ETV Bharat / entertainment

ಬಹು ನಿರೀಕ್ಷಿತ 'ಟೈಗರ್ 3' ಟ್ರೇಲರ್​ ರಿಲೀಸ್​: ಸಲ್ಮಾನ್​ ಖಾನ್​ - ಇಮ್ರಾನ್ ಹಶ್ಮಿ ಮುಖಾಮುಖಿ - etv bharat kannada

Tiger 3 trailer out: ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಮುಖ್ಯಭೂಮಿಕೆಯ 'ಟೈಗರ್ 3' ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

Tiger 3 trailer X reaction: Salman Khan fans can't wait for epic face off with Emraan Hashmi, say prepare for some unheard numbers at Indian box office
ಬಹುನಿರೀಕ್ಷಿತ 'ಟೈಗರ್ 3' ಟ್ರೇಲರ್​ ರಿಲೀಸ್​: ಸಲ್ಮಾನ್​ ಖಾನ್​- ಇಮ್ರಾನ್ ಹಶ್ಮಿ ಮುಖಾಮುಖಿ
author img

By ETV Bharat Karnataka Team

Published : Oct 16, 2023, 3:43 PM IST

ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಮತ್ತು ನಟಿ ಕತ್ರಿನಾ ಕೈಫ್​ ತೆರೆ ಹಂಚಿಕೊಂಡಿರುವ ಚಿತ್ರ 'ಟೈಗರ್​ 3'. ಮುಂದಿನ ತಿಂಗಳು ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾದ ಟ್ರೇಲರ್​ ಇಂದು ಬಿಡುಗಡೆಯಾಗಿದೆ. ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ (YRF) ಯೂಟ್ಯೂಬ್​ ಚಾನೆಲ್​​ನಲ್ಲಿ ಟ್ರೇಲರ್​ ಹಂಚಿಕೊಳ್ಳಲಾಗಿದ್ದು, 3 ಗಂಟೆಯಲ್ಲಿ 5 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ.

ಮನೀಶ್ ಶರ್ಮಾ ನಿರ್ದೇಶನದ 'ಟೈಗರ್ 3' ಅನ್ನು ಯಶ್ ರಾಜ್ ಫಿಲ್ಮ್ಸ್ ಮೂಲಕ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್ ಮತ್ತು ಪಠಾಣ್​​ ಬಳಿಕ ಬಿಡುಗಡೆ ಆಗುತ್ತಿರುವ ಯಶ್​ ರಾಜ್​ ಫಿಲ್ಮ್ಸ್​ ನಿರ್ಮಾಣದ ಸ್ಪೈ ಯೂನಿವರ್ಸ್‌ನಲ್ಲಿ ಐದನೇ ಚಿತ್ರ ಇದು. 'ಪಠಾಣ್​' ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ಸಲ್ಮಾನ್​ ಖಾನ್​ ಅತಿಥಿ ಪಾತ್ರ ಮಾಡಿದ್ದರು. ಇದೀಗ ಟೈಗರ್​ 3ನಲ್ಲಿ ಕಿಂಗ್​ ಖಾನ್​ ಎಂಟ್ರಿಯೂ ಇರಲಿದೆ.

  • " class="align-text-top noRightClick twitterSection" data="">

ಟ್ರೇಲರ್​ ಹೇಗಿದೆ?: ಸದ್ಯ ಬಿಡುಗಡೆ ಆಗಿರುವ ಟ್ರೇಲರ್​ ಸಖತ್​ ಆಕ್ಷನ್​ ಥ್ರಿಲ್ಲರ್​ ಆಗಿದೆ. ಹ್ಯಾಪಿ, ಫೈಟಿಂಗ್​, ಎಮೋಷನಲ್​, ಫ್ಯಾಮಿಲಿ ಸೆಂಟಿಮೆಂಟ್​ ಎಲ್ಲವನ್ನೂ 3 ನಿಮಿಷದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಚಿತ್ರತಂಡ ತುಂಬಾ ಚೆನ್ನಾಗಿಯೇ ಮಾಡಿದೆ. ಸಲ್ಮಾನ್​ ಖಾನ್​ ಮಾಸ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಅತ್ಯುತ್ತಮ ಏಜೆಂಟ್​ ಆಗಿ ತನ್ನ ಕುಟುಂಬ ಮತ್ತು ದೇಶವನ್ನು ಕಾಪಾಡಿಕೊಳ್ಳುವ ರೀತಿಯನ್ನು ಆಕರ್ಷಕವಾಗಿದೆ. ಕತ್ರಿನಾ ಕೈಫ್​ ಅವರನ್ನು ಕೂಡ ಆ್ಯಕ್ಷನ್​​ ಸೀನ್​ಗಳಲ್ಲಿ ತೋರಿಸಿರುವುದು ತುಂಬಾ ಯುನಿಕ್​ ಆಗಿದೆ. ಇಮ್ರಾನ್​ ಹಶ್ಮಿ ಅವರು ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್​ ಅದ್ಭುತವಾಗಿ ಮೂಡಿ ಬಂದಿದ್ದು, ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ.

  • All time blockbuster loading 🔥🔥🔥

    — AI Verse (@AI_Vision_Verse) October 16, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಟೈಗರ್ 3: ಗರಿಗೆದರಿದ ಕುತೂಹಲ, ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್

ಟ್ರೇಲರ್​ ವೀಕ್ಷಕರ ಪ್ರತಿಕ್ರಿಯೆ: ​ಸಲ್ಮಾನ್​ ಖಾನ್​ಗೆ ಇಮ್ರಾನ್​ ಹಶ್ಮಿ ಮುಖಾಮುಖಿಯಾಗಿದ್ದಾರೆ. ಈ ಬಗ್ಗೆ ಉತ್ಸಾಹಕರಾಗಿ ಅಭಿಪ್ರಾಯ ಹಂಚಿಕೊಂಡಿರುವ ನೆಟ್ಟಿಗರು, 'ಟೈಗರ್​ಗೆ ಅಂತಿಮವಾಗಿ ಯೋಗ್ಯ ಎದುರಾಳಿ ಸಿಕ್ಕಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. "ಸಿನಿಮಾ ಬ್ಲಾಕ್​ಬಸ್ಟರ್​ ಆಗುವುದರಲ್ಲಿ ಸಂಶಯವಿಲ್ಲ. ಟ್ರೇಲರ್​ ಹಿನ್ನೆಲೆ ಧ್ವನಿ ಚೆನ್ನಾಗಿದೆ" ಎಂದಿದ್ದಾರೆ. ಜೊತೆಗೆ ಸಲ್ಮಾನ್​ ಖಾನ್​ ಅಭಿಮಾನಿಗಳು, ಟೈಗರ್​ 3 ಆ್ಯಕ್ಷನ್​ ಚಿತ್ರವು ಸುಲಭವಾಗಿ 1000 ಕೋಟಿ ರೂಪಾಯಿಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಐದನೇ ಬಾರಿ ಸ್ಕ್ರೀನ್​ ಶೇರ್ ಮಾಡಿದ ಸಲ್ಮಾನ್, ಕತ್ರಿನಾ: ಮನೀಶ್ ಶರ್ಮಾ ನಿರ್ದೇಶನ ಈ ಸಿನಿಮಾ ಯಶ್​ ರಾಜ್​ ಫಿಲ್ಮ್ಸ್​​ನ ಟೈಗರ್ ಫ್ರ್ಯಾಂಚೈಸಿಯ ಮೂರನೇ ಭಾಗ. ಐದನೇ ಬಾರಿ ಸಲ್ಮಾನ್ ಮತ್ತು ಕತ್ರಿನಾ ತೆರೆ ಮೇಲೆ ಒಂದಾಗಿದ್ದಾರೆ. ಸಲ್ಮಾನ್​, ಕತ್ರಿನಾ ಕೊನೆಯದಾಗಿ 2019ರಲ್ಲಿ ಬಂದ ಭಾರತ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅದಕ್ಕೂ ಮೊದಲು, ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ಪಾರ್ಟ್‌ನರ್‌ನಂತಹ ಹಿಟ್‌ ಚಿತ್ರಗಳನ್ನು ಈ ಜೋಡಿ ನೀಡಿದೆ. ಟೈಗರ್​ 3 ಚಿತ್ರವು ನವೆಂಬರ್​ 12ರಂದು ಮೂರು ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ.

  • Awesome Trailer
    Visuals and Production Values are Total Lit 🔥💥
    Quality and Camera angles and editing shots 🥵#Tiger3 is already a Blockbuster with The Trailer itself, Best Cut
    Surely We can say now that #Tiger3 will Hit 1000 crs without any Doubt 🔥🔥🔥

    — VINEETH𓃵🦖 (@sololoveee) October 16, 2023 " class="align-text-top noRightClick twitterSection" data=" ">

ಇದನ್ನೂ ಓದಿ: 'ಟೈಗರ್​ 3' ಟ್ರೇಲರ್ ಬಿಡುಗಡೆಗೆ ದಿನಗಣನೆ: ಕತ್ರಿನಾ ಕೈಫ್​ ಪೋಸ್ಟರ್ ಅನಾವರಣಗೊಳಿಸಿದ ಸಲ್ಮಾನ್​ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.