ETV Bharat / entertainment

ಇಂದು ಆರ್​ಆರ್​ಆರ್​ ಸ್ಟಾರ್​ ರಾಮ್​ ಚರಣ್​ ಮಗಳ ನಾಮಕರಣ.. ಎಲ್ಲಿ ಗೊತ್ತಾ? - ಉಪಾಸನಾ ಹೆಣ್ಣು ಮಗುವಿಗೆ ಜನ್ಮ

ಇಂದು RRR ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳ ನಾಮಕರಣ ನಡೆಯಲಿದ್ದು, ಮೆಗಾಸ್ಟಾರ್ ಕುಟುಂಬದ ಮೆಗಾ ರಾಜಕುಮಾರಿಯ ನೋಟವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Ram Charan and Upasana daughter Naming Ceremony  Tollywood star Ram Charan  Ram Charan and Upasana daughter  ಆರ್​ಆರ್​ಆರ್​ ಸ್ಟಾರ್​ ರಾಮ್​ ಚರಣ್​ ಮಗಳ ನಾಮಕರಣ  RRR ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳ ನಾಮಕರಣ  ಮೆಗಾಸ್ಟಾರ್ ಕುಟುಂಬದ ಮೆಗಾ ರಾಜಕುಮಾರಿ  ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್  ದಂಪತಿಗೆ ಹೆಣ್ಮು ಮಗು ಜನಸಿರುವುದು ಗೊತ್ತಿರುವ ಸಂಗತಿ  ಉಪಾಸನಾ ಹೆಣ್ಣು ಮಗುವಿಗೆ ಜನ್ಮ  ರಾಮ್ ಚರಣ್ ಮತ್ತು ಉಪಾಸನಾ ತಂದೆ ತಾಯಿ
ಇಂದು ಆರ್​ಆರ್​ಆರ್​ ಸ್ಟಾರ್​ ರಾಮ್​ ಚರಣ್​ ಮಗಳ ನಾಮಕರಣ
author img

By

Published : Jun 30, 2023, 11:19 AM IST

ಹೈದರಾಬಾದ್: ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ದಂಪತಿಗೆ ಹೆಣ್ಮು ಮಗು ಜನಸಿರುವುದು ಗೊತ್ತಿರುವ ಸಂಗತಿ. ಮದುವೆಯಾದ 11 ವರ್ಷಗಳ ನಂತರ ಈ ದಂಪತಿಗೆ ಮೊದಲ ಮಗು ಜನಿಸಿದೆ. ಜೂನ್ 20 ರ ರಾತ್ರಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ತಂದೆ ತಾಯಿಯಾಗುತ್ತಿದ್ದಂತೆ ಇಡೀ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿತ್ತು. ಇಂದು ಆ ಸಂತೋಷ ದುಪ್ಪಟ್ಟಾಗಿದ್ದು, ಮಗುವಿನ ನಾಮಕರಣ ಕಾರ್ಯಕ್ರಮ ನಡೆಯಲಿದೆ.

ಮೊಮ್ಮಗಳು ಹುಟ್ಟಿದ ಖುಷಿಯಲ್ಲಿ ಮಾತನಾಡಿದ ರಾಮ್ ಚರಣ್ ಅವರ ತಂದೆ ಚಿರಂಜೀವಿ ಅವರು, ಮೊದಲ ಬಾರಿಗೆ ಅಜ್ಜನಾಗಲು ತುಂಬಾ ಸಂತೋಷವಾಗಿದ್ದು, ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಈಗ ರಾಮ್ ಚರಣ್ ಅಭಿಮಾನಿಗಳು ಮೆಗಾ ರಾಜಕುಮಾರಿಯ ಮುಖವನ್ನು ನೋಡಲು ಆತುರದಿಂದ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮುನ್ನ ಮೆಗಾ ಪ್ರಿನ್ಸೆಸ್​ನ ನಾಮಕರಣ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ವಿಡಿಯೋ ಶೇರ್ ಮಾಡುವ ಮೂಲಕ ಉಪಾಸನಾ ಮಗುವಿನ ನಾಮಕಾರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಾಮಕರಣ ಕಾರ್ಯಕ್ರಮ ಎಲ್ಲಿ?: ರಾಮ್ ಚರಣ್ ಮತ್ತು ಉಪಾಸನಾ ದಂಪತಿಯ ಮಗಳ ನಾಮಕರಣ ಸಮಾರಂಭ ಇಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ರಾಮ್ ಚರಣ್ ಮತ್ತು ಉಪಾಸನಾ ತಮ್ಮ ಮಗಳ ಹೆಸರನ್ನು ನಿರ್ಧರಿಸಿದ್ದು, ಇಂದು ಅಭಿಮಾನಿಗಳಿಗೆ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಲಿದ್ದಾರೆ. ಉಪಾಸನಾ ಅವರು ಮಗಳ ನಾಮಕರಣ ಸಮಾರಂಭದ ಸಿದ್ಧತೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮನೆಯಲ್ಲಿ ಅಲಂಕಾರ ಕೆಲಸ ನಡೆಯುತ್ತಿರುವುದು ಕಾಣಬಹುದು.

ನಿಗದಿತ ಸಮಯಕ್ಕೆ ಆ ದೇವರು ನಮಗೆ ಮಗು ಕರುಣಿಸಿದ್ದಾರೆ ಎಂದು ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ತಿಂಗಳ 20ರಂದು ಉಪಾಸನಾ ಅಪೋಲೋ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಜೂನ್​ 23ರಂದು ರಾಮ್​ ಚರಣ್​ ದಂಪತಿ ಮಗುವಿನೊಂದಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನೊಂದಿಗೆ ಮಾಧ್ಯಮಗಳ ಮುಂದೆ ಬಂದ ರಾಮ್ ಚರಣ್, ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದರು. ತಾಯಿ ಮತ್ತು ಮಗಳು ಇಬ್ಬರೂ ಯಾವುದೇ ತೊಂದರೆ ಇಲ್ಲದೇ ಆರೋಗ್ಯವಾಗಿದ್ದಾರೆ ಎಂದು ರಾಮ್ ಚರಣ್ ಹೇಳಿದ್ದರು.

ಈಗಾಗಲೇ ನಾನು ಮತ್ತು ಉಪಾಸನಾ ಮಗುವಿನ ಹೆಸರನ್ನು ನಿರ್ಧರಿಸಿದ್ದೇವೆ. ಆದಷ್ಟು ಬೇಗ ಮಗುವಿನ ಹೆಸರನ್ನು ಘೋಷಿಸಲಿದ್ದೇವೆ ಎಂದು ರಾಮಚರಣ್ ಬಹಿರಂಗಪಡಿಸಿದರು. ಮಗುವಿನೊಂದಿಗೆ ರಾಮ್ ಚರಣ್ ಮತ್ತು ಉಪಾಸನಾ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅವರಿಗೆ ಗುಲಾಬಿಗಳ ಮಳೆಗರೆದಿದ್ದರು. ಆಗ ಉಪಸನಾ ಅಭಿಮಾನಿಗಳಿಗೆ ಧನ್ಯವಾದಗಳು ಅರ್ಪಿಸಿದ್ದರು. ಆ ಬಳಿಕ ಉಪಾಸನಾ ನೇರವಾಗಿ ತಮ್ಮ ತವರು ಮನೆಗೆ ತೆರಳಿದ್ದರು.

ಓದಿ: Mega Princess: ತಂದೆಯಾದ ರಾಮ್​ ಚರಣ್​: ಮಗು ನೋಡಲು ಆಸ್ಪತ್ರೆಗೆ ಬಂದ ಅಲ್ಲು ಅರ್ಜುನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.