ETV Bharat / entertainment

The Trial trailer out: ಮೊದಲ ಬಾರಿಗೆ ವೆಬ್​ ಸಿರೀಸ್​ನಲ್ಲಿ ಮಿಂಚಲು ಸಿದ್ಧರಾದ ನಟಿ ಕಾಜೋಲ್​​ - ನಟಿ ಕಾಜೋಲ್​ ಕೂಡ ಇದೇ ಮೊದಲ ಬಾರಿಗೆ

ಬಾಲಿವುಡ್​ನ ಬ್ಯೂಟಿಫುಲ್ ನಟಿ ಕಾಜೋಲ್​ ಇದೀಗ ವಕೀಲೆಯಾಗಿ ಮೊದಲ ಬಾರಿಗೆ ವೆಬ್​ ಸಿರೀಸ್​ನಲ್ಲಿ ನಟಿಸುತ್ತಿದ್ದು, ಈ ಚಿತ್ರದ ಟ್ರೈಲರ್​​ ಬಿಡುಗಡೆಯಾಗಿದೆ.

The Trial trailer out: Actress Kajol is ready to shine in a web series for the first time

author img

By

Published : Jun 12, 2023, 5:22 PM IST

ಬೆಂಗಳೂರು: ನಟ ಅಜಯ್​ ದೇವಗನ್​ ಈಗಾಗಲೇ ಒಟಿಟಿಯ ಸಿರೀಸ್​ನಲ್ಲಿ ಮಿಂಚುತ್ತಿದ್ದಾರೆ. ಈ ನಡುವೆ ನಟಿ ಕಾಜೋಲ್​ ಕೂಡ ಇದೇ ಮೊದಲ ಬಾರಿಗೆ ಹೊಸ ವೆಬ್​ ಸರಣಿಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ದಿ ಟ್ರಯಲ್ - ಪ್ಯಾರ್​​. ಕೂನ್​. ದೋಖಾ ಒಟಿಟಿ ವೆಬ್​ ಸಿರೀಸ್​ನಲ್ಲಿ ಇದೇ ಪ್ರಥಮ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ದಿ ಟ್ರಯಲ್​ ವೆಬ್​ ಸಿರೀಸ್​ ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಪ್ರಸಾರವಾಗಲಿದ್ದು, ಇದರಲ್ಲಿ ವಕೀಲೆ ಪಾತ್ರಕ್ಕೆ ನಟಿ ಕಾಜೋಲ್​ ಬಣ್ಣ ಹಚ್ಚಲಿದ್ದಾರೆ. ನೊವೊನಿಕಾ ಸೇನ್​ ಗುಪ್ತಾ ಆಗಿ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ಕಾಜೋಲ್​ ಮದುವೆಯಾದ ಬಳಿಕ ವಕೀಲಿ ವೃತ್ತಿ ತೊರೆದಿರುತ್ತಾರೆ. ತಮ್ಮ ಗಂಡ ಸಾರ್ವಜನಿಕ ಹಗರಣ ಸಂಬಂಧ ಜೈಲು ಸೇರಿದಾಗ ಮತ್ತೆ ವಕೀಲಿ ವೃತ್ತಿ ಆರಂಭಿಸುವ ಕಥೆಯನ್ನು ಈ ಚಿತ್ರ ಹೊಂದಿದೆ.

ವೈವಾಹಿಕ ಜೀವನದಲ್ಲಿ ಗಂಡನಿಂದ ಮೋಸ ಹೋಗುವುದರಿಂದ ಈ ಚಿತ್ರದ ಟೀಸರ್​​ ಆರಂಭವಾಗುತ್ತದೆ. ನೊವೊನಿಕಾ ಗಂಡ ಜಿಶು ಸೇನ್​ಗುಪ್ತಾ ಎರಡನೇ ಜಡ್ಜ್​ ಆಗಿದ್ದು, ಲಂಚದ ರೂಪದಲ್ಲಿ ಲೈಂಗಿಕವಾಗಿ ತಮ್ಮ ಕಕ್ಷಿದಾರರ ಬಳಕೆ ಮಾಡುತ್ತಿರುತ್ತಾರೆ. ಆತನನ್ನು ಬಂಧಿಸುವ ಪೊಲೀಸರು ಜೈಲಿಗೆ ಅಟ್ಟುತ್ತಾರೆ. ಇದರಿಂದಾಗಿ ಒಬ್ಬಂಟಿಯಾದ ಕಾಜೋಲ್​ ಮಕ್ಕಳ ಭವಿಷ್ಯ ಮತ್ತು ಕುಟುಂಬ ಉಳಿಸಿಕೊಳ್ಳಲು ಜ್ಯೂನಿಯರ್​ ವಕೀಲೆಯಾಗಿ ವೃತ್ತಿ ಆರಂಭಿಸುತ್ತಾರೆ. ಹಲವು ವರ್ಷಗಳ ಬಳಿಕ ನ್ಯಾಯಾಲಯದ ಕೊಠಡಿ ಪ್ರವೇಶಿಸುವ ಆಕೆ ಕಡೆಗೆ ತನ್ನ ಗಂಡನ ಮನವಿ ಮೇರೆಗೆ ಹೇಗೆ ಆತನ ಪ್ರಕರಣವನ್ನು ನಡೆಸುತ್ತಾಳೆ ಎಂಬುದು ಈ ವೆಬ್​ ಸೀರಿಸ್​ ಕಥಾ ಹಂದರವಾಗಿದೆ.

ಇನ್ನು ಈ ವೆಬ್​ ಸಿರೀಸ್​ ಟೀಸರ್​ ಬಿಡುಗಡೆಗೆ ಮುನ್ನ ನಟಿ ಕಾಜೋಲ್​ ತಮ್ಮ ಸಾಮಾಜಿಕ ಜಾಲತಾಣಗಳಿಂದ ಹೊರ ಬಂದಿದ್ದು, ಸಾಕಷ್ಟು ಈ ಕುರಿತು ಟೀಕೆಗಳನ್ನು ಎದುರಿಸಿದ್ದಾರೆ. ತಮ್ಮ ಇನ್ಸ್​​ಟಾಗ್ರಾಂ ಖಾತೆಯನ್ನು ಡಿಲೀಟ್​ ಮಾಡಿರುವ ಅವರು, ನನ್ನ ಜೀವನದ ಕಷ್ಟವಾದ ಟ್ರಯಲ್​ ಎದುರಾಗಿದೆ ಎಂದು ಬರೆದಿದ್ದಾರೆ. ಯಾವ ಉದ್ದೇಶದಿಂದ ದೂರ ಉಳಿಯುತ್ತಿರುವುದಾಗಿ ಬಹಿರಂಗ ಪಡಿಸಿಲ್ಲ. ಇದರಿಂದ ಅವರ ಅಭಿಮಾನಿಗಳಿಂದ ಸಾಕಷ್ಟು ಪರ ಮತ್ತು ವಿರೋಧದ ಟೀಕೆಗಳನ್ನು ಎದುರಿಸಿದರು.

ಇನ್ನು ವೆಬ್​ ಸಿರೀಸ್​ ಕುರಿತು ಮಾತನಾಡಿರುವ ನಟಿ ಕಾಜೋಲ್​, ಮೂಲತಃ ಅಮೆರಿಕನ್​ ಟೆಲಿವಿಷನ್​ ಸೀರಿಸ್​ ಇದಾಗಿದೆ. 2009ರಲ್ಲಿ ತೆರೆಕಂಡ ಈ ಸೀಸನ್​ ಒಟ್ಟು ಏಳು ಸೀಸನ್​ ಒಳಗೊಂಡಿದೆ. ಈ ವೆಬ್​ ಸಿರೀಸ್​ನಲ್ಲಿ ಜೂಲಿಯನ್​ ಮರ್ಗುಲಿಸ್​​ ಪ್ರಮುಖ ಪಾತ್ರ ನಿರ್ವಹಣೆ ಮಾಡಿದ್ದಾರೆ.

ಇನ್ನು ಇದರ ಹೊರತಾಗಿ ನಟಿ ಕಾಜೋಲ್​ ಇದೀಗ ಲಸ್ಟ್​ ಸ್ಟೋರಿಸ್ 2​ ವೆಬ್​ ಸಿರೀಸ್​ನಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ನೆಟ್​ಫ್ಲಿಕ್ಸ್​​ನಲ್ಲಿ ತೆರೆಕಾಣಲಿರುವ ಈ ಲಸ್ಟ್​ ಸ್ಟೋರಿ 2 ಅಲ್ಲಿ, ನೀನಾ ಗುಪ್ತಾ, ತಮ್ಮನ್ನಾ ಭಟಿಯಾ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ನಟಿ ಕಾಜೋಲ್​ ಕಡೆಯದಾಗಿ ಸಲಾಂ ವೆಂಕಿ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ನಟ ಆಮೀರ್​ ಖಾನ್​ ಕೂಡ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Gadar 2 teaser: ಮತ್ತೆ ತಾರಾ ಸಿಂಗ್​ ಆಗಿ ಬರುತ್ತಿದ್ದಾರೆ ನಟ ಸನ್ನಿ ಡಿಯೋಲ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.