ETV Bharat / entertainment

'ಟೈಗರ್​​ ನಾಗೇಶ್ವರ ರಾವ್​' ರಿಲೀಸ್​: ಪ್ರೇಕ್ಷಕರಿಂದ ಪಾಸಿಟಿವ್​ ರೆಸ್ಪಾನ್ಸ್​ - ಈಟಿವಿ ಭಾರತ ಕನ್ನಡ

ತೆಲುಗು ಚಿತ್ರರಂಗದ ಮಾಸ್​ ಮಹಾರಾಜ ರವಿತೇಜ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ 'ಟೈಗರ್​​ ನಾಗೇಶ್ವರ ರಾವ್​' ಇಂದು ಬಿಡುಗಡೆಯಾಗಿದೆ.

'ಟೈಗರ್​​ ನಾಗೇಶ್ವರ ರಾವ್​' ರಿಲೀಸ್​: ಮಾಸ್​ ಮಹಾರಾಜನ ಸಿನಿಮಾಗೆ ಪ್ರೇಕ್ಷಕರಿಂದ ಪಾಸಿಟಿವ್​ ರೆಸ್ಪಾನ್ಸ್​
Tiger Nageswara Rao movie released
author img

By ETV Bharat Karnataka Team

Published : Oct 20, 2023, 4:56 PM IST

ಟಾಲಿವುಡ್​ ನಟ ರವಿತೇಜ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ 'ಟೈಗರ್​​ ನಾಗೇಶ್ವರ ರಾವ್​' ಶುಕ್ರವಾರ ತೆರೆ ಕಂಡಿದೆ. ಮಾಸ್​ ಲುಕ್​ನಲ್ಲಿ ರವಿತೇಜ ಎಂಟ್ರಿ ಕೊಟ್ಟಿದ್ದಾರೆ. ಹಿಂದಿನ ಸಿನಿಮಾಗಳಿಗಿಂತ ಕೊಂಚ ಹೆಚ್ಚೇ ರಗಡ್​​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಇವರ ಮೊದಲ ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆ ಜೋರಾಗಿದೆ. ಸ್ಟುವರ್ಟ್‌ಪುರಂ ನಾಗೇಶ್ವರ ರಾವ್ ಅವರ ಜೀವನಾಧಾರಿತ ಕಥೆ ಒಳಗೊಂಡಿದೆ.

ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು..: 'ಟೈಗರ್​​ ನಾಗೇಶ್ವರ ರಾವ್​' ಸಿನಿಮಾ ಸದ್ಯ ಪಾಸಿಟಿವ್​ ಟಾಕ್​ ಪಡೆಯುತ್ತಿದೆ. ಸಿನಿಮಾದಲ್ಲಿ ಮೊದಲ ಫೈಟ್​ ಸೀನ್​, ಹೀರೋ ಇಂಟ್ರಡಕ್ಷನ್​ ಸೂಪರ್​ ಆಗಿದೆ. ಅದರಲ್ಲೂ ಟ್ರೈನ್​ ಸೀಕ್ವೆನ್ಸ್​ ಅಂತೂ ತುಂಬಾ ಚೆನ್ನಾಗಿದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಮಧ್ಯಂತರ ದೃಶ್ಯ ಮತ್ತು ರವಿತೇಜ ಅವರ ಸ್ಕ್ರೀನ್​ ಪ್ರೆಸೆನ್ಸ್​ ಕೂಡ ಆಕರ್ಷಕವಾಗಿದೆ. ಚಿತ್ರದಲ್ಲಿನ ಫೈಟ್ಸ್​ ಮತ್ತು ಜೀವ್​ ಪ್ರಕಾಶ್​ ಸಂಗೀತವೂ ಅದ್ಭುತವಾಗಿದೆ ಎಂದು ಎಕ್ಸ್​ನಲ್ಲಿ ಸಿನಿಮಾ ವೀಕ್ಷಿಸಿದ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಮತ್ತೊಂದೆಡೆ, ನಿರ್ದೇಶಕ ವಂಶಿ ಈ ಸಿನಿಮಾದಲ್ಲಿ ಸೆಂಟಿಮೆಂಟ್​ ಅನ್ನು ಚೆನ್ನಾಗಿಯೇ ತೋರಿಸಿದ್ದಾರೆ. ಬಿಜಿಎಂ ಮತ್ತು ಪ್ರೊಡಕ್ಷನ್​ ವ್ಯಾಲ್ಯೂ ಕೂಡ ಚೆನ್ನಾಗಿದೆ ಎನ್ನಲಾಗಿದೆ. ಸೆಕೆಂಡ್​ ಹಾಫ್​ನಲ್ಲಿ ಕೆಲವು ದೋಷಗಳಿವೆ. ಆದರೆ, ಈ ಸಿನಿಮಾ ಖಂಡಿತ ಬ್ಲಾಕ್​ ಬಸ್ಟರ್​ ಹಿಟ್​ ಆಗುತ್ತೆ ಅನ್ನೋದು ರವಿತೇಜ ಅಭಿಮಾನಿಗಳ ನಿರೀಕ್ಷೆ.

ಇದನ್ನೂ ಓದಿ: ರವಿತೇಜ- ಗೋಪಿಚಂದ್ ಕಾಂಬಿನೇಷನ್​ನಲ್ಲಿ 4ನೇ ಸಿನಿಮಾ ಫಿಕ್ಸ್​; ಮೋಷನ್​ ಪೋಸ್ಟರ್​ ಔಟ್​

'ಟೈಗರ್​ ನಾಗೇಶ್ವರ ರಾವ್'​ ಸಿನಿಮಾವನ್ನು ವಂಶಿ ನಿರ್ದೇಶಿಸಿದ್ದಾರೆ. ಕಾರ್ತಿಕೇಯ-2, ದಿ ಕಾಶ್ಮೀರಿ ಫೈಲ್ಸ್​ನಂತಹ ಹಿಟ್​ ಚಿತ್ರಗಳನ್ನು ನೀಡಿರುವ ಅಭಿಷೇಕ್​ ಅಗರ್ವಾಲ್​ ತಮ್ಮದೇ ಅಭಿಷೇಕ್​ ಅಗರ್ವಾಲ್​ ಆರ್ಟ್ಸ್​​ನಡಿ ನಿರ್ಮಿಸುತ್ತಿದ್ದಾರೆ. ನಾಯಕಿಯಾಗಿ ನೂಪುರ್​ ಸನೋನ್​ ಮತ್ತು ಗಾಯತ್ರಿ ಭಾರದ್ವಾಜ್​ ನಟಿಸಿದ್ದಾರೆ. ಆರ್. ಮಧಿ ಛಾಯಾಗ್ರಹಣ, ಶ್ರೀಕಾಂತ್​ ವೀಸಾ ಸಂಭಾಷಣೆ, ವಿ.ಪ್ರಕಾಶ್​ ಕುಮಾರ್​​ ಸಂಗೀತ ನೀಡಿದ್ದಾರೆ. ಅವಿನಾಶ್​ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್​ ಸಿಂಘಾನಿಯಾ ಸಹ ನಿರ್ಮಾಣ ಮಾಡಿದ್ದಾರೆ.

ಚಿತ್ರಕಥೆ: 70ರ ಕಾಲಘಟ್ಟದ ಹೈದರಾಬಾದ್​ನ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದೆ. ಬಾಲಿವುಡ್​ ನಟ ಅನುಪಮ್​ ಖೇರ್​ ಕೂಡಾ ನಟಿಸಿದ್ದಾರೆ. ಮುರಳಿ ಶರ್ಮಾ ಹಾಗೂ ಅನುಪಮ್ ಖೇರ್ ಗುಪ್ತಚರ ಇಲಾಖೆಯ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಇಂದು ಚಿತ್ರ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: 'ಟೈಗರ್ ನಾಗೇಶ್ವರ ರಾವ್' ಚಿತ್ರದ ಟೀಸರ್​​ ರಿಲೀಸ್​: ರಗಡ್​ ಲುಕ್​ನಲ್ಲಿ ಮಾಸ್​ ಮಹಾರಾಜ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.