ETV Bharat / entertainment

ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಒಳ್ಳೆ ಕಥೆಯಿರುವ ಸಿನಿಮಾ: ಅನಂತ್ ನಾಗ್

ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಸಿನಿಮಾ ಕಥೆ ಹಿಡಿಸಿ ಅಭಿನಯಿಸಿದೆ ಎಂದು ನಟ ಅನಂತ್​​ ನಾಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

thimmaiah and thimmaiah movie trailer launch program
ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಟ್ರೈಲರ್ ಬಿಡುಗಡೆ ಕಾರ್ಯಕ್ರಮ
author img

By

Published : Nov 24, 2022, 7:17 PM IST

ತಮ್ಮ ಅಮೋಘ ಆಭಿನಯದ ಮೂಲಕ ಕನ್ನಡ ಸಿನಿಮಾರಂಗ ಅಲ್ಲದೇ ಇಡೀ ಭಾರತೀಯ ಚಿತ್ರರಂಗದ ಅಭಿಮಾನಿಗಳ ಮನ ಗೆದ್ದಿರುವ ನಟ ಅನಂತ್​​ ನಾಗ್. ಇವರ ಜತೆ ದೂದ್ ಪೇಡ ದಿಗಂತ್ ಸ್ಕ್ರೀನ್ ಹಂಚಿಕೊಂಡು ಹಿಟ್ ಜೋಡಿ ಅಂತಾ ಕರೆಸಿಕೊಂಡಿದೆ. ಇದೀಗ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದಲ್ಲಿ ಅನಂತ್ ನಾಗ್ ಮತ್ತು ದಿಗಂತ್ ತಾತ-ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಮಾತನಾಡಿರೋ ನಟ ಅನಂತ್ ನಾಗ್, ನನಗೆ ಮುಂಬೈನಿಂದ ನಿರ್ದೇಶಕ ಸಂಜಯ್ ಶರ್ಮ ಈ ಚಿತ್ರದ ಸ್ಕ್ರಿಪ್ಟ್ ಕಳುಹಿಸಿದ್ದರು. ಸ್ಕ್ರಿಪ್ಟ್ ಇಂಗ್ಲಿಷ್​ನಲ್ಲಿತ್ತು. ಓದುತ್ತ ಹೋದಾಗ, ಕಥೆ ತುಂಬಾ ಹಿಡಿಸಿತು. ಬೆಂಗಳೂರಿಗೆ ಬನ್ನಿ ಮಾತನಾಡೋಣ ಎಂದೆ. ಕರ್ನಾಟಕದವರೇ ಆದ ಸಂಜಯ್ ಶರ್ಮ ಮುಂಬೈನಲ್ಲಿ ಆ್ಯಡ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ನಿಜಕ್ಕೂ ಒಳ್ಳೆಯ ಕಥೆ ಮಾಡಿದ್ದಾರೆ. ಅವರ ತಮ್ಮ ರಾಜೇಶ್ ಶರ್ಮ ಈ ಸಿನಿಮಾ ನಿರ್ಮಾಣ‌ ಮಾಡಿದ್ದಾರೆ. ನಾನು ಈವೆರೆಗೂ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ ಎಂದರು.

thimmaiah and thimmaiah movie trailer launch program
ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಟ್ರೈಲರ್ ಬಿಡುಗಡೆ ಕಾರ್ಯಕ್ರಮ

ನಟ ದಿಗಂತ್ ಮಾತನಾಡಿ, ನನಗೆ ಸಂಜಯ್ ಅವರು ಈ ಕಥೆ ಹೇಳಿದಾಗ, ತಾತನ ಪಾತ್ರ ಅನಂತ್​ ನಾಗ್ ಅವರು ಮಾಡುತ್ತಾರೆ ಎಂದರು‌. ಈ ರೀತಿಯ ಪಾತ್ರ ಕೇವಲ ಅನಂತ್​​ ನಾಗ್ ಸರ್ ಅವರಿಂದ ಮಾತ್ರ ಮಾಡಲು ಸಾಧ್ಯ. ನಾನು ಅವರ ಜೊತೆಗೆ ಸಾಕಷ್ಟು ಚಿತ್ರದಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರವೂ ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು.

ದಿಗಂತ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರೂ ಕೂಡ ಈ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಎಲ್ಲರ ಗಮನ ಸೆಳೆಯಿತು. ದಿಗಂತ್ ಜೋಡಿಯಾಗಿ ಶುಭ್ರ ಅಯ್ಯಪ್ಪ ಹಾಗು ಐಂದ್ರಿತಾ ರೇ ಸೇರಿದಂತೆ ವಿನೀತ್, ಪ್ರಕಾಶ್ ತುಮ್ಮಿನಾಡು, ಸುನೀಲ್, ವೆಂಕಟೇಶ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರೋ ನಿರ್ದೇಶಕ ಸಂಜಯ್ ಶರ್ಮ ಮಾತನಾಡಿ, ನನಗೆ ಯೂರೋಪಿನಿಂದ ಒಂದು ಡಾಕ್ಯುಮೆಂಟರಿ ಮಾಡಲು ಆಫರ್ ಬಂದಿತ್ತು. ಆ ಸಮಯದಲ್ಲಿ ಎರಡು, ಮೂರು ಕಥೆಗಳು ನನಗೆ ಸಿಕ್ಕವು. ಅದರಲ್ಲಿ ತಾತ - ಮೊಮ್ಮಗನ ಬಾಂಧವ್ಯದ ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧಾರ ಮಾಡಿದೆವು. ತಾತನ ಪಾತ್ರವನ್ನು ಅನಂತನಾಗ್ ಸರ್ ಅವರ ಹತ್ತಿರ ಮಾಡಿಸಬೇಕೆಂಬ ಆಸೆಯಾಯಿತು. ಅವರು ಕಥೆ ಒಪ್ಪಿ ಅಭಿನಯಿಸಿದ್ದು ಖುಷಿಯ ವಿಚಾರ. ಮೊಮ್ಮಗನ ಪಾತ್ರ ಮಾಡಿರುವ ದಿಗಂತ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಅನೂಪ್ ಸೀಳಿನ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್ ಎಂದರು.

ಈ ಚಿತ್ರದ ನಿರ್ಮಾಪಕ ರಾಜೇಶ್ ಶರ್ಮಾ ಮಾತನಾಡಿ, ನಾನು ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ಬಂಕ್ ಹಾಕಿ, ಅನಂತ್​​ ನಾಗ್ ಅವರ ಸಿನಿಮಾಗಳನ್ನು ನೋಡುತ್ತಿದ್ದೆ. ಈಗ ಅವರ ಅಭಿನಯದ ಸಿನಿಮಾ‌ ನಿರ್ಮಾಣ ಮಾಡಿರುವುದು ನಿಜಕ್ಕೂ ಖುಷಿ ತಂದಿದೆ ಎಂದರು.

ಇದನ್ನೂ ಓದಿ: ಸಂಬಂಧಗಳನ್ನು ಗಟ್ಟಿಗೊಳಿಸುವ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಟ್ರೈಲರ್ ರಿಲೀಸ್

ಇನ್ನು, ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದ್ದು, ಬಾಲಕೃಷ್ಣ ತೋಟ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ಗುಣ ಅವರ ಕಲಾ ನಿರ್ದೇಶನ ಹಾಗೂ ದೀಕ್ಷಿತ್ ಕುಮಾರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಟ್ರೈಲರ್ ನಿಂದಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರೋ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರ ಗೆಲ್ಲುವ ಲಕ್ಷಣಗಳು ಕಾಣುತ್ತಿದೆ. ಈ ಚಿತ್ರ ಡಿಸೆಂಬರ್ 2ರಂದು ತೆರೆ ಕಾಣುತ್ತಿದ್ದು, ಅನಂತ್ ನಾಗ್ ಮತ್ತು ದಿಗಂತ್ ಜೋಡಿ ಸಿಲ್ವರ್ ಸ್ಕ್ರೀನ್ ಮೇಲೆ ಕಮಾಲ್ ಮಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.