ETV Bharat / entertainment

ನಟ​ ಪವನ್​ ಕಲ್ಯಾಣ್​ ಇನ್​ಸ್ಟಾಗೆ ಎಂಟ್ರಿ.. ಕೆಲವೇ ಗಂಟೆಗಳಲ್ಲಿ 9 ಲಕ್ಷಕ್ಕೂ ಅಧಿಕ ಪಾಲೋವರ್ಸ್​! - ಪವರ್​ ಸ್ಟಾರ್​ ಪವನ್​ ಕಲ್ಯಾಣ್

ಟಾಲಿವುಡ್​ ನಟ ಪವನ್​ ಕಲ್ಯಾಣ್​ ಇನ್‌ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. ಕೆಲವೇ ಗಂಟೆಗಳಲ್ಲಿ ಒಂಬತ್ತು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಸಂಪಾದಿಸಿದ್ದಾರೆ.

pawan kalyan
ಪವನ್​ ಕಲ್ಯಾಣ್​
author img

By

Published : Jul 4, 2023, 4:00 PM IST

ಟಾಲಿವುಡ್​ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ತೆಲುಗಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯ ಎರಡನ್ನೂ ಸಮಾನವಾಗಿ ಬ್ಯಾಲನ್ಸ್​ ಮಾಡುತ್ತಾ ಹಲವಾರು ಕೋಟಿ ಜನರ ಪ್ರೀತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ತಮ್ಮದೇ ಸ್ಟೈಲ್​ನಲ್ಲಿ ನಟಿಸಿ ಇಂಪ್ರೆಸ್​ ಮಾಡಿದ್ದ ಈ ಸ್ಟಾರ್​ ಹೀರೋ, ಅದೇ ಬಲವನ್ನು ರಾಜಕೀಯದಲ್ಲೂ ತೋರಿಸಲು ಪ್ರಯತ್ನಿಸುತ್ತಿದ್ದಾರೆ.

pawan kalyan
ನಟ ಪವನ್​ ಕಲ್ಯಾಣ್​ ಇನ್​ಸ್ಟಾಗ್ರಾಮ್​

ಅವರು ಈವರೆಗೆ ಮಾಧ್ಯಮದಲ್ಲಿ ಮತ್ತು ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯಗಳನ್ನು, ಸಿನಿಮಾ ವಿಚಾರಗಳನ್ನು ತಿಳಿಸುತ್ತಿದ್ದರು. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್​ಸ್ಟಾಗ್ರಾಮ್​ಗೆ ಪ್ರವೇಶಿಸಿದ್ದಾರೆ. ಕೆಲವು ದಿನಗಳ ಹಿಂದೆ ಪವನ್​ ಕಲ್ಯಾಣ್​ ಇನ್​ಸ್ಟಾಗ್ರಾಮ್​ಗೆ ಬರಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಅದರಂತೆ ಪವನ್ ಕಲ್ಯಾಣ್ ಮಂಗಳವಾರ ಇನ್‌ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. ಇದು ದೃಢೀಕೃತ ಖಾತೆಯೂ ಆಗಿದೆ.

ಅವರು ತಮ್ಮ ಖಾತೆಯಲ್ಲಿ ಏನನ್ನೂ ಪೋಸ್ಟ್​ ಮಾಡಿಲ್ಲ. ಪ್ರೊಫೈಲ್​ ಅನ್ನು ತೆಲುಗಿನ ಕೇವಲ ಮೂರು ಪದಗಳಿಂದ ತುಂಬಿದ್ದಾರೆ. ಜೈ ಹಿಂದ್​ ಎನ್ನುವ ಮೂಲಕ ಕೊನೆಗೊಳಿಸಿದ್ದಾರೆ. ಇನ್ನೊಂದೆಡೆ ಇದನ್ನು ಕಂಡ ಅಭಿಮಾನಿಗಳನ್ನು ಸಂಭ್ರಮಿಸುತ್ತಿದ್ದಾರೆ. ಒಂದು ನಿಮಿಷವೂ ಬಿಡದೇ ಪವನ್​ ಖಾತೆಯನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಒಂಬತ್ತು ಲಕ್ಷಕ್ಕೂ ಹೆಚ್ಚು ಜನರು ಅವರ ಫಾಲೋವರ್ಸ್​ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲೂ #PawanKalyanOnInstagram ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಟ್ರೇಲರ್​​: ತೆರೆ ಮೇಲಿನ ರಣ್​​ವೀರ್-ಆಲಿಯಾ ಪ್ರೇಮಕಥೆ ವೀಕ್ಷಿಸಲು ಅಭಿಮಾನಿಗಳ ಕುತೂಹಲ

ಪವನ್​ ಕಲ್ಯಾಣ್​ ಸಿನಿಮಾಗಳು: ರಾಜಕೀಯದ ಜೊತೆಗೆ ಪವನ್​ ಸತತ ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಂಡಿದ್ದಾರೆ. ಅವುಗಳನ್ನು ಪೂರ್ಣಗೊಳಿಸಲು ತಯಾರಿ ನಡೆಸುತ್ತಿದ್ದಾರೆ. 'ಬ್ರೋ', 'ಹರಿಹರ ವೀರಮಲ್ಲು', 'ಉಸ್ತಾದ್​ ಭಗತ್​ ಸಿಂಗ್​', 'ಓಜಿ' ಸಿನಿಮಾಗಳ ಶೂಟಿಂಗ್​ ಆದಷ್ಟು ಬೇಗನೆ ಮುಗಿಸಿ, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 'ಬ್ರೋ' ಚಿತ್ರದ ಟ್ರೇಲರ್ ಕೂಡ ಪ್ರೇಕ್ಷಕರ ಮನಗೆದ್ದಿದೆ. ಪವನ್​- ಸಾಯಿಧರಂ ನಟನೆ ಸೂಪರ್​ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಚಿತ್ರತಂಡ ಹೀಗಿದೆ... ಪವನ್ ಕಲ್ಯಾಣ್ ಮತ್ತು ಮೆಗಾ ಸುಪ್ರೀಮ್ ಹೀರೋ ಸಾಯಿಧರಮ್ ತೇಜ್ ಅಭಿನಯದ 'ಬ್ರೋ' ಚಿತ್ರವನ್ನು ತಮಿಳು ನಟ ಸಮುದ್ರಖನಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವು ಕಾಲಿವುಡ್​ನ 'ವಿನೋದಯ ಸೀತಂ' ರಿಮೇಕ್ ಆಗಿದೆ. ಶರವೇಗದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದ ಶೂಟಿಂಗ್ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿದೆ. ಚಿತ್ರಕ್ಕೆ ತ್ರಿವಿಕ್ರಮ್ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.

ಪ್ರಿಯಾ ಪ್ರಕಾಶ್ ವಾರಿಯರ್ ಮತ್ತು ಕೇತಿಕಾ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೀ ಸ್ಟುಡಿಯೋಸ್ ಜೊತೆಗೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿಯಲ್ಲಿ ವಿವೇಕ್ ಕುಚಿಬೋಟ್ಲ ಮತ್ತು ಟಿಜಿ ವಿಶ್ವಪ್ರಸಾದ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ತಣಿಕೆಲ್ಲ ಭರಣಿ, ಬ್ರಹ್ಮಾನಂದಂ ಮುಂತಾದ ತಾರೆಯರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ ತಮನ್ ಸಂಗೀತ ಸಂಯೋಜನೆಯಿದೆ.

ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ಕೋಮಲ್: ವಜ್ರಮುನಿ ಗೆಟಪ್​ನಲ್ಲಿ ಬಂದ ನಟ - ಯಲಾಕುನ್ನಿ ಫಸ್ಟ್ ಲುಕ್ ಅನಾವರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.