ETV Bharat / entertainment

2023ರಲ್ಲಿ ಅತಿ ಹೆಚ್ಚು ಕಲೆಕ್ಷನ್​​ ಮಾಡಿದ 2ನೇ ಹಿಂದಿ ಸಿನಿಮಾ 'ದಿ ಕೇರಳ ಸ್ಟೋರಿ'

'ದಿ ಕೇರಳ ಸ್ಟೋರಿ' ಸಿನಿಮಾ ಈವರೆಗೆ 230.44 ಕೋಟಿ ರೂ. ಕಲೆಕ್ಷನ್ ಮಾಡಿದೆ.

The Kerala Story
ದಿ ಕೇರಳ ಸ್ಟೋರಿ
author img

By

Published : Jun 1, 2023, 10:30 AM IST

ಸಾಕಷ್ಟು ವಿವಾದಗಳ ನಡುವೆಯೂ ಸುದಿಪ್ತೋ ಸೇನ್​ ನಿರ್ದೇಶನದ 'ದಿ ಕೇರಳ ಸ್ಟೋರಿ' ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಬಾಕ್ಸ್​ ಆಫೀಸ್​ ಸಂಖ್ಯೆ ದಿನೇ ದಿನೆ ಏರುತ್ತಿದೆ. 2023ರ ಯಶಸ್ವಿ ಚಿತ್ರಗಳ ಪೈಕಿ 'ದಿ ಕೇರಳ ಸ್ಟೋರಿ' ಅಗ್ರ ಕ್ರಮಾಂಕದಲ್ಲಿದೆ.

ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ದಿ ಕೇರಳ ಸ್ಟೋರಿ ಈ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ. ಚಿತ್ರವು ಮೇ. 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವೆಡೆ ಆಕ್ರೋಶವೂ ಭುಗಿಲೆದ್ದಿತ್ತು. ಆದ್ರೆ ಬಾಕ್ಸ್​ ಆಫೀಸ್​ ಸಂಖ್ಯೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಸಿನಿಮಾ ತೆರೆಕಂಡ 27ನೇ ದಿನಕ್ಕೆ ಒಟ್ಟು ಸಂಗ್ರಹ 230 ಕೋಟಿ ರೂ. ದಾಟಿದೆ. ಈ ಮೂಲಕ 2023ರ ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ. ಬಾಲಿವುಡ್​ ನಟ ಶಾರುಖ್​ ಖಾನ್​ ಅಭಿನಯದ ಪಠಾಣ್​ ಸಿನಿಮಾ ಕೂಡ ವಿವಾದಗಳನ್ನು ಎದುರಿಸಿ, 1,000 ಕೋಟಿ ರೂ. ಸಂಗ್ರಹಿಸುವಲ್ಲಿ ಯಶಸ್ವಿ ಆಗಿತ್ತು. ಪಠಾಣ್​​ 2023ರ ಮೊದಲ ಯಶಸ್ವಿ ಚಲನಚಿತ್ರ.

ಸುದೀಪ್ತೋ ಸೇನ್ ನಿರ್ದೇಶನದ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೂ ಮುನ್ನ ವಿವಾದಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಕಲೆಕ್ಷನ್​ ಮೇಲೆ ಅನುಮಾನವಿತ್ತು. ಆದ್ರೀಗ ಕೇವಲ 27 ದಿನಗಳಲ್ಲಿ 230 ಕೋಟಿ ರೂ. ಬಾಚಿದೆ. ಅನೇಕ ವಿವಾದಗಳ ಹೊರತಾಗಿಯೂ, ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಯಶಸ್ವಿಯಾಗಿದೆ. 'ದಿ ಕೇರಳ ಸ್ಟೋರಿ'ಯ ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್ ನಿಧಾನವಾಗಿದ್ದರೂ, ಚಿತ್ರಮಂದಿರಗಳಲ್ಲಿ ಓಟ ಮುಂದುವರಿಸಿದೆ. ಮತಾಂತರದಂತಹ ಗಂಭೀರ ವಿಷಯವನ್ನು ಆಧರಿಸಿದ ಈ ಚಿತ್ರ ನೈಜ ಘಟನೆ ಆಧಾರಿತ ಎಂದು ಚಿತ್ರತಂಡ ಹೇಳಿದೆ.

18ನೇ ದಿನಕ್ಕೆ ಚಿತ್ರ 200 ಕೋಟಿ ರೂ. ಗಡಿ ದಾಟುವಲ್ಲಿ ಯಶಸ್ವಿಯಾಗಿತ್ತು. ಆದರೆ, ಆ ನಂತರದ ದಿನಗಳಲ್ಲಿ ಸಿನಿಮಾ ಸಂಗ್ರಹ ಸಂಖ್ಯೆ ನಿಧಾನವಾಯಿತು. ವ್ಯಾಪಾರ ವಹಿವಾಟಿನ ಅಂದಾಜಿನ ಪ್ರಕಾರ, ಮೇ 31. ರಂದು (27ನೇ ದಿನದಂದು) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 1.80 ಕೋಟಿ ರೂ. ಗಳಿಸಿತು. ಇದರೊಂದಿಗೆ 'ದಿ ಕೇರಳ ಸ್ಟೋರಿ' ಚಿತ್ರದ ಒಟ್ಟು ಕಲೆಕ್ಷನ್ ಈಗ 230.44 ಕೋಟಿ ರೂ. ಆಗಿದೆ.

ಇದನ್ನೂ ಓದಿ: ಶ್ರೀಲಂಕಾ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸೂಪರ್​ಸ್ಟಾರ್​ ರಜನಿಕಾಂತ್‌ಗೆ ಆಹ್ವಾನ

ಚಿತ್ರಕಥೆ ಏನು?: ಯುವತಿಯರನ್ನು ಇಸ್ಲಾಂಗೆ ಮತಾಂತರಗೊಳ್ಳಲು ಬ್ರೈನ್‌ವಾಶ್ ಮಾಡಿ ಸಿರಿಯಾಕ್ಕೆ ಕಳುಹಿಸಲ್ಪಟ್ಟ ಮೂವರು ಮಹಿಳೆಯರ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ಐಸಿಸ್ ಭಯೋತ್ಪಾದಕ ಸಂಘಟನೆಗೆ ಮಹಿಳೆಯರನ್ನು ಬಲವಂತವಾಗಿ ಸೇರಿಸಿದ ವಿಷಯವನ್ನು ಚಿತ್ರದ ಕಥೆ ಆಧರಿಸಿದೆ. ಸುದೀಪ್ತೋ ಸೇನ್ ನಿರ್ದೇಶನದ ಸಿನಿಮಾವನ್ನು ವಿಪುಲ್ ಅಮೃತ್​ ಲಾಲ್ ಶಾ ನಿರ್ಮಿಸಿದ್ದಾರೆ. ಟ್ರೇಲರ್ ಬಿಡುಗಡೆಯಾದಾಗಿನಿಂದಲೂ 'ದಿ ಕೇರಳ ಸ್ಟೋರಿ' ಪ್ರಶ್ನೆಗಳ, ಪರ ವಿರೋಧ ಚರ್ಚೆಗಳ ವಲಯದಲ್ಲಿದೆ.

ಇದನ್ನೂ ಓದಿ: ನೀವು ಎಷ್ಟು ದಿನ ದ್ವೇಷ ಹರಡುತ್ತೀರಿ?: 'ದಿ ಕೇರಳ ಸ್ಟೋರಿ' ಬಗ್ಗೆ ಪ್ರಸಿದ್ಧ ನಟ ಹೇಳಿದ್ದಿಷ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.