗಿರುವುದಿಂದ ನನಗೆ ಸವಾಲಾಗಿ ಪರಿಣಮಿಸಿತು. ಈ ವರೆಗೆ ನೋಡದ ನಟನೆಯನ್ನು ಈ ಚಿತ್ರದದಲ್ಲಿ ಪ್ರೇಕ್ಷಕರು ನೋಡಲಿದ್ದಾರೆ. ನನ್ನ ಈ ಹೊಸ ಛಾಯೆಯನ್ನು ಪ್ರೇಕ್ಷಕರು ಇಷ್ಟಪಲಿದ್ದಾರೆ ಎಂಬ ನಂಬಿಕೆ ಇದೆ. ಹಾಗಾಗಿ ಡಿಸೆಂಬರ್ 9 ರಂದು ಚಿತ್ರಮಂದಿರಗಳಲ್ಲಿ 'ಮಾರಿಚ್' ಅನ್ನು ಪ್ರೇಕ್ಷಕರಿಗೆ ತರಲು ತುಂಬಾ ಉತ್ಸುಕನಾಗಿದ್ದೇನೆ ಎಂದರು.

ಕಪೂರ್ ಮತ್ತು ಶಾ ಈ ಹಿಂದೆ 2011ರಲ್ಲಿ ತೆರೆಕಂಡಿದ್ದ "ದಿ ಡರ್ಟಿ ಪಿಕ್ಚರ್"ನಲ್ಲಿ ಒಟ್ಟಿಗೆ ನಟಿಸಿದ್ದರು. "ಮಾರಿಚ್" ಅನ್ನು ತುಷಾರ್ ಎಂಟರ್ಟೈನ್ಮೆಂಟ್ ಹೌಸ್ NH ಸ್ಟುಡಿಯೋಸ್ ಸಹಯೋಗದೊಂದಿಗೆ ತೆರೆ ತರಲಾಗುತ್ತಿದೆ. ಕಪೂರ್ ಜೊತೆಗೆ, ನರೇಂದ್ರ ಹಿರಾವತ್ ಮತ್ತು ಶ್ರೇಯನ್ಸ್ ಹಿರಾವತ್ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ಗಿರೀಶ್ ಜೋಹರ್ ಮತ್ತು ಪ್ರಿಯಾಂಕ್ ವಿ ಜೈನ್ ಸಹ ನಿರ್ಮಾಣವಿದೆ.

ಇದನ್ನೂ ಓದಿ: ಬಿಗ್ ಬಾಸ್ ಸೀಸನ್‌ 9: ದೊಡ್ಮನೆಗೆ ನಟ ಅನಿರುದ್ಧ್ ಜತ್ಕರ್ ಎಂಟ್ರಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.