ETV Bharat / entertainment

ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ವಿಷ್ಣು ಮಂಚು ನಟನೆಯ 'ಕಣ್ಣಪ್ಪ' ಚಿತ್ರಕ್ಕೆ ಅಧಿಕೃತ ಚಾಲನೆ - ಈಟಿವಿ ಭಾರತ ಕನ್ನಡ

Vishnu Manchu starrer Kannappa movie: ತೆಲುಗು ನಟ ವಿಷ್ಣು ಮಂಚು ಅಭಿನಯದ 'ಕಣ್ಣಪ್ಪ' ಚಿತ್ರಕ್ಕೆ ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

vishnu manchu
ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ವಿಷ್ಣು ಮಂಚು ನಟನೆಯ 'ಕಣ್ಣಪ್ಪ' ಚಿತ್ರಕ್ಕೆ ಅಧಿಕೃತ ಚಾಲನೆ
author img

By

Published : Aug 21, 2023, 1:02 PM IST

Updated : Aug 21, 2023, 1:56 PM IST

ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ವಿಷ್ಣು ಮಂಚು ನಟನೆಯ 'ಕಣ್ಣಪ್ಪ' ಚಿತ್ರಕ್ಕೆ ಅಧಿಕೃತ ಚಾಲನೆ

ಶಿವನ ಅಚಲ ಭಕ್ತನಾದ 'ಕಣ್ಣಪ್ಪ'ನ ಕಾಲಾತೀತ ಕಥೆಯು ಯುಗ ಯುಗಗಳಿಂದಲೂ ಭಾರತೀಯ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದೆ. ಇದೀಗ 'ಕಣ್ಣಪ್ಪ'ನ ಕಥೆಯು ಮತ್ತೊಮ್ಮೆ ಬೆಳ್ಳಿ ತೆರೆಯಲ್ಲಿ ಮೂಡಿ ಬರುತ್ತಿದ್ದು, ತೆಲುಗು ನಟ ವಿಷ್ಣು ಮಂಚು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

ಭಾರತೀಯ ಚಿತ್ರರಂಗದ ಜನಪ್ರಿಯ ಕಲಾವಿದರನ್ನು ಒಳಗೊಂಡಿರುವ ಮತ್ತು ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿರುವ ಚಿತ್ರ ಇದಾಗಿದೆ. 24 ಫ್ರೇಮ್ಸ್​ ಫ್ಯಾಕ್ಟರಿ ಮತ್ತು ಎವಿಎ ಎಂಟರ್​ಟೈನ್​ಮೆಂಟ್​ ಬ್ಯಾನರ್​ಗಳ ಅಡಿ ಈ ಸಿನಿಮಾವನ್ನು ನಟ ಹಾಗೂ ರಾಜಕಾರಣಿ ಡಾ.ಮೋಹನ್​ ಬಾಬು ನಿರ್ಮಿಸುತ್ತಿದ್ದಾರೆ.

vishnu manchu
ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ವಿಷ್ಣು ಮಂಚು ನಟನೆಯ 'ಕಣ್ಣಪ್ಪ' ಚಿತ್ರಕ್ಕೆ ಅಧಿಕೃತ ಚಾಲನೆ

'ಕಣ್ಣಪ್ಪ'ನಾಗಿ ವಿಷ್ಣು ಮಂಚು: 'ಕಣ್ಣಪ್ಪ' ಚಿತ್ರವು ಅಚಲವಾದ ಭಕ್ತಿಯ ಮೇಲೆ ಬೆಳಕನ್ನು ಚೆಲ್ಲುತ್ತದೆ. ನಾಸ್ತಿಕನಾದ ಕಣ್ಣಪ್ಪನ ವಿಸ್ಮಯಕಾರಿ ರೂಪಾಂತರವು ಈ ಚಿತ್ರದ ಕಥಾವಸ್ತು. ಈಶ್ವರನ ಅಪ್ರತಿಮ ಭಕ್ತನಾಗಿ ಮತ್ತು ಇತಿಹಾಸದ ಅತ್ಯಂತ ಅಸಾಧಾರಣ ಭಕ್ತರಲ್ಲಿ ಒಬ್ಬನಾದ ಕಣ್ಣಪ್ಪನ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದು ತಮ್ಮ ಭಾಗ್ಯ ಎಂದು ವಿಷ್ಣು ಮಂಚು ಹೇಳಿಕೊಂಡಿದ್ದಾರೆ.

ಇದುವರೆಗೂ ಹಲವು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿರುವ ವಿಷ್ಣು ಮಂಚು, ಇದೇ ಮೊದಲ ಬಾರಿಗೆ ಪೌರಾಣಿಕ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಮತ್ತು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ.

ಇದನ್ನೂ ಓದಿ: ಟೈಮ್ಸ್ ಸ್ಕ್ವೇರ್​ನಲ್ಲಿ ಕಿಂಗ್ ಆಫ್ ಕೋಥಾ ಟ್ರೇಲರ್​ ಪ್ರದರ್ಶನ.. ಉತ್ಸಾಹ ತಡೆಯಲು ಸಾಧ್ಯವಾಗುತ್ತಿಲ್ಲವೆಂದ ದುಲ್ಕರ್​ ಸಲ್ಮಾನ್​

ಚಿತ್ರತಂಡ ಹೀಗಿದೆ.. ಈ ಚಿತ್ರಕ್ಕೆ ಧೀಮಂತ ಲೇಖಕರಾದ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್ ಮತ್ತು ಬುರ್ರಾ ಸಾಯಿ ಮಾಧವ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ಹಾಗೂ ಶೆಲ್ಡನ್ ಶಾ ಅವರ ಛಾಯಾಗ್ರಹಣ ಇದೆ.

ಈ ಹಿಂದೆ ಸ್ಟಾರ್ ಪ್ಲಸ್​ಗಾಗಿ ಮಹಾಭಾರತ ಸರಣಿಯನ್ನು ನಿರ್ದೇಶಿಸಿದ್ದ ಮುಖೇಶ್ ಕುಮಾರ್ ಸಿಂಗ್ ಮೇರುಕೃತಿಯನ್ನು ನಿರ್ದೇಶಿಸುತ್ತಿದ್ದಾರೆ. ವಿಷ್ಣು ಮಂಚು ಜೋಡಿಯಾಗಿ ಬಾಲಿವುಡ್ ನಟಿ ನೂಪುರ್ ಸನೋನ್ ಅಭಿನಯಿಸುತ್ತಿದ್ದಾರೆ. ಭಕ್ತಿ ಪ್ರಧಾನ 'ಕಣ್ಣಪ್ಪ' ಎ ಟ್ರೂ ಎಪಿಕ್ ಇಂಡಿಯನ್ ಟೇಲ್ ಚಿತ್ರವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಹುಭಾಷೆಗಳಲ್ಲಿ ತೆರೆ ಕಾಣಲಿದೆ.

ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ವಿಷ್ಣು ಮಂಚು ಅವರ ಚಿತ್ರಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಕೇವಲ ತೆಲುಗು ಮಾತ್ರವಲ್ಲದೇ ಇತರೆ ಭಾಷೆಯ ಜನಗಳು ಕೂಡ ಇವರ ನಟನೆಯನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. ಇದೀಗ ಕಣ್ಣಪ್ಪ ಚಿತ್ರದ ಮೂಲಕ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ವಿಷ್ಣು ಮಂಜುಗೆ ಪ್ರೇಕ್ಷಕರು ಎಷ್ಟು ಮಾರ್ಕ್ಸ್​ ಕೊಡಲಿದ್ದಾರೆ ಅನ್ನೋದು ಕಾದು ನೋಡಬೇಕಿದೆ.

ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ 41ನೇ 'ಇಂಡಿಯಾ ಡೇ ಪರೇಡ್‌': ಗೌರವ ಅತಿಥಿಯಾಗಿ ನಟಿಯರಾದ ಸಮಂತಾ, ಜಾಕ್ವೆಲಿನ್ ಭಾಗಿ

Last Updated : Aug 21, 2023, 1:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.