ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಲಿಯೋ' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಅಭಿಮಾನಿಗಳ ಕಾಯುವಿಕೆ ಅಂತ್ಯಗೊಳ್ಳುವ ಘಳಿಗೆ ಬಂದಿದೆ. ನಾಳೆ ಚಿತ್ರಮಂದಿರಗಳಲ್ಲಿ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದ್ದು, ಭರ್ಜರಿ ಸಿದ್ಧತೆ ನಡೆದಿದೆ.
-
BREAKING: Tamil Nadu government REFUSES to accept Madras High Court's reconsideration on #Leo 7 am shows.
— Manobala Vijayabalan (@ManobalaV) October 18, 2023 " class="align-text-top noRightClick twitterSection" data="
Hence it is CLEAR now that there is no 4 am or 7 am shows for #LokeshKanagaraj's #LeoFilm.
As stated in earlier GO, Joseph Vijay's #LEOFDFS will start… pic.twitter.com/atGHvbTt7v
">BREAKING: Tamil Nadu government REFUSES to accept Madras High Court's reconsideration on #Leo 7 am shows.
— Manobala Vijayabalan (@ManobalaV) October 18, 2023
Hence it is CLEAR now that there is no 4 am or 7 am shows for #LokeshKanagaraj's #LeoFilm.
As stated in earlier GO, Joseph Vijay's #LEOFDFS will start… pic.twitter.com/atGHvbTt7vBREAKING: Tamil Nadu government REFUSES to accept Madras High Court's reconsideration on #Leo 7 am shows.
— Manobala Vijayabalan (@ManobalaV) October 18, 2023
Hence it is CLEAR now that there is no 4 am or 7 am shows for #LokeshKanagaraj's #LeoFilm.
As stated in earlier GO, Joseph Vijay's #LEOFDFS will start… pic.twitter.com/atGHvbTt7v
ಥಿಯೇಟರ್‌ಗಳಲ್ಲಿ ಟ್ರೇಲರ್ ರಿಲೀಸ್ ಈವೆಂಟ್ ರದ್ದು: ಸಿನಿಮಾ ಬಿಡುಗಡೆ ಖುಷಿ ನಡುವೆ ಬೇಸರದ ಸಂಗತಿಯೂ ಇದೆ. ಲಿಯೋ ಟ್ರೇಲರ್ ಪ್ರದರ್ಶನದ ಸಂದರ್ಭದಲ್ಲಿ ದಳಪತಿ ವಿಜಯ್ ಅವರ ಅಭಿಮಾನಿಗಳು ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆ, ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಇನ್ಮುಂದೆ ಥಿಯೇಟರ್‌ಗಳಲ್ಲಿ ಟ್ರೇಲರ್ ರಿಲೀಸ್ ಈವೆಂಟ್ ಹಮ್ಮಿಕೊಳ್ಳುವುದಿಲ್ಲ.
ಮಾರ್ನಿಂಗ್ ಶೋ ಕೂಡ ನಿಷೇಧ: ವಿಜಯ್ ಅವರ ಕೆಲ ಅಭಿಮಾನಿಗಳು ಈ ತಿಂಗಳ ಆರಂಭದಲ್ಲಿ ಚೆನ್ನೈ ಥಿಯೇಟರ್‌ನ ಆಸನಗಳನ್ನು ಹಾನಿಗೊಳಿಸಿದ ನಂತರ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಸರ್ಕಾರ ಮಾರ್ನಿಂಗ್ ಶೋಗಳನ್ನೂ ಸಹ ನಿಷೇಧಿಸಿದೆ. ಲಿಯೋ ಸಿನಿಮಾ ನಾಳೆ ಅಂದರೆ ಅಕ್ಟೋಬರ್ 19 ರಂದು ಬೆಳಗ್ಗೆ 9 ಗಂಟೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಈ ಸಂಬಂಧ ಪೋಸ್ಟ್ ಶೇರ್ ಮಾಡಿದ್ದಾರೆ. ರೋಹಿಣಿ ಚಿತ್ರಮಂದಿರದಲ್ಲಿ ಹಾನಿಗೊಳಗಾದ ಸೀಟುಗಳ ಫೋಟೋ ಶೇರ್ ಮಾಡಿ, ಲಿಯೋ ಟ್ರೇಲರ್ ಬಿಡುಗಡೆ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಟ ವಿಜಯ್ ಅಭಿಮಾನಿಗಳು ಥಿಯೇಟರ್ಗೆ ಹಾನಿ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಥಿಯೇಟರ್ ಮಾಲೀಕರ ಸಂಘದ ಅಧ್ಯಕ್ಷರು ಇನ್ನು ಮುಂದೆ ಥಿಯೇಟರ್‌ಗಳಲ್ಲಿ ಟ್ರೇಲರ್‌ಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ಮಲಯಾಳಂ ಪ್ರಸಿದ್ಧ ಖಳ ನಟ ಕುಂಡರ ಜಾನಿ ಹೃದಯಾಘಾತದಿಂದ ನಿಧನ
ವಿಜಯ್ ಅಭಿನಯದ 'ಲಿಯೋ' 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಅಭಿಮಾನಿಗಳಿಗೆ ಭರ್ಜರಿ ಸಿನಿಮೀಯ ಅನುಭವ ಒದಗಿಸುವ ಸಲುವಾಗಿ, ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಪ್ರೊಡಕ್ಷನ್ ಮದ್ರಾಸ್ ಹೈಕೋರ್ಟ್‌ನಲ್ಲಿ ಮನವಿಯೊಂದನ್ನು ಮಾಡಿತ್ತು. ಸಿನಿಮಾ ಬಿಡುಗಡೆಯ ಮೊದಲ ದಿನ ತಮಿಳುನಾಡಿನಲ್ಲಿ ಬೆಳಗ್ಗೆ 4 ಗಂಟೆಗೆ ಚಿತ್ರ ಪ್ರದರ್ಶಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅನುಮತಿ ಕೋರಿತ್ತು. ಆದರೆ, ಬೆಳಗ್ಗೆ 4 ಗಂಟೆಯ ಶೋಗಳ ಬದಲಾಗಿ, ಬೆಳಗ್ಗೆ 7 ಗಂಟೆಯ ಪ್ರದರ್ಶನಕ್ಕೆ ಸಂಬಂಧಿಸಿದಂತೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು. ನಂತರ, ಬೆಳಗ್ಗೆ 7 ಗಂಟೆಯ ಶೋಗಳಿಗೂ ಅವಕಾಶ ನೀಡುವುದಿಲ್ಲ ಎಂದು ಖಚಿತಪಡಿಸಲಾಯಿತು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಭಾರತೀಯ ಸಿನಿಮಾಗಳು ಕೇವಲ ವ್ಯಾಪಾರ, ಮನರಂಜನೆಗೆ ಸೀಮಿತವಾಗಿಲ್ಲ: ರಾಷ್ಟ್ರಪತಿ ದ್ರೌಪದಿ ಮುರ್ಮು
ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಸಿನಿಮಾ ವಿಜಯ್ ಹಾಗೂ ತ್ರಿಶಾ ಕೃಷ್ಣನ್ ಅವರನ್ನು ಮತ್ತೆ ಒಂದು ಮಾಡಿದೆ. ಬಾಲಿವುಡ್ ಸ್ಟಾರ್ ಹೀರೋ ಸಂಜಯ್ ದತ್ ಮತ್ತು ದಕ್ಷಿಣದ ಅರ್ಜುನ್ ಸರ್ಜಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.