ETV Bharat / entertainment

ಟಾಲಿವುಡ್​ ಹಿರಿಯ ನಟ ಕೈಕಲಾ ಸತ್ಯನಾರಾಯಣ ಇನ್ನಿಲ್ಲ.. ಗಣ್ಯರಿಂದ ಸಂತಾಪ - ಚಿತ್ರರಂಗಕ್ಕೆ ತೀವ್ರ ದುಃಖ

ತೆಲುಗು ಚಿತ್ರರಂಗದ ಖ್ಯಾತ ಚಿತ್ರನಟ ಕೈಕಲಾ ಸತ್ಯನಾರಾಯಣ ಅವರು ಇಂದು ನಸುಕಿನ ಜಾವ ನಿಧರಾಗಿದ್ದಾರೆ.

Kaikala Satyanarayana passed away  Tollywood veteran actor Kaikala Satyanarayana  Kaikala Satyanarayana movies  Tollywood veteran actor Kaikala Satyanarayana news  ಹಿರಿಯ ನಟ ಕೈಕಲಾ ಸತ್ಯನಾರಾಯಣ ಇನ್ನಿಲ್ಲ  ತೆಲುಗು ಚಿತ್ರರಂಗದ ಖ್ಯಾತ ಚಿತ್ರನಟ ಕೈಕಲಾ ಸತ್ಯನಾರಾಯಣ  ಸತ್ಯನಾರಾಯಣ ಅವರ ಅಂತಿಮ ಸಂಸ್ಕಾರ  ಹಲವು ಸೆಲೆಬ್ರಿಟಿಗಳು ಸಂತಾಪ  ಚಿತ್ರರಂಗಕ್ಕೆ ತೀವ್ರ ದುಃಖ  ನಟನೆಯ ಆಸಕ್ತಿಯಿಂದಾಗಿ ಕಾಲೇಜು ದಿನಗಳಲ್ಲಿ ಹಲವು ಪ್ರದರ್ಶನ
ಟಾಲಿವುಡ್​ ಹಿರಿಯ ನಟ ಕೈಕಲಾ ಸತ್ಯನಾರಾಯಣ ಇನ್ನಿಲ್ಲ
author img

By

Published : Dec 23, 2022, 8:50 AM IST

ಹೈದರಾಬಾದ್, ತೆಲಂಗಾಣ​: ಖ್ಯಾತ ಚಿತ್ರನಟ ಕೈಕಲಾ ಸತ್ಯನಾರಾಯಣ (87) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ಫಿಲಂನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ನಾಳೆ ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ಸತ್ಯನಾರಾಯಣ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕೈಕಾಲಾ ಅವರ ನಿಧನ ಚಿತ್ರರಂಗಕ್ಕೆ ತೀವ್ರ ದುಃಖ ತಂದಿದೆ. ಹಲವು ಸೆಲೆಬ್ರಿಟಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಸತ್ಯನಾರಾಯಣ ಅವರು ಕೃಷ್ಣಾ ಜಿಲ್ಲೆಯ ಕೌತಾರಂ ಗ್ರಾಮದಲ್ಲಿ 1935 ರಲ್ಲಿ ಜನಿಸಿದರು. ಗುಡಿವಾಡ ಕಾಲೇಜಿನಲ್ಲಿ ಪದವಿ ಮುಗಿಸಿದರು. ನಟನೆಯ ಆಸಕ್ತಿಯಿಂದಾಗಿ ಕಾಲೇಜು ದಿನಗಳಲ್ಲಿ ಹಲವು ಪ್ರದರ್ಶನಗಳನ್ನು ನೀಡಿದ್ದರು.

ಖ್ಯಾತ ನಿರ್ಮಾಪಕ ಡಿ.ಎಲ್.ನಾರಾಯಣ ಅವರು ಸತ್ಯನಾರಾಯಣ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ‘ಸಿಪಾಯಿ ಕುಟುರು’ ಚಿತ್ರದಲ್ಲಿ ಅವಕಾಶ ನೀಡಿದರು. ಪೌರಾಣಿಕ, ಜಾನಪದ, ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕ ಮತ್ತು ಖಳನಾಯಕನಾಗಿ ಕಾಣಿಸಿಕೊಂಡರು. ಎನ್‌ಟಿಆರ್, ಎಎನ್‌ಎನ್‌ಆರ್, ಕೃಷ್ಣ, ಶೋಭನ್ ಬಾಬು, ಸತ್ಯನಾರಾಯಣ ಜೊತೆಗೆ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಮುಂತಾದವರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಓದಿ: 2022ರಲ್ಲಿ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ತಾರೆಯರಿವರು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.