ETV Bharat / entertainment

ವಿವಾದಗಳ ನಡುವೆ ತೆರೆಕಂಡ 'ದಿ ಕೇರಳ ಸ್ಟೋರಿ' ಕಲೆಕ್ಷನ್ ಮತ್ತಷ್ಟು ಏರಿಕೆ..!​​ - ಸುದಿಪ್ತೋ ಸೇನ್

'ದಿ ಕೇರಳ ಸ್ಟೋರಿ' ಸಿನಿಮಾ 11 ದಿನಗಳಲ್ಲಿ ಸರಿಸುಮಾರು 150 ಕೋಟಿ ರೂ. ಕಲೆಕ್ಷನ್​​ ಮಾಡಿದೆ.

Kerala Story box office collection
ದಿ ಕೇರಳ ಸ್ಟೋರಿ ಕಲೆಕ್ಷನ್
author img

By

Published : May 16, 2023, 2:03 PM IST

ಸುದಿಪ್ತೋ ಸೇನ್ ನಿರ್ದೇಶನದ, ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. 2023ರ ಟಾಪ್ ಕಲೆಕ್ಷನ್ ಸಿನಿಮಾಗಳ​​ ಪಟ್ಟಿಯಲ್ಲಿ ಈ ಚಿತ್ರ ತನ್ನ ಸ್ಥಾನವನ್ನು ಭದ್ರಪಡಿಸಿಸಿಕೊಂಡಿದೆ. ಬಿಡುಗಡೆಗೂ ಮುನ್ನವೇ ಚಲನಚಿತ್ರವು ವಿವಾದಕ್ಕೊಳಗಾಯಿತು. ಈ ಚಿತ್ರಕಥೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ ಚಿತ್ರಮಂದಿರಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ. ಬಾಕ್ಸ್​​ ಆಫೀಸ್​ ಸಂಖ್ಯೆ ಏರಿಕೆ ಕಾಣುತ್ತಿದೆ. ಸಿನಿಮಾ ಈವರೆಗೆ 147.04 ಕೋಟಿ ಕಲೆಕ್ಷನ್​ ಮಾಡಿದೆ ಎಂದು ವ್ಯವಹಾರ ತಜ್ಞ ತರಣ್​​ ಆದರ್ಶ್​​ ಟ್ವೀಟ್ ಮಾಡಿದ್ದಾರೆ.

  • #TheKeralaStory is not slowing down soon… Hits double digits on [second] Mon, HIGHER than [first] Mon - ₹ 10.03 cr… All set to cross ₹ 150 cr today [second Tue]… [Week 2] Fri 12.35 cr, Sat 19.50 cr, Sun 23.75 cr, Mon 10.30 cr. Total: ₹ 147.04 cr. #India biz. #Boxoffice pic.twitter.com/yJ7V8dpQuV

    — taran adarsh (@taran_adarsh) May 16, 2023 " class="align-text-top noRightClick twitterSection" data=" ">

ಈ ಚಲನಚಿತ್ರವು ಶೀಘ್ರದಲ್ಲೇ 2023ರ ಎರಡನೇ ಅತಿ ಹೆಚ್ಚು ಗಳಿಕೆಯ ಬಾಲಿವುಡ್ ಚಲನಚಿತ್ರವಾಗಿ ಹೊರಹೊಮ್ಮುವ ಲಕ್ಷಣಗಳಿವೆ. ಬಾಲಿವುಡ್​ ಸೂಪರ್​ ಸ್ಟಾರ್​ಗಳಾದ ರಣ್​​​ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಮುಖ್ಯಭೂಮಿಕೆಯ, ಲವ್ ರಂಜನ್ ಅವರ ತು ಜೂಟಿ ಮೆ ಮಕ್ಕರ್‌ ಸಿನಿಮಾ ಕಲೆಕ್ಷನ್​​​ ಅನ್ನು ಶೀಘ್ರವೇ ಮೀರಿಸಲಿದೆ.

ಸಿನಿ ಉದ್ಯಮದ ಟ್ರ್ಯಾಕರ್ ಓರ್ವರ ಪ್ರಕಾರ, 'ದಿ ಕೇರಳ ಸ್ಟೋರಿ' ಬಿಡುಡೆ ಆದ ಬಳಿಕ ಎರಡನೇ ಸೋಮವಾರದಂದು 10 ಕೋಟಿ ರೂ ಗಳಿಸಿತು, ಚಿತ್ರದ ಒಟ್ಟು ಕಲೆಕ್ಷನ್ ಸುಮಾರು 146.74 ಕೋಟಿ ರೂ. ಆಗಿದೆ. ಸಿನಿಮಾದ ಎರಡನೇ ವಾರಾಂತ್ಯ ಕೂಡ ಬಾಕ್ಸ್ ಆಫೀಸ್​​ನಲ್ಲಿ ಮೊದಲ ವಾರಾಂತ್ಯಕ್ಕಿಂತ ಉತ್ತಮವಾಗಿತ್ತು. ಮೊದಲ ಶನಿವಾರದ ಗಳಿಕೆ 11.22 ಕೋಟಿ ರೂಪಾಯಿ. ಅದಕ್ಕೆ ಹೋಲಿಸಿದರೆ, ಎರಡನೇ ಶನಿವಾರದಂದು 19.50 ಕೋಟಿ ರೂ. ಗಳಿಸಿದೆ. ಕಳೆದ ಭಾನುವಾರ 16.40 ಕೋಟಿ ರೂ. ಗಳಿಸಿತ್ತು. ಈ ಭಾನುವಾರದಂದು 23.75 ಕೋಟಿ ರೂ. ಸಂಪಾದಿಸಿದೆ ಎಂದು ಹೇಳಿದ್ದಾರೆ. ಚಿತ್ರ ತೆರೆಕಂಡು 11 ದಿನಗಳಾಗಿದ್ದು, ದಿನೇ ದಿನೆ ಕಲೆಕ್ಷನ್​ ಸಂಖ್ಯೆ ಏರುತ್ತಿದೆ. ಸಿನಿಮಾ ಉತ್ತಮ ಪ್ರದರ್ಶನ ಕಾಣುವುದನ್ನು ಮುಂದುವರಿಸಿದೆ.

ಇದನ್ನೂ ಓದಿ: ಹೆಲ್ಮೆಟ್​​ ಇಲ್ಲದೇ ಸೆಲೆಬ್ರಿಟಿಗಳ ಬೈಕ್​​ ರೈಡ್: ಅಮಿತಾಭ್​​ ಬಳಿಕ ಕೊಹ್ಲಿ ಪತ್ನಿ ಅನುಷ್ಕಾ ವಿರುದ್ಧ ಪೊಲೀಸ್​​ ಕ್ರಮ!

ತರಣ್ ಆದರ್ಶ್ ಪ್ರಕಾರ, ವರ್ಷದ ಮೊದಲ ಐದು ತಿಂಗಳಲ್ಲಿ ಯಶಸ್ಸನ್ನು ನೀಡಲು ಹೆಣಗಾಡುತ್ತಿರುವ ಹಿಂದಿ ಚಲನಚಿತ್ರೋದ್ಯಮಕ್ಕೆ 'ಕೇರಳ ಸ್ಟೋರಿ'ಯ ಗಲ್ಲಾಪೆಟ್ಟಿಗೆಯ ಸಾಧನೆ ಸ್ಫೂರ್ತಿ ಕೊಟ್ಟಿದೆ. ಬಾಲಿವುಡ್​ ಕಿಂಗ್​​ ಶಾರುಖ್ ಖಾನ್ ಅವರ ಪಠಾಣ್​​ ಸಿನಿಮಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಲು ಸಾಧ್ಯವಾಯಿತು. ಬಳಿಕ ತೂ ಜೂಟಿ ಮೆ ಮಕ್ಕರ್ ಸಿನಿಮಾ ಪಠಾಣ್‌ನಷ್ಟು ಯಶಸ್ವಿಯಾಗದಿದ್ದರೂ, ಅದು ಪ್ರೇಕ್ಷಕರನ್ನು ಆಕರ್ಷಿಸಿತು. 149.05 ಕೋಟಿ ರೂಪಾಯಿಗಳನ್ನು ಸಂಪಾದಿಸುವಲ್ಲಿ ಯಶಸ್ವಿ ಆಯಿತು.

ಇದನ್ನೂ ಓದಿ: 'ದಿ ಕೇರಳ ಸ್ಟೋರಿ' ಚಿತ್ರದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಐವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಗಾಯ

ಸಿನಿಮಾವನ್ನು ಒಂದಿಷ್ಟು ಮಂದಿ ಮೆಚ್ಚಿಕೊಂಡಿದ್ದರೆ, ಮತ್ತೊಂದಿಷ್ಟು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ 'ದಿ ಕೇರಳ ಸ್ಟೋರಿ' ವಿಚಾರವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವೆಡೆ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು ಕಾಶ್ಮೀರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ವೊಂದರಲ್ಲಿ ಇದೇ ಸಿನಿಮಾ ವಿಚಾರವಾಗಿ ಗಲಾಟೆ ನಡೆದಿದೆ. ಐವರು ವೈದ್ಯಕೀಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.