ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಇದೀಗ, ಮಾರಕ ಕೊರೊನಾ ಸೋಂಕಿಗೆ ಮದ್ದು ಅರೆದ ಭಾರತದ ವಿಜ್ಞಾನಿಗಳ ಸಾಧನೆಯನ್ನು ಅನಾವರಣ ಮಾಡುವ 'ದಿ ವ್ಯಾಕ್ಸಿನ್ ವಾರ್' ಚಲನಚಿತ್ರ ತಯಾರಿಸಿದ್ದಾರೆ. ಸಿನಿಮಾವು 11 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸೆಪ್ಟಂಬರ್ 28 ರಂದು ತೆರೆ ಕಾಣಲಿದೆ. ಇದಕ್ಕೂ ಮುನ್ನ 'ದಿ ವ್ಯಾಕ್ಸಿನ್ ವಾರ್' ತಯಾರಕರು ಚಿತ್ರದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದಾರೆ.
-
PRESENTING:
— Vivek Ranjan Agnihotri (@vivekagnihotri) September 9, 2023 " class="align-text-top noRightClick twitterSection" data="
The first look of India’s first ever Bio-science film #TheVaccineWar.
Releasing worldwide on 28 September 2023. pic.twitter.com/svasq9XXtI
">PRESENTING:
— Vivek Ranjan Agnihotri (@vivekagnihotri) September 9, 2023
The first look of India’s first ever Bio-science film #TheVaccineWar.
Releasing worldwide on 28 September 2023. pic.twitter.com/svasq9XXtIPRESENTING:
— Vivek Ranjan Agnihotri (@vivekagnihotri) September 9, 2023
The first look of India’s first ever Bio-science film #TheVaccineWar.
Releasing worldwide on 28 September 2023. pic.twitter.com/svasq9XXtI
ಫಸ್ಟ್ ಲುಕ್ ಹೀಗಿದೆ.. 'ದಿ ವ್ಯಾಕ್ಸಿನ್ ವಾರ್' ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದೀಗ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ನಲ್ಲಿ ಹಿರಿಯ ನಟ ನಾನಾ ಪಾಟೇಕರ್, 'ದಿ ಕಾಶ್ಮೀರಿ ಫೈಲ್ಸ್' ಖ್ಯಾತಿಯ ನಟಿ ಪಲ್ಲವಿ ಜೋಶಿ, ಹಿರಿಯ ನಟ ಅನುಪಮ್ ಖೇರ್ ಮತ್ತು ಕಾಂತಾರ ಬ್ಯೂಟಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಸದ್ಯ 'ದಿ ವ್ಯಾಕ್ಸಿನ್ ವಾರ್' ಫಸ್ಟ್ ಲುಕ್ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದೆ.
ಶುದ್ಧ ವಿಜ್ಞಾನದ ಚಿತ್ರ: ಮಾರಕ ಕೊರೊನಾಕ್ಕೆ ಲಸಿಕೆ ತಯಾರಿಸಲು ನಮ್ಮ ವಿಜ್ಞಾನಿಗಳು ಹೇಗೆ ಲ್ಯಾಬ್‌ಗಳಲ್ಲೇ ಕಳೆದರು. ತ್ಯಾಗ ಬಲಿದಾನ ನಡೆಸಿದರು ಎಂಬುದೇ ಈ ಚಲನಚಿತ್ರವಾಗಿದೆ. ಯುವ ಪೀಳಿಗೆಯು ಈ 'ಶುದ್ಧ ವಿಜ್ಞಾನದ ವಿಜಯ'ದ ಸಿನಿಮಾವನ್ನು ನೋಡಬೇಕು ಎಂದು ನಾನು ಬಯಸುವೆ. ಕೋವಿಡ್ ನಿರ್ವಹಣೆ ಮತ್ತು ಫ್ರಂಟ್ ಲೈನ್ ವಾರಿಯರ್ಸ್, ಲಸಿಕೆಗಳ ಮೇಲೆ ಹೆಚ್ಚು ಗಮನಹರಿಸಿದ್ದೇವೆ ಎಂದು ವಿವೇಕ್ ರಂಜನ್ ಅಗ್ನಿಹೋತ್ರಿ ಈ ಹಿಂದೆ ತಿಳಿಸಿದ್ದರು. ಅಲ್ಲದೇ,'ದಿ ವ್ಯಾಕ್ಸಿನ್ ವಾರ್' ಚಿತ್ರವನ್ನು ಕೊರೊನಾಗೆ ಯಶಸ್ವಿಯಾಗಿ ಲಸಿಕೆ ಕಂಡುಹಿಡಿದ ಭಾರತೀಯ ವಿಜ್ಞಾನಿಗಳು ಮತ್ತು ವೈದ್ಯರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಬಾಲಿವುಡ್ಗೆ ಕಾಲಿಟ್ಟ 'ಕಾಂತಾರ' ನಟಿ: ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಸಪ್ತಮಿ ಗೌಡ
ಅಲ್ಲದೇ, ಭಾರತದ ಈ ಮಹಾನ್ ವೈಜ್ಞಾನಿಕ ಸಾಧನೆಯನ್ನು ವಿಶ್ವ ವೇದಿಕೆಯಲ್ಲಿ ಪ್ರದರ್ಶಿಸಲು ನಾನು ಬಯಸುವೆ. ಕೊರೊನಾ ಲಸಿಕೆ ಕಂಡು ಹಿಡಿಯುವ ವೇಳೆ ಭಾರತ ಮತ್ತು ಅಮೆರಿಕ ದೇಶಗಳ ಸಹಯೋಗ, ಸಹಕಾರ ಮತ್ತು ಪರಸ್ಪರ ತಿಳಿವಳಿಕೆ ಇತ್ತು. ಕೋವಿಡ್ ಅತ್ಯಧಿಕವಾಗಿದ್ದ ವೇಳೆ ಅಮೆರಿಕದಲ್ಲಿ ಹೆಚ್ಚಿನ ಸಾವು ನೋವುಗಳು ದಾಖಲಾದವು. ಜಗತ್ತೇ ಇತ್ತ ಕಡೆ ಗಮನಿಸುತ್ತಿತ್ತು. ಹೀಗಾಗಿ ಸಿನಿಮಾವನ್ನು ಇಲ್ಲಿಂದಲೇ ಆರಂಭಿಸುವುದು ಒಳ್ಳೆಯದು ಎಂದು ಭಾವಿಸಿದ್ದಾಗಿ ಹೇಳಿದ್ದರು.
ಸಿನಿಮಾವನ್ನು ಇಲ್ಲಿನ ಜನರಿಗೆ ತೋರಿಸಿ, ಅವರ ಪ್ರತಿಕ್ರಿಯೆಗಳನ್ನು ಪಡೆದುಕೊಂಡ ನಂತರ ಭಾರತದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದೇನೆ. ಚಿತ್ರ ಕೊರೊನಾ ಸೋಂಕಿನ ಹೊಡೆತ ಮತ್ತು ಅದಕ್ಕೆ ಭಾರತ ಸೇರಿದಂತೆ ಯಾವೆಲ್ಲ ದೇಶಗಳು ಮದ್ದು ಕಂಡು ಹಿಡಿದಿದ್ದರ ಬಗ್ಗೆ ಪ್ರಸ್ತುಪಡಿಸಲಿದೆ. ಅದರಲ್ಲೂ ನಮ್ಮ ದೇಶ ಲಸಿಕೆಯನ್ನು ಇತರ ಸಾಕಷ್ಟು ದೇಶಗಳಿಗೆ ನೀಡಿದ ಬಗ್ಗೆಯೂ ತೋರಿಸಲಾಗಿದೆ ಎಂದು ಅವರು ತಿಳಿಸಿದ್ದರು.
ಈ ಚಿತ್ರದಲ್ಲಿ, ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್, ರೈಮಾ ಸೇನ್, ಸಪ್ತಮಿ ಗೌಡ, ನಾನಾ ಪಾಟೇಕರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಶ್ಮೀರಿ ಫೈಲ್ಸ್ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ 11 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸೆಪ್ಟಂಬರ್ 28ರಂದು ತೆರೆ ಕಾಣಲಿದೆ.
ಇದನ್ನೂ ಓದಿ: 'ದಿ ವ್ಯಾಕ್ಸಿನ್ ವಾರ್' ಗ್ರ್ಯಾಂಡ್ ಕ್ಯಾಂಪೇನ್ ಫಿನಾಲೆಯಲ್ಲಿ ಕಥಕ್ ನೃತ್ಯದ ಝಲಕ್ - ವಿಡಿಯೋ